ದೇವಸ್ಥಾನದ ಜೀರ್ಣೋದ್ಧಾರ
ಲಕ್ಷೆö್ಮÃಶ್ವರ,ಆ ೩: ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ದೇವಸ್ಥಾನಗಳು, ದೇವರ ಬಗ್ಗೆ ಅಪಾರ ಗೌರವವಿದೆ, ಇವುಗಳು ನಮ್ಮ ಸಂಸ್ಕೃತಿಯ ಪ್ರತೀಕಗಳಾಗಿದ್ದು ಅವುಗಳ ಅಸ್ತಿತ್ವ ಉಳಿಸಿಕೊಂಡು ಹೋಗುವದು ಸಮಾಜದ ಎಲ್ಲರ ಕರ್ತವ್ಯವಾಗಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಅಭಿಪ್ರಾಯಪಟ್ಟರು.
ಅವರು ಸಮೀಪದ ಅಡರಕಟ್ಟಿ ಗ್ರಾಮದ ಶ್ರೀ ಬೂದಿವಂತ ಬಸವೇಶ್ವರ ದೇವಸ್ಥಾನದ ಜೀರ್ಣೋದ್ದಾರ ಕಾಮಗಾರಿಗೆ ಮರು ಚಾಲನೆ ನೀಡಿ ಮಾತನಾಡಿದರು. ದೇವಸ್ಥಾನಗಳು ಸರಿಯಾದ ನಿರ್ವಹಣೆ ಇಲ್ಲದೆ ನಸಿಸಿ ಹೋಗುತ್ತಿದ್ದು, ಇದರಿಂದ ಆ ದೇವಸ್ಥಾನದ ಮಹಿಮೆಯ ಜೊತೆಗೆ ಆಯಾ ಪ್ರದೇಶದ ಮಹತ್ವಗಳು ಸಹ ಅಳಿಸಿ ಹೋಗುವಂತಾಗಬಹುದು, ಅದಕ್ಕಾಗಿ ದೇವಸ್ಥಾನಗಳನ್ನು ರಕ್ಷಿಸಿಕೊಂಡು ಹೋಗುವದಕ್ಕೆ ಆದ್ಯತೆ ನೀಡಬೇಕು. ಕಳೆದ ೮ ವರ್ಷಗಳ ಹಿಂದೆ ಈ ದೇವಸ್ಥಾನದ ಮುಖ್ಯಸ್ಥರು ಹಾಗೂ ಪ್ರಧಾನ ಅರ್ಚಕರಾಗಿರುವ ಶ್ರೀಶೈಲ ಮಹಾಸ್ವಾಮಿಗಳ ಇಚ್ಚೆಯ ಮೇರೆಗೆ ದೇವಸ್ಥಾನ ಜೀರ್ಣೋದ್ದಾರಕ್ಕೆ ಅನುಧಾನ ನೀಡಲಾಗಿತ್ತು, ಆದರೆ ಕಾರಣಾಂತರಗಳಿAದ ಕಾಮಗಾರಿ ನಿಂತು ಹೋಗಿತ್ತು, ಇದು ನನಗೂ ಬೇಸರದ ಸಂಗತಿಯಾಗಿತ್ತು, ಪ್ರತಿವರ್ಷ ನಾನು ಇಲ್ಲಿಗೆ ಬಂದು ಹೋಗುತ್ತಿದ್ದು, ಕಳೆದ ೩ ವರ್ಷಗಳಿಂದ ಈ ದೇವಸ್ಥಾನಕ್ಕೆ ಬೇಟಿ ಮಾಡುವದು ಸಾಧ್ಯವಾಗಿರಲಿಲ್ಲ. ಇದೀಗ ಮತ್ತೆ ಕಾಲ ಕೂಡಿ ಬಂದಿದ್ದು, ದೇವಸ್ಥಾನದ ಕಾಮಗಾರಿಯನ್ನು ಪೂರ್ಣಗೊಳಿಸುವ ಭರವಸೆ ನೀಡಿದ್ದೇನೆ. ಅಧಿಕಾರ ಶಾಶ್ವತವಲ್ಲ ನಾವು ಮಾಡುವ ಕಾರ್ಯ ಶಾಶ್ವತವಾಗಿರುತ್ತವೆ ಎನ್ನುವದು ನನ್ನ ಅಭಿಪ್ರಾಯವಾಗಿದೆ ಎಂದರು.
ಈ ಭಾಗದಲ್ಲಿ ಅನಾವೃಷ್ಟಿಗೊಳಗಾಗಿರುವ ಪ್ರದೇಶಗಳನ್ನು ಬೇಟಿ ನೀಡಿ ಪರಿಶೀಲನೆ ನಡೆಸಲು ಐದು ತಂಡಗಳನ್ನು ರಚಿಸಲಾಗಿದ್ದು ಆಗಿರುವ ಹಾನಿಯನ್ನು ಪರಿಶೀಲಿಸಿ ಸಮಗ್ರ ವರದಿಯನ್ನು ಮುಖ್ಯಮಂತ್ರಿಗಳಿಗೆ ನೀಡುವ ಮೂಲಕ ರೈತರಿಗೆ ಪರಿಹಾರ ನೀಡುವಂತೆ ಮನವಿ ಮಾಡುವದಾಗಿ ಹೇಳಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಮುಖ್ಯಸ್ಥರು ಹಾಗೂ ಪ್ರಧಾನ ಅರ್ಚಕರಾಗಿರುವ ಶ್ರೀಶೈಲ ಮಹಾಸ್ವಾಮಿಗಳು ಮಾತನಾಡಿ ಶ್ರೀರಾಮುಲು ಅವರ ಇಚ್ಚೆಯಂತೆ ದೇವಸ್ಥಾನವು ಜೀರ್ಣೋದ್ದಾರ ಕಾರ್ಯ ನಡೆಯುತ್ತಿದೆ, ಅನಿವಾರ್ಯ ಕಾರಣಗಳಿಂದ ನಿಂತು ಹೋಗಿತ್ತು. ಆದರೆ ಇದೀಗ ಮತ್ತೆ ಕಾಮಗಾರಿ ಪ್ರಾರಂಭವಾಗಲಿದ್ದು, ದೇವರ ಇಚ್ಚೆಯಂತೆ ಶ್ರೀರಾಮುಲು ಅವರು ಮತ್ತೆ ಅಧಿಕಾರಕ್ಕೆ ಬರುತ್ತಾರೆ ಎಂದು ನುಡಿದರು. ಮಾಜಿ ಶಾಸಕ ರಾಮಣ್ಣ ಲಮಾಣಿ, ಮುಖಂಡರಾದ ನಾಗರಾಜ ಕುಲಕರ್ಣಿ, ಮಂಡಳ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಿವಪುತ್ರಯ್ಯ ಹಿರೇಮಠ, ರಾಮಣ್ಣ ಚಿಕ್ಕಣ್ಣವರ, ವಿಜಯ ಹತ್ತಿಕಾಳ, ನಿಂಗಪ್ಪ ಬನ್ನಿ, ನಿಂಗಪ್ಪ ಪ್ಯಾಟಿ, ಅನಿಲ ಮುಳಗುಂದ, ಮುದಿಯಪ್ಪ ಹವಳದ, ನಾಗರಾಜ ಸೊನ್ನ, ಪ್ರಕಾಶ ಬೆಂತುರ, ಭೀಮಣ್ಣ ಯಂಗಾಡಿ, ಹನುಮಂತ ಜಾಲಿಮರದ ಮುಂತಾದವರಿದ್ದರು.