ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು
ಗುಳೇದಗುಡ್ಡ,ಆ೩ : ಇಂದು ಭಾರತವು ಕ್ರೀಡಾ ಜಗತ್ತಿನಲ್ಲಿ ಒಳ್ಳೆಯ ಸಾಧನೆ ಮಾಡುತ್ತಿದೆ. ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ನಲ್ಲಿ ಮನು ಬಾಕರ್ ಅವರು ಎರಡು ಕಂಚಿನ ಪದಕ ಪಡೆದು ಭಾರತದ ಕೀರ್ತಿ ಹೆಚ್ಚಿಸಿದ್ದು ಯುವಕರಿಗೆ ಸ್ಪೂರ್ತಿ ತುಂಬಿದೆ. ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ಗುರುತಿಸಿಕೊಂಡು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಪಿಇ ಟ್ರಸ್ಟ್ನ ಚೇರಮನ್ ಕಮಲಕಿಶೋರ ಭಂಡಾರಿ ಹೇಳಿದರು.
ಅವರು ಪಟ್ಟಣದ ಭಂಡಾರಿ ಕಾಲೇಜಿನಲ್ಲಿ ೨೦೨೪ ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳನ್ನು ಭಾಗವಹಿಸುವ ಮೂಲಕ ಉತ್ತಮ ಆರೋಗ್ಯ ಪಡೆದು ದೈಹಿಕವಾಗಿ ಸದೃಢಗೊಳ್ಳಬೇಕು ಎಂದರು.
ಪ್ರಾಚಾರ್ಯ ಡಾ. ಎನ್. ವೈ. ಬಡಣ್ಣವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಗೌರವ ಕಾರ್ಯದರ್ಶಿ ರವೀಂದ್ರ ಪಟ್ಟಣಶೆಟ್ಟಿ, ಪುರುಷೋತ್ತಮ ಝಂವಾರ, ಸಿದ್ದರಾಮಯ್ಯ ಪುರಾಣಿಕಮಠ, ಡಾ. ಎಂ. ಎಸ್. ಪಾಟೀಲ್, ಡಾ ಸುರೇಖಾ ಯಂಡಿಗೇರಿ, ಪ್ರೊ ಪಿ. ಬಿ. ಕಣವಿ, ಡಾ ಚಿದಾನಂದ ನಂದಾರ, ಪೂರ್ಣಿಮಾ ಗಿಡವೀರ, ಈರಣ್ಣ ಅಲದಿ ಇದ್ದರು.
ಪದ್ಯಾವಳಿಯಲ್ಲಿ ಪಿಜಿ ಬಾಯ್ಸ್, ಬಿಎಸ್ಸಿ ರೈಡರ್ಸ್, ಬಿ. ಎ. ಸ್ಟೈಕರ್ಸ, ವಿಕ್ಟೋರಿ ವೈಪರ್ಸ್, ಪೈಂಟ್ ಹಂಟರ್, ವಿರಾಟ್ ೧೮, ರಾಯಲ್ ಚಾಲುಕ್ಯ ಬಾಯ್ಸ್ ಮುಂತಾದ ತಂಡಗಳು ಭಾಗವಹಿಸಿದ್ದವು.