ಸದಾಶಿವ ಆಯೋಗದ ವರದಿ ಕೂಡಲೇ ಅನುಷ್ಟಾನಕ್ಕೆ ದಲಿತ ಸಂಘಟನೆಗಳ ಒಕ್ಕೂಟ ಒತ್ತಾಯ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಅ,3- ಪರಿಶಿಷ್ಟ ಜಾತಿಗಳಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು ನಡೆಸಿದ ಹೋರಾಟಕ್ಕೆ ಸುಪ್ರೀಂ ಕೋರ್ಟ್ ಒಳ ಮೀಸಲಾತಿ ನೀಡಲು ನೀಡಿರುವ ತೀರ್ಪು ನಮಗೆಲ್ಲ ಸಂತಸ ತಂದಿದ್ದು. ರಾಜ್ಯ ಸರ್ಕಾರ ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೆ ತರಬೇಕೆಂದು ದಲಿತ ಸಂಘಟನೆಗಳ ಒಕ್ಕೂಟ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದೆ.
ಒಕ್ಕೂಟದ ಮುಖಂಡರು ಇಂದು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ. ಮೀಸಲಾತಿ ವರ್ಗೀಕರಣ ಮಾಡಲು ಆಯಾ ರಾಜ್ಯ ಸರ್ಕಾರಗಳೇ ಮಾಡಬಹುದು ಎಂದು ತೀರ್ಪು ನೀಡಿದೆ. ಇದರಿಂದ ಅತಿ ಶೋಷಿತ ಮಾದಿಗ ಸಮುದಾಯಕ್ಕೆ ನ್ಯಾಯದೊರೆತಂತಾಗಿದೆ.
ಈ ಹಿಂದೆ ಬಸವರಾಜ ಬೊಮ್ಮಾಯಿಯವರ ಸರ್ಕಾರ ಒಳಮೀಸಲಾತಿ ನೀಡಲು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು. ಈಗ ಈ ತೀರ್ಪು ಬಂದಿರುವುದರಿಂದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಒಳ‌ಮೀಸಲಾತಿ ಜಾರಿಗೆ ಸದಾಶಿವ ಆಯೋಗದ  ವರದಿಯನ್ನು ಅನುಷ್ಟಾನಕ್ಕೆ ತರಬೇಕು ಎಂದು ಆಗ್ರಹಿಸಿದರು.‌
ಕೆನೆಪದರ ಮೀಸಲಾತಿ ಅಂದರೆ ಈಗಾಗಲೇ ಮೀಸಲಾತಿ‌ ಪಡೆದು ಆದಾಯದಿಂದ ಮೇಲ್ಮಟ್ಟದಲ್ಲಿರುವವರಿಗೆ ಮೀಸಲಾತಿಯಿಂದ ಹೊರಗಿಡುವ ಬಗ್ಗೆಯೂ ತೀರ್ಪಿನಲ್ಲಿ ಚರ್ಚೆ ನಡೆದಿದೆ. ಆದರೆ ಇದರ ಅನುಷ್ಟಾನದ ಅವಶ್ಯಕತೆ ಸಧ್ಯ ಬೇಕಾಗಿಲ್ಲ ಎಂದರು.
ಸುದ್ದಿಗೋಷ್ಟಿಯಲ್ಲಿ ದಲಿತಪರ ಸಂಘಟನೆಗಳ ಒಕ್ಕೂಟ ಎ.ಕೆ.ಹುಲುಗಪ್ಪ, ದುರ್ಗಪ್ಪ ತಳವಾರ, ಎ.ಈಶ್ವರಪ್ಪ,  ಎ.ಕೆ.ಗಂಗಾಧರ, ವೆಂಕಟೇಶ್ ಮೂರ್ತಿ, ಚಿಕ್ಕ ಗಾದಿಲಿಂಗಪ್ಪ, ಹೆಚ್. ಹುಸೇನಪ್ಪ, ಶಿವಣ್ಣ, ವೀರಸ್ವಾಮಿ, ಎಸ್. ನೆಟ್ಟಪ್ಪ ಹೆಚ್.ಆಂಜನೇಯ, ಹೆಚ್.ರಮೇಶ್ ಮೊದಲಾದವರು ಇದ್ದರು‌