ಹಾರಕೂಡ ಶ್ರೀಮಠದಲ್ಲಿ ಸಿ.ಸಿ ರಸ್ತೆ ಕಾಮಗಾರಿಗೆ ಚಾಲನೆ
ಬೀದರ್:ಆ.3: ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಸುಕ್ಷೇತ್ರ ಹಾರಕೂಡ ಸಂಸ್ಥಾನ ಹಿರೇಮಠದ ಆವರಣದಲ್ಲಿ ನಿರ್ಮಾಣಗೊಳ್ಳಲಿರುವ ಸಿ.ಸಿ. ರಸ್ತೆ ಕಾಮಗಾರಿಗೆ ಶ್ರೀಮಠದ ಪೀಠಾಧಿಪತಿ ಪೂಜ್ಯ ಡಾ. ಚನ್ನವೀರ ಶಿವಾಚಾರ್ಯರ ಸನ್ನಿಧಿಯಲ್ಲಿ ತಾಲೂಕಿನ ಶಾಸಕ ಶರಣು ಸಲಗರ ಚಾಲನೆ ನೀಡಿದರು.
ಮಲ್ಲಿನಾಥ ಹಿರೇಮಠ ಹಾರಕೂಡ, ಮುಖಂಡರಾದ ಮೇಘರಾಜ ನಾಗರಾಳೆ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ, ಎಇಇ ಧನರಾಜ ಚೌವ್ಹಾಣ, ಂe ಕೆ.ಬಿ. ಕಟ್ಟಿಮನಿ, ವಿಜಯಕುಮಾರ ಸಂಗೋಳಗೆ, ಆನಂದರಾವ ಝಳಕೆ, ಅಪ್ಪಣ್ಣ ಡಾವರೆ, ಬಾಲಾಜಿ ಬಿರಾದಾರ, ಈಶ್ವರಯ್ಯ ಮಠಪತಿ, ಅಪ್ಪಣ್ಣ ಜನವಾಡ, ಮಾಧುರಾಯ ಕೆರಗೋಟೆ, ನಾಗಣ್ಣ ಪೀರಜೆ, ಕಾರ್ತಿಕ ಸ್ವಾಮಿ ಯಲದಗುಂಡಿ, ಗುರು ದೇಗಾಂವ ಮುಂತಾದವರು ಉಪಸ್ಥಿತರಿದ್ದರು.
ಈ ಕಾಮಗಾರಿಯು ಲೋಕೋಪಯೋಗಿ ಇಲಾಖೆಯಿಂದ 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ.