ಆ.13ರಂದು 371(ಜೆ) ಸಮರ್ಪಕ ಅನುಷ್ಟಾನ ಕುರಿತ ಜಾಗೃತಿ ಜ್ಯೋತಿಯಾತ್ರೆ: ಜಮಾದಾರ
ಬೀದರ್: ಆ.3:ಈ ತಿಂಗಳ 13ರಂದು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ದಿ॥ ವೈಜನಾಥ ಪಾಟೀಲರ ಸಮಾಧಿಯಿಂದ ಬೆಳಿಗ್ಗೆ 11:00 ಗಂಟೆಗೆ ಪ್ರಾರಂಭಿಸಿ ಹೈದ್ರಾಬಾದ್ ಕರ್ನಾಟಕದ 7 ಜಿಲ್ಲೆಗಳಲ್ಲಿ 371 ಜೆ ಕಲಂ ಬಗ್ಗೆ ಜಾಗೃತಿ ಮೂಡಿಸಿ ಆ.29ರಂದು ಬೆಂಗಳೂರಿನ ಸ್ವತಂತ್ರ ಉದ್ಯಾನವನದಲ್ಲಿ 1 ದಿನದ ಸಾಂಕೇತಿಕ ಧರಣಿ ಮಾಡಲಾಗುವುದೆಂದು ಅಹಿಂದ ಚಿಂತಕರ ವೇದಿಕೆ ರಾಜ್ಯಾಧ್ಯಕ್ಷ ಸಾಯಿಬಣ್ಣ ಜಮಾದಾರ ಹೇಳಿದರು.
ಶುಕ್ರವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಹೈದ್ರಾಬಾದ ಕರ್ನಾಟಕವು ಕರ್ನಾಟಕ ರಾಜ್ಯದಲ್ಲಿ ಅತಿ ಹಿಂದೂಳಿದ ಪ್ರದೇಶವಾಗಿದ್ದು, ನಮ್ಮ ಭಾಗವು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಮಾಜಿಕವಾಗಿ, ಉದ್ಯೋಗಿಕವಾಗಿ ಅತಿ ಹಿಂದುಳಿದಿರುವದರಿಂದ ನಮ್ಮ ಭಾಗದ ಹಲವಾರು ಹೋರಾಟಗಾರರ ನಿರಂತರ ಹೋರಾಟ ಚಳುವಳಿಗಳಿಂದ ನಮಗೆ ಭಾರತದ ಸಂವಿಧಾನದ 98 ನೇ ತಿದ್ದುಪಡಿ ನಿಯಮ 2012ರ ದಿನಾಂಕ 1ನೇ ಜನವರಿ 2013ಕ್ಕೆ, 371 ಜೆ ಕಲಂ ಕರ್ನಾಟಕ ರಾಜ್ಯದ ಹೈದ್ರಾಬಾದ ಕರ್ನಾಟಕ ಭಾಗದ ವಿಶೇಷ ಅಭಿವೃದ್ಧಿಗಾಗಿ ಅನುμÁ್ಠನಕ್ಕೆ ಬಂದಿರುತ್ತದೆ. ಆದರೆ ಎಲ್ಲಾ ಸರಕಾರಗಳು ಹಾಗೂ ಉನ್ನತ ಮಟ್ಟದ ಅಧಿಕಾರಿಗಳು ನಮ್ಮ ಭಾಗದ ಅಭಿವೃದ್ಧಿ, ವಿದ್ಯಾರ್ಥಿಗಳ ಅಭಿವೃದ್ಧಿ, ಸರಕಾರಿ ನೌಕರರ ಅಭಿವೃದ್ಧಿಯನ್ನು ಮಾಡದೆ ಅವರುಗಳಿಗೆ ಮಾರಕವಾಗುವ ನಿಟ್ಟಿನಲ್ಲಿ ಕಾರ್ಯಪ್ರವರ್ಥರಾಗಿದ್ದು ತುಂಬಾ ಖಂಡನೀಯವಾಗಿದೆ ಎಂದರು.
ನಮ್ಮ ಭಾಗದ ಸರಕಾರಿ ನೌಕರರಿಗೆ ಮುಂಬಡ್ತಿಯಲ್ಲಿ ತುಂಬಾ ಅನ್ಯಾಯವಾಗುತ್ತಿದ್ದು ನಮ್ಮ ಭಾಗದ ಪೆÇೀಲಿಸ್ ಇಲಾಖೆ, ಕಂದಾಯ ಇಲಾಖೆ, ಶಿಕ್ಷಣ ಇಲಾಖೆ, ಪಂಚಾಯತ್ ರಾಜ, # ಬುಕಾರಿ ಕೆ.ಪಿ.ಟಿ.ಸಿ.ಎಲ್ ಇಲಾಖೆಗಳಲ್ಲಿ ಸೇವಾ ಹಿರಿತನದಲ್ಲಿ 10 ವರ್ಷ ಹೀರಿಯರಿದ್ದರು ನಮ್ಮ ಭಾಗದ ಸರಕಾರಿ ನೌಕರರಿಗೆ ಮುಂಬಡ್ತಿ ಸಿಗುತ್ತಿಲ್ಲ ಆದರೆ ನಾನ್.ಎಚ್.ಕೆ ನೌಕರರು ಸೇವಾಹಿರಿತನದಲ್ಲಿ ಕೀರಿಯರಿದ್ದರು ಮುಂಬಡ್ತಿ ಪಡೆದುಕೊಳ್ಳುತ್ತಿರುವರು ಇದು ಯಾವ ನ್ಯಾಯ 371 ಜೆ ಕಲಂ ಬಂದಿರುವ ಉದ್ದೇಶ ಏನು.? ಹಾಗೂ ಹೈದ್ರಾಬಾದ ಕರ್ನಾಟಕ ಹೊರತುಪಡಿಸಿ ಬೇರೆ ವಿಭಾಗಗಳಲ್ಲಿ ನಮ್ಮ ಭಾಗದ ಸರಕಾರಿ ನೌಕರರಿಗೆ 1% ಮಿಸಲಾತಿ ನೀಡುತ್ತಿಲ್ಲ ಆದರೆ ನಾನ್.ಎಚ್.ಕೆ ನೌಕರರಿಗೆ ನಮ್ಮ ಭಾಗದಲ್ಲಿ 20% ಮಿಸಲಾತಿ ನೀಡುತ್ತಿದ್ದಾರೆ ಈ ತಾರತಮ್ಯಗಳು ಯಾವ ಪುರುμÁರ್ಥಕ್ಕಾಗಿ ಮಾಡುತ್ತಿದ್ದಾರೆ ಮಿಸಲಾತಿ ಬಂದಿರುವದು ನಮಗೆ ಆದರೆ ಸೌಲಭ್ಯ ಪಡೆದುಕೊಳ್ಳುತ್ತಿರುವವರು ಬೇರೆಯವರಾಗಿದ್ದಾರೆ. ಒಟ್ಟಾರೆಯಾಗಿ 371 ಜೆ ಕಲಂನ ಮುಂಬಡ್ತಿ ನಿಯಮಗಳು ನಮ್ಮ ಪಾಲಿಕೆ ಮಾರಕವಾಗಿ ಪರಿಣಮಿಸಿದೆ. ನಮ್ಮ ಭಾಗಕ್ಕೆ 371ಜೆ ಉಪ ಸಮಿತಿ ಮಾಡಿದ್ದು ಆ ಸಮಿತಿಯು ನಮ್ಮ ಭಾಗದ ಕೊಂದು-ಕೊರತೆ, ಕಾನೂನು ತಿದ್ದುಪಡಿ ಈ ಭಾಗದ ಒಳಿತಿಗಾಗಿ ಶ್ರಮಿಸಬೇಕಾಗಿದ್ದು ಆದರೆ ಇದುವರೆಗು ಆ ಉಪ-ಸಮಿತಿ ಎಲ್ಲಿದೆ ಅಂತಾನೆ ಗೊತ್ತಿಲ್ಲ. ಪ್ರತಿ ಬಾರಿ ಆ ಸಮಿತಿಯ ಅಧ್ಯಕ್ಷರನ್ನ ನಾನ್.ಎಚ್.ಕೆ ಜನರನ್ನೆ ಮಾಡುತ್ತಿರುವದರ ಒಳಗಿನ ಮರ್ಮವೆನು ಎನ್ನುವದು ಅರ್ಥವಾಗುತ್ತಿಲ್ಲ ಒಟ್ಟಾರೆಯಾಗಿ ಹೈ.ಕ ಭಾಗದ ಜನರು, ವಿದ್ಯಾರ್ಥಿಗಳು, ಸರಕಾರಿ ನೌಕರರು ಒಂದಾಗಿ ಈ ಅನ್ಯಾಯದ ವಿರುದ್ಧ ಹೋರಾಡಲೇಬೇಕು, ಇಲ್ಲವಾದರೆ ನಾಳೆ ನಮಗೆ ಹಾಳು ಭಾವಿಯಲ್ಲಿ ನುಕುವದಂತು ನೈಜವಾಗಿದೆ. ಅದಕ್ಕಾಗಿ ಎಲ್ಲರು ಒಂದಾಗಿ ಹೋರಾಡಲು ಮುಂದಾಗಿವ ಎಂದು ಕರೆ ಕೊಟ್ಟರು.
ಕರ್ನಾಟಕ ಸರ್ಕಾರವು ನಮ್ಮ ಭಾಗದ ಜನರಿಗೆ 371 ಜೆ ಕಲಂನ ಅಡಿಯಲ್ಲಿ ಉದ್ಯೋಗ ಅವಕಾಶ ಕಲ್ಪಿಸಿದ್ದು ಆದರೆ ಮುಂಬಡ್ತಿಯಲ್ಲಿ ಬೇಳಗಾವಿ ವಿಭಾಗ, ಮೈಸುರು ವಿಭಾಗ, ಬೆಂಗಳೂರ ವಿಭಾಗದಲ್ಲಿ ನಮ್ಮ ಜನರಿಗೆ ಮುಂಬಡ್ತಿ ಕೊಡುವಲ್ಲಿ ಅನ್ಯಾಯ ಮಡುತ್ತಿರುವುದು ಖಂಡನಿಯವಾಗಿದೆ. ಮತ್ತು ಮಿಸಲಾತಿ ಬಂದಿರುವ ಹೈದ್ರಾಬಾದ ಕರ್ನಾಟಕದ ನೌಕರರಿಗು ಮುಂಬಡ್ತಿಯಲ್ಲಿ ಅನ್ಯಾಯ ಮಾಡುತ್ತಿದ್ದು ಇದು ಸಂವಿಧಾನದ ವಿರೊಧಿ ನೀತಿ ಎಂದು ಹೇಳಿದರು ತಪ್ಪಾಗದು ಏಕೆಂದರೆ ಲಕ್ಷಾಂತರ ಜನ ಹೈ.ಕ ಜನರಿಗೆ ಈ ಎಲ್ಲಾ ರಾಜಕಾರಣಿಗಳು ಮತ್ತು ಪಟ್ಟ ಬದ್ದ ಹಿತಾಸಕ್ತಿಯುಳ್ಳ ಜನರು ಹೈ.ಕ. ಎಲ್ಲಾ ಜನರಿಗೂ ಅನ್ಯಾಯ ಮೋಸ ಮಾಡಿರುತ್ತಾರೆ ಇದನ್ನು ನಾವು ವಿರೋಧಿಸುತ್ತೆವೆ ಎಂದವರು ತಿಳಿಸಿದರು.
ಹೈದ್ರಾಬಾದ್ ಕರ್ನಾಟಕವು ಅಭಿವೃದ್ಧಿ ಹೊಂದಬೇಕಾದರೆ 371 ಜೆ ಕಲಂ ಸಮರ್ಪಕವಾಗಿ ಜಾರಿಯಾಗಬೇಕು ಮತ್ತು ಈ ಭಾಗದ ನಿರುದ್ಯೋಗದ ಸಮಸ್ಯೆ ಮತ್ತು ಸರ್ಕಾರಿ ನೌಕರರಿಗೆ ಮುಂಬಡ್ತಿಯಲ್ಲಿ ಆಗುತ್ತಿರುವಂಥ ಅನ್ಯಾಯ ಸರಿಪಡಿಸಬೇಕು. ಮತ್ತು ಸರ್ಕಾರ ಈ ಭಾಗದ ಬಗ್ಗೆ ನಿಜವಾಗಲೂ ಕಾಳಜಿ ಇದ್ದರೆ ಈ ಭಾಗದ 371 ಜೆ ಕಲಂ ನ್ಯೂನತೆಗಳು ಸರಿಪಡಿಸಬೇಕೆಂದು ಆಗ್ರಹಿಸುವುದಾಗಿ ತಿಳಿಸಿದರು.
ಹೈದ್ರಾಬಾದ್ ಕರ್ನಾಟಕ ಹೊರತುಪಡಿಸಿ 24 ಜಿಲ್ಲೆಗಳಲ್ಲಿ 8% ನೇಮಕಾತಿ ಮತ್ತು ಮುಂಬಡ್ತಿ ಮೀಸಲಾತಿ ಒದಗಿಸಬೇಕು, ಹೈದ್ರಾಬಾದ್ ಕರ್ನಾಟಕದ ಎಲ್ಲಾ ಖಾಸಗಿ ಕಂಪನಿ, ಕಾರ್ಖಾನೆ, ಶಾಲಾ- ಕಾಲೇಜುಗಳಲ್ಲಿ, ಆಸ್ಪತ್ರೆಗಳಲ್ಲಿ 80% ರಷ್ಟು ಉದ್ಯೋಗ ಒದಗಿಸಬೇಕು, ಕೇಂದ್ರ ಸರ್ಕಾರದಿಂದ ಈ ಪ್ರದೇಶಕ್ಕೆ 3 ಸಾವಿರ ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು ಎಂದು ಹೇಳಿದರು.
ವೇದಿಕೆ ಜಿಲ್ಲಾ ಗೌರವಾಧ್ಯಕ್ಷ ಘಾಳೆಪ್ಪ ಅಂತಿ, ಹುಮನಾಬಾದ ಸಂಚಾಲಕರಾದ ಬಕ್ಕಪ್ಪ ಬೆಮಳಖೇಡ, ಆಳಂದ ಸಂಚಾಲಕ ಡಿ.ಎಸ್ ಹಡಲಗಿ, ಸದಸ್ಯರಾದ ಭೀಮಗೊಂಡ ಬಾಳುರೆ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.