ಅ.೫ ರಂದು ಮೂರ್ತಿ ಪ್ರತಿಷ್ಠಾಪನೆ
ಬಾದಾಮಿ,ಆ೩: ಪಟ್ಟಣದ ಪ್ರತಿಷ್ಟಿತ ಶ್ರೀ ವೀರಪುಲಿಕೇಶಿ ಸಂಸ್ಥೆಯ ಎಸ್.ಬಿ.ಎಂ.ಪದವಿ ಮಹಾವಿದ್ಯಾಲಯದ ಆವರಣದಲ್ಲಿ ಅ.೫ ರಂದು ಸೋಮವಾರ ಇಮ್ಮಡಿ ಪುಲಿಕೇಶಿಯ ಮೂರ್ತಿ ಪ್ರತಿಷ್ಟಾಪನೆ ಕಾರ್ಯಕ್ರಮ ಜರುಗಲಿದೆ ಎಂದು ಎಸ್.ಬಿ.ಎಂ.ಪದವಿ ಕಾಲೇಜಿನ ಪ್ರಾಚಾರ್ಯ ರವೀಂದ್ರ ಮೂಲಿಮನಿ ತಿಳಿಸಿದರು.
ಅವರು ಪತ್ರಿಕಾಗೊಷ್ಟಿಯಲ್ಲಿ ಮಾಹಿತಿ ನೀಡಿದರು. ಅಂದು ಬೆಳಿಗ್ಗೆ ೯ ಗಂಟೆಗೆ ಪಿ.ಎಲ್.ಡಿ.ಬ್ಯಾಂಕ್ ಆವರಣದಲ್ಲಿ ಸಂಸ್ಥೆಯ ಉಪಚೇರಮನ್ ಸುನೀಲ ಕಾರುಡಗಿಮಠ ಉತ್ಸವಕ್ಕೆ ಚಾಲನೆ ನೀಡುವರು. ಸಕಲ ವಾದ್ಯಗಳೊಂದಿಗೆ ಮೆರವಣಿಗೆಯು ಪಿ.ಎಲ್.ಡಿ.ಬ್ಯಾಂಕ್ ಆವರಣದಿಂದ ಹೊರಟು ಎಸ್.ವಿ.ಪಿ.ಸಂಸ್ಥೆಯ ಪದವಿ ಮಹಾವಿದ್ಯಾಲಯಕ್ಕೆ ತಲುಪಲಿದೆ. ಮಧ್ಯಾಹ್ನ ೧೨ ಗಂಟೆಗೆ ಚಾಲುಕ್ಯ ವೇದಿಕೆಯಲ್ಲಿ ಮೂರ್ತಿ ಪ್ರತಿಷ್ಟಾಪನೆ ನಡೆಯಲಿದೆ.
ಇಮ್ಮಡಿ ಪುಲಿಕೇಶಿ ಮೂರ್ತಿ ಪ್ರತಿಷ್ಟಾಪನಾ ಕಾರ್ಯಕ್ರಮ ಬಸವನ ಮಂಟಪದಲ್ಲಿ ಮಧ್ಯಾಹ್ನ ೧೨ ಗಂಟೆಗೆ ಜರುಗಲಿದೆ. ಕಮತಗಿಯ ಶ್ರೀ ಹೊಳೆಹುಚ್ಚೇಶ್ವರ ಶ್ರೀಗಳು ಸಾನಿಧ್ಯ ವಹಿಸುವರು. ಸಂಸ್ಥೆಯ ಚೇರಮನ್ ಎ.ಸಿ.ಪಟ್ಟಣದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಭಾಗವಹಿಸುವರು. ನಿವೃತ್ತ ಪ್ರಾಧ್ಯಾಪಕ ಡಾ.ಈರಣ್ಣ ಪತ್ತಾರ, ನಾಗಪೂರ ಪುರಾತತ್ವ ಇಲಾಖೆಯ ಅಧೀಕ್ಷಕ ರಮೇಶ ಮೂಲಿಮನಿ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪೂರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಶಾಂತಗೌಡ ಪಾಟೀಲ, ಎಸ್.ಜಿ.ಕಾರುಡಗಿಮಠ, ಎಸ್.ಡಿ.ಫತ್ತೇಪೂರ, ನಾಗರಾಜ ಕಾಚೆಟ್ಟಿ ಉಪಸ್ಥಿತರಿರುವರು. ಸುಮಾರು ೨೦೦೦ ಜನ ಹಳೆಯ ವಿದ್ಯಾಥಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಅಶೊಕ ಜವಳಿ, ಉಪನ್ಯಾಸಕ ಡಾ.ಅವಿನಾಶ ಮಮದಾಪೂರ, ನಿವೃತ್ತ ಪ್ರಾಚಾರ್ಯ ಜಿ.ಬಿ.ಶೀಲವಂತರ ಹಾಜರಿದ್ದರು.