ರೈತನ ಉಪಜೀವನಕ್ಕೆ ಆಸರೆಯಾಗಿದ್ದ ಹಸು ಮೃತಪಟ್ಟ ಹಿನ್ನೆಲೆಯಲ್ಲಿ 50 ಸಾವಿರ ರೂ. ಪರಿಹಾರ ಧನದ ಚೆಕ್ ವಿತರಣೆ
ಬೀದರ್ :ಆ.3:ದಕ್ಷಿಣ ಕ್ಷೇತ್ರದ ಬಾವಗಿ ಗ್ರಾಮದ ರೈತ ಕಾಶಿನಾಥ ಅವರ ಆಕಳು ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿತ್ತು ಹೀಗಾಗಿ ಜೆಸ್ಕಾಂ ವತಿಯಿಂದ ಶಾಸಕರಾದ ಡಾ ಶೈಲೆಂದ್ರ ಬೆಲ್ದಾಳೆ ಪರಿಹಾರ ಧನದ ಚೆಕ್ ಯನ್ನು ವಿತರಣೆ ಮಾಡಿದರು.
ಈತ್ತಿಚೇಗೆ ಬಾವಗಿ ಗ್ರಾಮದ ರೈತ ತನ್ನ ಉಪಜೀವನಕ್ಕೆ ಆಸರೆಯಾಗಿದ್ದ ಹಸುವನ್ನು ಜಮೀನಿನಲ್ಲಿ ಹುಲ್ಲು ಮೈಸುವಾಗ ಹಸುವಿಗೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿರುವ ಸುದ್ದಿ ಗ್ರಾಮದ ಮುಖಂಡರು ದೂರವಾಣಿ ಮೂಲಕ ಶಾಸಕರನ್ನು ತಿಳಿಸಿದ ತಕ್ಷಣ ಅಧಿಕಾರಿಗಳಿಗೆ ಸೂಚಿಸಿ ಜೆಸ್ಕಾಂ ವತಿಯಿಂದ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದರು, ಅಂತೆಯೇ ಬೀದರ್ ದಕ್ಷಿಣ ಕ್ಷೇತ್ರದ ಬಾವಗಿ ಗ್ರಾಮದ ರೈತ ಕಾಶಿನಾಥ ಅವರಿಗೆ ಜೆಸ್ಕಾಂ ವತಿಯಿಂದ 50 ಸಾವಿರ ರೂಪಾಯಿ ಸಾಹಯಧನದ ಚೆಕ್ ವಿತರಣೆ ಮಾಡಿ ಹೈನುಗಾರಿಕೆಯಿಂದ ಉತ್ತಮ ಜೀವನ ರೂಪಿಸಿಕೊಳ್ಳಲು ಶುಭಕೋರಿದರು.
ಈ ಸಂದರ್ಭದಲ್ಲಿ ಜೆಸ್ಕಾಂ ಎಇಇ ರಮೇಶ ಪಾಟೀಲ, ಮುಖಂಡರಾದ ರಾಜಕುಮಾರ ಪಾಟೀಲ, ಸಂತೋಷ ಜಗದಾಳೆ, ವಿರೇಶ ಬಮಣಿ, ಅರುಣಕುಮಾರ ಬಾವಗಿ, ಭೀಮಣ್ಣ ಸೋರಳ್ಳಿ ಮತ್ತಿತರರು ಉಪಸ್ಥಿತರಿದ್ದರು.