ಒಳಮೀಸಲಾತಿ ಸುಪ್ರೀಂಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಬಿಜೆಪಿ ಸಂಭ್ರಮಾಚರಣೆ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ:ಆ.03 ಪಟ್ಟಣದ ರಾಮನಗರ ವೃತ್ತದಲ್ಲಿ ಬಿಜೆಪಿ ಎಸ್.ಸಿ.ಮೋರ್ಚ ಜಿಲ್ಲಾ ಮತ್ತು ತಾಲೂಕು ಘಟಕಗಳಿಂದ ಪರಿಶಿಷ್ಟ ಸಮುದಾಯದ ಒಳ ಮೀಸಲಾತಿ ಕಾನೂನು ಬದ್ಧ ಎಂದು ಸುಪ್ರೀಂಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಶುಕ್ರವಾರ, ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗಿತ್ತು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಲ್ಲಾಹುಣಸಿ ರಾಮಣ್ಣ  ಮಾತನಾಡಿ ಪರಿಶಿಷ್ಟ ಸಮುದಾಯದ ಒಳ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಅನೇಕಬಾರಿ ದಲಿತರಿಗೆ ಮೂಗಿಗೆ ತುಪ್ಪ ಸವರುವ ಕೆಲಸಮಾಡಿತು. ಸಂವಿಧಾನದ ಲಾಭ  ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ದೊರೆಯಬೇಕು ಎನ್ನುವ ಕಾರಣದಿಂದ ಈ ತೀರ್ಪು ಸೂಕ್ತವಾಗಿದೆ ಎಂದರು. ಕನಿಷ್ಟ 30ವರ್ಷಗಳಿಂದ ಹೋರಾಟಮಾಡುತ್ತಾ ಬಂದಿದ್ದರೂ ನಮಗೆ ನ್ಯಾಯದೊರಕಿರಲಿಲ್ಲ. ಸದಾಶಿವ ಆಯೋಗ ಮಾಡಿದರೂ, ಪ್ರಾಮುಖ್ಯತೆ ನೀಡದೆ ಕಡೆಗಣಿಸಿದರು. ನಮ್ಮ ಪಕ್ಷದ ಆಡಳಿತದಲ್ಲಿ ಯಡಿಯೂರಪ್ಪನವರು ಪ್ರಾಮುಖ್ಯತೆ ನೀಡಬೇಕಾಯಿತು. ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಇದಕ್ಕೆ ಮತ್ತೇ ಚಾಲನೆ ನೀಡಿದರೂ ಕಾಂಗ್ರೆಸ್‍ನವರು ಅಪಹಾಸ್ಯಮಾಡಿ ಜೇನುಗೂಡಿಗೆ ಕೈ ಹಾಕಿದ್ದಾರೆ ಹೇಳಿದರು. ಆದರೆ, ಸಮಾನತೆ ಪ್ರತಿಯೊಬ್ಬರ ಹಕ್ಕು ಎನ್ನುವ ಕಾರಣದಿಂದ ಹಿಡಿದ ಪಟ್ಟು ಬಿಡದೆ ನಮಗೆ ನ್ಯಾಯದೊರಕಿಸಿಕೊಡುವಲ್ಲಿ ಬಿಜೆಪಿ ಬದ್ಧವಾಗಿದ್ದರೆ. ಸಮಾಜಿಕ ನ್ಯಾಯದ ಹೆಸರಿನಲ್ಲಿ ಮತಯಾಚನೆಗೆ ಹೋದ ಕಾಂಗ್ರೆಸ್ ಮತ್ತದೇ ಕೆಲಸಮಾಡಿ ಸಮುದಾಯವನ್ನು ಇನ್ನಷ್ಟು ತುಳಿಯುವ ಹುನ್ನಾರ ನಡೆಸಿತ್ತು ಎಂದು ಕಾಂಗ್ರೆಸ್‍ನ್ನು ಕುಟುಕಿದರು. ಈಗ ಮೀಸಲಾತಿ ವಿಚಾರವಾಗಿ ರಾಜ್ಯ ಸರ್ಕಾರಕ್ಕೆ ಹಕ್ಕು ನೀಡಿದೆ. ಈಗಲಾದರೂ ತಮ್ಮ ಕರ್ತವ್ಯ ನ್ಯಾಯಸಮ್ಮತವಾಗಿ ನಿರ್ವಹಿಸಲಿ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಬೆಣಕಲ್ ಪ್ರಕಾಶ್ ಮಾತನಾಡಿ, ಒಳ ಮೀಸಲಾತಿಗಾಗಿ ನಿಸ್ವಾರ್ಥ ಹೋರಾಟ ಮಾಡಿದ್ದಾರೆ. ಇದಕ್ಕಾಗಿ ಅನೇಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದಾದ ಬಳಿಕ ಸುಪ್ರೀಂಕೋರ್ಟ್ ಆದೇಶ ನೀಡಿದ್ದು, ಇದರಿಂದ ನಮ್ಮ ಪಕ್ಷದ ನರೇಂದ್ರ ಮೋದಿಯವರಿಂದ ಎಲ್ಲಾ ನಾಯಕರಿಗೂ ಅಭಿನಂದಿಸುತ್ತೇವೆ. ಇನ್ನು ಈ ತೀರ್ಪು ಸಮುದಾಯದ ಮುಂದಿನ ಭವಿಷ್ಯದಲ್ಲಿ ಮಕ್ಕಳಿಗೆ ಅನುಕೂಲವಾಗಲಿದೆ. ಜನಾರ್ಶೀವಾದ ಪಡೆದಿರುವ ಕಾಂಗ್ರೆಸ್ ಸರ್ಕಾರ ಕೂಡಲೆ ಒಳ ಮೀಸಲಾತಿ ಸೌಲಭ್ಯ ಕಲ್ಪಿಸಿಕೊಡವ ಕೆಲಸ ಮಾಡಲಿ ಎಂದು ಆಗ್ರಹಿಸಿದರು. ಸಮುದಾಯದ ಮುಖಮಡರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.,   
ಈ ವೇಳೆ ಬಿಜೆಪಿ ಎಸ್.ಸಿ. ತಾಲೂಕು ಅಧ್ಯಕ್ಷ, ಮರಿಯಪ್ಪ, ಎಸ್.ಸಿ.ಮೋರ್ಚದ ಉಪಾಧ್ಯಕ್ಷರಾದ ಕೋಗಳಿ ಪ್ರಕಾಶ್, ಶಿವಮೂರ್ತಿ, ಮಾದೂರು ಮಹೇಶ್, ಎ.ಕೆ.ರಾಮಣ್ಣ, ಎಚ್.ಬುಳ್ಳಪ್ಪ, ನಿವೃತ್ತ ಶಿಕ್ಷಕ ಬಸಪ್ಪ, ಅಂಕಸಮುದ್ರ ಮಲ್ಲಿಕಾರ್ಜುನ, ಚಿಲಗೋಡು ಮೈಲಪ್ಪ, ಮಂಜುನಾಥ, ಅರ್ಜುನ, ಮರಿಯಮ್ಮನಹಳ್ಳಿಯ ಗಾಳೇಪ್ಪ, ಸುಬ್ರಮಣ್ಯ, ಆನಂದ ಇದ್ದರು.