ತಾರಾನಾಥ್ ಸರ್ಕಾರಿ ಆಯುರ್ವೇದಿಕ್ ಕಾಲೇಜಿನಲ್ಲಿ ಉಪನ್ಯಾಸ
ಬಳ್ಳಾರಿ, ಅ,3-  ತಾರಾನಾಥ್ ಸರ್ಕಾರಿ ಆಯುರ್ವೇದಿಕ್ ಮಹಾವಿದ್ಯಾಲಯದಲ್ಲಿ, ರಾಷ್ಟ್ರ ರಕ್ಷಣೆಯಲ್ಲಿ ಪ್ಯಾರಾ ಮಿಲಿಟರಿಗಳ ಪಾತ್ರ, ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಈ ಕಾರ್ಯಕ್ರಮದಲ್ಲಿ ಶಾಲೆಯ ಆಯುರ್ವೇದಿಕ್ ಕಾಲೇಜಿನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ನಮ್ಮ ದೇಶದಲ್ಲಿ ಎಷ್ಟು ರಾಜ್ಯಗಳಿವೆ ಆ ರಾಜ್ಯಗಳು ಯಾವಯಾವ ರಾಷ್ಟ್ರಗಳಿಂದ ತನ್ನ ದೇಶದ ಗಡಿಭಾಗ ಹೊಂದಿವೆ, ಉಗ್ರವಾದಿಗಳೆಂದರೇನು, ನಕ್ಸಲಿ ಎಂದರೇನು ಇವರಿಂದ ಯಾವ ರೀತಿ ಸೈನಿಕರು ರಾಷ್ಟ್ರವನ್ನು  ರಕ್ಷಿಸುತ್ತಾರೆ ರಾಷ್ಟ್ರದಲ್ಲಿ ಎಷ್ಟು ರಾಜ್ಯಗಳಲ್ಲಿ ನಕ್ಸಲರಿಂದ  ಕೂಡಿದೆ ಎಲ್ ಓ ಸಿ ಮತ್ತು ಎಲ್ಏಸಿ ಎಂದರೇನು ಹಾಗೂ ದೇಶದ ಬಗ್ಗೆ ಇನ್ನು ಹೆಚ್ಚಿನ ವಿಷಯವನ್ನು ವಿದ್ಯಾರ್ಥಿಗಳಿಗೆ ಭೋದಿಸಲಾಯಿತು ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರು ಮತ್ತು ಕಾಲೇಜಿನ  ಸಮಿತಿ ಸಿದ್ಧಾಂತದ ಎಚ್ಓಡಿ ಆದಂತಹ ಕೃಷ್ಣ ನಾಯಕ್ ಹಾಗೂ  ಕಾಲೇಜಿನ ಸಿಬ್ಬಂದಿ ಕೇದಾರ್ನಾಥ್  ಮತ್ತು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು ಹಾಗೂ ಕಲ್ಯಾಣ ಕರ್ನಾಟಕ ಮಾಜಿ ಅರೇ ಸೇನೆ ಸಂಘದ ಪ್ರಧಾನ ಕಾರ್ಯದರ್ಶಿ ಬಿ ಎನ್ ಪ್ರಹ್ಲಾದ ರೆಡ್ಡಿ ಮತ್ತು ಉಪಾಧ್ಯಕ್ಷರಾದ ಈಶ್ವರ ರೆಡ್ಡಿ ಸಹ ಕಾರ್ಯದರ್ಶಿ ರಾಜಸಿಂಹ ನಿರ್ದೇಶಕರಾದ ಲಕ್ಷ್ಮಣ್ ಮತ್ತು ಶೇಕ್ ಸಾಬ್ ಹಾಗೂ ಗೋವಿಂದರಾಜು ವೀರೇಶ್. ಎಂ ಆರ್ ರೆಡ್ಡಿ ಇವರುಗಳು ಉಪಸ್ಥಿತರಿದ್ದರು