ಬಳ್ಳಾರಿ ಸರ್ಕಾರಿ ನೌಕರರ ಹಾಕಿ ತಂಡರಾಜ್ಯ ಮಟ್ಟಕ್ಕೆ ಆಯ್ಕೆ
(ಸಂಜೆವಾಣಿ ವಾರ್ತೆ)
ಬಳ್ಳಾರಿ:ಅ,3- ಸರ್ಕಾರಿ ನೌಕರರ ಸಂಘದಿಂದ ಜರುಗಿದ  ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಹಾಕಿ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಬಳ್ಳಾರಿ ಸರ್ಕಾರಿ ನೌಕರರ ಹಾಕಿ ತಂಡ ಆಯ್ಕೆಯಾಗಿದೆ.
 ಈ ತಂಡಕ್ಕೆ ನಾಯಕರಾಗಿ  ಶಾಷಾವಲಿ ಆರೋಗ್ಯ ಇಲಾಖೆ ಮತ್ತು ಉಪನಾಯಕರಾಗಿ ಶೈಕ್ಷವಲಿ.ಪಿ, ಶಿಕ್ಷಣ ಇಲಾಖೆ ಯಿಂದ ಆಯ್ಕೆಯಾದರು. ಈ ಸಂಧರ್ಭದಲ್ಲಿ ಬಳ್ಳಾರಿ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಶಿವಾಜಿರಾವ್, ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ, ಮ್ಯಾನೇಜರ್ ಎಂ.ಎ ಆಸೀಫ್, ಜಿಲ್ಲಾ ಹಾಕಿ ಕೋಚ್ ಜಾಕೀರ್ ಅಹಮದ್,ಬಳ್ಳಾರಿ ಹಾಕಿ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ಸಯ್ಯದ್ ಸೈಫುಲ್ಲಾ ಮತ್ತು ಪದಾಧಿಕಾರಿಗಳು ಹಾಜರಿದ್ದರು.