ವಯನಾಡು ಸಂತ್ರಸ್ತರಿಗೆ ಪಾಲಿಕೆನೌಕರರ ಸಂಘದ ನೆರವಿನ ಹಸ್ತ
ಬೆಂಗಳೂರು, ಆ. ೩-ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘ ಮತ್ತು ಬಿಬಿಎಂಪಿ ನೌಕರರ ಸಹಕಾರ ಸಂಘದಿಂದ ವಯನಾಡು ಭೂಕುಸಿತದಿಂದ ಸಂತ್ರಸ್ತರಾದವರಿಗೆ ೨೫ಲಕ್ಷ ರೂಪಾಯಿ ದಿನಸಿ ಸಾಮಾಗ್ರಿಗಳ ಮತ್ತು ಅಗತ್ಯ ವಸ್ತುಗಳನ್ನು ಕೇರಳ ಸರ್ಕಾರದ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರಾದ ಓ.ಆರ್.ಕೇಳುರವರಿಗೆ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು ಹಸ್ತಾಂತರ ಮಾಡಿದರು.
ಇದೇ ಸಂದರ್ಭದಲ್ಲಿ ಕೇರಳ ರಾಜ್ಯದ ಸಚಿವರಾದ ಓ.ಆರ್.ಕೇಳುರವರು ಮಾತನಾಡಿ ಇಂತಹ ಸಂಕಷ್ಟದ ಸಮಯದಲ್ಲಿ ಕರ್ನಾಟಕ ರಾಜ್ಯದಿಂದ ಸಹಕಾರ ಸಿಗುತ್ತಿರುವುದು ಸಂತೋಷದಾಯಕವಾಗಿದೆ.
ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ಸಂಘದವರಿಗೆ ಧನ್ಯವಾದಗಳು, ಕೇರಳ ಸರ್ಕಾರ ತಮಗೆ ಅಭಿನಂದನೆ ತಿಳಿಸುತ್ತದೆ.
ತಾವು ಕೊಟ್ಟ ದಿನಸಿ ಸಾಮಾಗ್ರಿಗಳು, ಬಟ್ಟೆ ಮತ್ತು ಅಗತ್ಯ ವಸ್ತುಗಳು ಸಂತ್ರಸ್ತರಿಗೆ ತಲುಪಿಸಲಾಗುವುದು ಎಂದು ಹೇಳಿದರು.
ಎ.ಅಮೃತ್ ರಾಜ್ ರವರು ಮಾತನಾಡಿ ವಯನಾಡು ಸಂತ್ರಸ್ತರಿಗೆ ಸಹಾಯ ಮಾಡಲು ಎರಡು ದಿನದಲ್ಲಿ ನಮ್ಮ ಅಧಿಕಾರಿ ಮತ್ತು ನೌಕರರು ೨೫ಲಕ್ಷ ರೂಪಾಯಿಗಿಂತ ಹೆಚ್ಚು ದಿನಸಿ, ಅಗತ್ಯ ವಸ್ತುಗಳನ್ನು ಸಹಾಯ ಮಾಡಿದ್ದಾರೆ.
ಸಾಮಾಜಿಕ ಸೇವಾ ಕಾರ್ಯದಲ್ಲಿ ಕೈಜೋಡಿಸಿದ ಬಿಬಿಎಂಪಿ ಅಧಿಕಾರಿ ಮತ್ತು ನೌಕರರಿಗೆ ಹೃರ್ತೂರ್ವಕ ಧನ್ಯವಾದಗಳು ಎಂದು ಹೇಳಿದರು.
ಪದಾಧಿಕಾರಿಗಳಾದ ಸಾಯಿಶಂಕರ್, ಹೆಚ್.ಬಿ.ಹರೀಶ್, ಬಿ.ರುದ್ರೇಶ್, ಮಂಜೇಗೌಡ, ನರಸಿಂಹ, ಮಂಜುನಾಥ್, ಸೋಮಶೇಖರ್, ಅಧಿಕಾರಿ, ನೌಕರರು ಉಪಸ್ಥಿತರಿದ್ದರು.