ಕೆ-ಶಿಫ್ ರಸ್ತೆ ಅಗಲೀಕರಣ: ನಿಯಮ ಉಲಘಂನೆ ವಿದ್ಯುತ್ ಕಂಬ ಅಳವಡಿಕೆ
ಸಂಜೆವಾಣಿ ವಾರ್ತೆ
ಹನೂರು ಆ 3 :- ರಸ್ತೆ ಅಗಲೀಕರಣ ಕಾಮಗಾರಿಯ ವೇಳೆ ಕೆ-ಶಿಪ್ ನವರು ವಿದ್ಯುತ್ ಕಂಬ ಬದಲಾವಣೆಯಲ್ಲಿ ನಿಯಮ ಉಲ್ಲಂಘಿಸಿ ಬೇಕಾ ಬಿಟ್ಟಿಯಾಗಿ ಮನಸೋಇಚ್ಛೆ ಕಂಬ ಅಳವಡಿಸುತ್ತಿದ್ದರೂ ಚೆಕಾರವೆತ್ತದ ಚೆಸ್ಕಾಂನವರು ಸಾರ್ವಜನಿಕ ಜೀವದ ಜತೆ ಚೆಲ್ಲಾಟವಾಡುತ್ತಿರುವುದಾಗಿ ಪ್ರಬುದ್ದ ನಾಗರೀಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಹನೂರು ಪಟ್ಟಣದಲ್ಲಿ ತರಾತುರಿಯಲ್ಲಿ ನಡೆಯುತ್ತಿರುವ ರಸ್ತೆ ಫುಟ್ ಪಾತ್ ರಸ್ತೆ ಬದಿಯಲ್ಲಿ ಅಳವಡಿಕೆ ಮಾಡಲಾಗಿರುವ ವಿದ್ಯುತ್ ಕಂಬ ತಂತಿ ಕಟ್ಟಡಗಳಿಗೆ ತಾಕುವಂತಿದ್ದು ಇದು ಮುಂದೊಂದು ದಿನ ವಿದ್ಯುತ್ ಅವಘಡಗಳು ಸಂಭವಿಸಿ ಪ್ರಾಣಾ ಪಾಯಕ್ಕೆ ಎಡೆ ಮಾಡಿಕೊಡುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಮುಖ್ಯ ರಸ್ತೆ ಬದಿಯಲ್ಲಿ ಪಾದಚಾರಿ ರಸ್ತೆ ಕಾಮಗಾರಿ ನಡೆಯುತ್ತಿದ್ದು ಕಟ್ಟಡ ಸಮೀಪವೇ ವಿದ್ಯುತ್ ಕಂಬಗಳ ಬದಲಾವಣೆ ಕಾಮಗಾರಿಯೂ ನಡೆಯುತ್ತಿದೆ.ಅದರಲ್ಲಿ ಕಂಬದಿಂದ ಕಂಬಕ್ಕೆ ಎಳೆಯಲಾಗಿರುವ ತಂತಿಗಳು ಕಟ್ಟಡಗಳ ಹತ್ತಿರದಲ್ಲಿ ಹಾದು ಹೋಗಿರುವುದರಿಂದ ವಿದ್ಯುತ್ ಅವಘಡಗಳು ಸಂಭವಿಸುವ ಸಾಧ್ಯತೆ ಇರುವುದು ಸ್ಪಷ್ಟವಾಗಿದೆ.
ರಸ್ತೆ ಪಕ್ಕದಲ್ಲಿ ಇದ್ದಂತಹ ಖಾಸಗಿ ಕಟ್ಟಡಗಳನ್ನು ತೆರವು ಮಾಡಲು ಮಾಲೀಕರಿಗೆ ಪರಿಹಾರ ಸಹ ನೀಡಲಾಗಿದೆ. ಆದರೆ ಕಟ್ಟಡ ಮಳೆಗೆಗಳು ಮೇಲ್ನೋಟಕ್ಕೆ ತೆರವು ಮಾಡಿರುವಂತೆ ಕಂಡರು. ಪುಟ್ ಪಾತ್ ರಸ್ತೆಯನ್ನು ಆಕ್ರಮಿಸಿಕೊಂಡಿರುವ ಕಟ್ಟಡದಿಂದ ಅವೈಜ್ಞಾನಿಕ ವಿದ್ಯುತ್ ಕಂಬ ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.
ರಸ್ತೆ ಅಗಲೀಕರಣಕ್ಕೆ ಬೇಕಾದಂತಹ ಜಾಗವನ್ನು ಬಿಡಿಸಿ ರಸ್ತೆ ಪುಟ್ ಪಾತ್ ಕಾಮಗಾರಿ ಜತೆಗೆ ಯಾವುದೇ ಅಡಚಣೆ ಇಲ್ಲದೆ ಸಾರ್ವಜನಿಕರಿಗೆ ಕಟ್ಟಡಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ವಿದ್ಯುತ್ ಕಂಬಗಳನ್ನು ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸುವ ವ್ಯವಸ್ಥೆಯನ್ನು ಮಾಡಬೇಕೆಂಬ ನಿಯಮಾನುಸಾರ ಇದ್ದರು ಕೆ-ಶಿಪ್ ಅಧಿಕಾರಿ ಸಿಬ್ಬಂದಿಗಳು ಇದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ತರಾತುರಿಯಲ್ಲಿ ವಿದ್ಯುತ್ ಕಂಬ ಅಳವಡಿಸಿ ಕಾಮಗಾರಿ ಮಾಡುತ್ತಿದ್ದಾರೆ.
ಕಟ್ಟಡದ ಪಕ್ಕದಲ್ಲಿಯೇ ಕಟ್ಟಡಗಳಿಗೆ ತಾಗುವ ಹಾಗೆ 11ಕೆ ವಿ ಯ ಲೈನ್ ಜೊತೆಗೆ ಎ ಬಿ ಕೇಬಲ್ ಮತ್ತು 440 ವೋಲ್ಟೇಜ್ ಇರುವ ಲೈನ್ ವಿದ್ಯುತ್ ತಂತಿಗಳನ್ನು ಅಳವಡಿಕೆ ಮಾಡುತ್ತಿದ್ದಾರೆ. ಕಂಬದ ಲೈನ್ ವೈರ್ ನಿಂದ ಕನಿಷ್ಠ 1.2 ಮೀಟರ್ , ಅಂತರ 4 ಅಡಿಗಳ ಅಂತರದಲ್ಲಿ ಕಟ್ಟಡ ಇರಬೇಕು. ವಿದ್ಯುತ್ ಸಂಪರ್ಕ ಕಾಮಗಾರಿಯ ಬೆಳವಣಿಗೆ ಇದೂ ಸಹಾ ಅಪಾಯಕಾರಿ, ಮತ್ತು ಚೆಸ್ಕಾಂ ನಾ ಸೂತ್ತೋಲೆಯ ನಿಯಮ ಉಲ್ಲಂಘನೆಯಾಗಿದೆ.
ನಿಯಮಾನುಸಾರ ವಿದ್ಯುತ್ ಕಂಬ ತಂತಿ ಅಳವಡಿಕೆಗೆ ಹೊರಡಿಸಿರುವ ಆದೇಶವನ್ನು ಮೀರಿ ಅವೈಜ್ಞಾನಿಕ ಬೇಕಾಬಿಟ್ಟಿ ವಿದ್ಯುತ್ ಕಂಬ ತಂತಿ ಅಳವಡಿಕೆಯಿಂದ ಸಂಭವಿಸಬಹುದಾದ ಅವಘಡಗಳಿಗೆ ಹೊಣೆ ಯಾರು.? ಈ ಬಗ್ಗೆ ಈಗಲೇ ಎಚ್ಚೆತ್ತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಸಮರ್ಪಕ ಹಾಗೂ ಸುರಕ್ಷಿತವಾಗಿ
ಉತ್ತಮ ರೀತಿಯಲ್ಲಿ ವಿದ್ಯುತ್ ಸಂಪರ್ಕದ ವ್ಯವಸ್ಥೆ ಕಲ್ಪಿಸುವ ಮೂಲಕ ಮುಂದಾಗುವ ಅವಘಡಗಳನ್ನು ತಪ್ಪಿಸಬೇಕಾಗಿದೆ.