ಕ್ರೀಡಾಕೂಟದಲ್ಲಿ ಮಾರ್ಟಳ್ಳಿ ವಿದ್ಯಾರ್ಥಿಗಳ: ಸಾಧನೆ
ಸಂಜೆವಾಣಿ ವಾರ್ತೆ
ಹನೂರು ಆ 3 :- ಪಟ್ಟಣದ ಶ್ರೀ ಮಹದೇಶ್ವರ ಕ್ರೀಡಾಂಗಣದಲ್ಲಿ ನಡೆದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಹನೂರು ತಾಲೂಕಿನ ಮಾರ್ಟಳ್ಳಿಯ ಸಂತ ತೆರೇಸಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಅನೇಕ ಸ್ಪರ್ಧೆಗಳಲ್ಲಿ ವಿಜೇತರಾಗಿ ಶಾಲೆಗೆ ಕೀರ್ತಿ ತಂದಿರುತ್ತಾರೆ.
ವಿದ್ಯಾರ್ಥಿಗಳಾದ ರೇಣು 100ಮೀ ಓಟ ಪ್ರಥಮ, ಎಂಜಾಲಿನ್ ರೋಜಾರಿಯೋ 400 ಮೀಟರ್ ಓಟ ಪ್ರಥಮ, ಬೀನಾ ಹಾಗೂ ತಂಡ 4*100ರೀಲೆ ಪ್ರಥಮ, ರೆಮಿ ಪ್ರೆಸಿಲ್ಲ 400 ಮೀ ಓಟ ದ್ವಿತೀಯ, ಜೋನೆಟ್ ಸೆಲ್ವಿ 600 ಮೀಟರ್ ದ್ವಿತೀಯ,ನಿತಿನ್ ತಟ್ಟೆ ಎಸೆತ ದ್ವಿತೀಯ, ಜೋವಿನ ಎಂ 600 ಮೀ ತೃತಿಯ, ರೋಷನ್ ಚಾರ್ಲೆಸ್ 200ಮೀ ಓಟ ತೃತೀಯ ಸ್ಥಾನ ಪಡೆದಿದ್ದಾರೆ.
ಡಾನಿಕಾ ಜಾಸ್ಮಿನ್ ತಟ್ಟೆ ಎಸೆತ ತೃತೀಯ ಹಾಗೂ ಗುಂಡು ಎಸೆತ ತೃತೀಯ ಹಾಗೆಯೇ ಬಾಲಕರ ವಾಲಿಬಾಲ್ ಪ್ರಥಮ ಬಾಲಕಿಯರ ವಾಲಿಬಾಲ್ ಪ್ರಥಮ, ಬಾಲಕರ ಕಬಡ್ಡಿ ದ್ವಿತೀಯ, ಬಾಲಕಿಯರ ಖೋ ಖೋ ದ್ವಿತೀಯ ಸ್ಥಾನಗಳನ್ನು ಪಡೆದು ಅಧಿಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಶಾಲೆಗೆ ಕೀರ್ತಿ ತಂದ ಕ್ರೀಡಾಪಟುಗಳನ್ನು ಶಾಲೆಯ ವ್ಯವಸ್ಥಾಪಕರಾದ ಪಾ.ಟೆನ್ನಿ ಕುರಿಯನ್, ಮುಖ್ಯ ಶಿಕ್ಷಕರಾದ ಅನ್ನೈನಾದನ್ ಹಾಗೂ ಸಿಸ್ಟರ್. ಸಿಂಧೂ ಮೊನ್, ಸಹ ಶಿಕ್ಷಕ ಶಿಕ್ಷಕಿಯರು ಹಾಗೂ ಸಿಬ್ಬಂದಿಗಳು ತುಂಬು ಹೃದಯದಿಂದ ಅಭಿನಂದಿಸಿದರು.