ಅಶಾಂತಿಯನ್ನು ಹೋಗಲಾಡಿಸಲು ಮನುಷ್ಯತ್ವ ಅವಶ್ಯಕ: ಸಾಲೂರು ಹಿರಿಯ ಶ್ರೀಗಳು
ಸಂಜೆವಾಣಿ ವಾರ್ತೆ
ಹನೂರು ಆ 3 :- ಕತ್ತಲೆ ಓಡಿಸಲು ಬೆಳಕಿನ ಅನಿವಾರ್ಯತೆ ಹೇಗೆ ಅವಶ್ಯವೋ ಹಾಗೆಯೇ ಇಂದಿನ ಅಶಾಂತಿಯನ್ನು ಹೋಗಲಾಡಿಸಲು ಮನುಷತ್ವ ಅವಶ್ಯಕವಾಗಿದೆ ಎಂದು ಸಾಲೂರು ಬೃಹನ್ಮಠ ಪಟ್ಟದ ಹಿರಿಯ ಶ್ರೀಗಳು ಗುರುಸ್ವಾಮಿಗಳವರು ತಿಳಿಸಿದರು.
ತಾಲೂಕಿನ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಶ್ರೀ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಹಿರಿಯ ಶ್ರೀಗಳಾದ ಶ್ರೀ ಪಟ್ಟದ ಗುರುಸ್ವಾಮಿಗಳು ಅವರ ಜನ್ಮದಿನದ ವಿಶೇಷವಾಗಿ ಗುರುವಂದನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇನ್ನೊಬ್ಬರಿಗೆ ನೋವನ್ನು ನೀಡದೆ ಪರೋಪಕಾರ ಮಾಡದಿದ್ದರೂ ಪರೋ ಪದ್ರವವ ಮಾಡದೆ ಪರಸ್ಪರ ಪ್ರೀತಿಯಿಂದ ನಾವೆಲ್ಲ ಮನುಷ್ಯ ಕುಲದ ಬಂಧುಗಳು ಎಂದು ಸ್ಮರಿಸಿಕೊಳ್ಳುತ್ತಾ ಬಾಳಲು ಧರ್ಮದ ಆಳವಾದ ಪಾಠದ ಅಗತ್ಯವೇನು ಇಲ್ಲ.
ಬದಲಾಗಿ ಜೀವನದ ಸಾಗುವಿಕೆಯಲ್ಲಿ ದೊರೆಯುವ ಸಾಮಾನ್ಯ ಪಾಠವೇ ಸಾಕಾದೀತು. “ವಸುದೈವ ಕುಟುಂಬಕಂ’ ಎಂಬುದು ಮಾನವೀ ಯತೆಯ ಪಾಲಿಗೆ ಧರ್ಮವೇ ನೀಡಿದ ಪಾಠ ಧರ್ಮ ಎಂಬ ವಿಚಾರದ ಅಮಲು ಅತಿಯಾಗಿರುವುದರಿಂದಲೇ ಸಾವಿರ ಸಮಸ್ಯೆಗಳ ಕೂಪದೊಳಗೆ ಈ ಪ್ರಪಂಚ ನಲುಗುತ್ತಿದೆ ಎಂದು ಆಶೀರ್ವಚನ ನೀಡಿದರು.
ಬೃಹನ್ಮಠಧ್ಯಾಕ್ಷರು ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡಿ ಹಿರಿಯರು ಗುರುಗಳ ಮಾರ್ಗದರ್ಶನದಲ್ಲಿ ಸಾಗಿದರೆ ಮಾತ್ರ ಗುರಿ ಮುಟ್ಟಬಹುದು ಅವರ ಆಶೀರ್ವಾದ ಮಾರ್ಗದರ್ಶನ ನಮಗೆ ಶ್ರೀ ರಕ್ಷೆಯಾಗಲಿದೆ ಎಂದು ಆಶೀರ್ವಚನ ನೀಡಿದರು.
ಪ್ರಾಧಿಕಾರದ ಕಾರ್ಯದರ್ಶಿ ರಘು ಮಾತನಾಡಿ ಪ್ರತಿಯೊಬ್ಬರ ಜೀವನದಲ್ಲಿಯು ಗುರುವಿನ ಸ್ಥಾನವು ಬಹುದೊಡ್ಡದು. ಗುರುವಿನ ಮಾರ್ಗದರ್ಶನವಿದ್ದರೆ ಮಾತ್ರ ಆ ವ್ಯಕ್ತಿಯು ಒಂದೊಳ್ಳೆ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀ ಮಠದ ಸದ್ಬಕ್ತರು ಬೇಡಗಂಪಣ ಜನಾಂಗದವರು. ಮಹದೇಶ್ವರರ ದೇವರ ಗುಡ್ಡರು. ಶಾಲಾ ಕಾಲೇಜಿನ ಸಿಬ್ಬಂದಿಗಳು ವಿದ್ಯಾರ್ಥಿಗಳು ಇದ್ದರು.