ಮುಂಬರುವ ಜಿ.ಪಂ., ತಾ.ಪಂ. ಚುನಾವಣೆಗೆ ಸನ್ನದ್ಧರಾಗಿ: ಮಲ್ಲಿಕಾರ್ಜುನ ಲೋಣಿ
ಸಂಜೆವಾಣಿ ವಾರ್ತೆ,
ವಿಜಯಪುರ,ಆ.೩:ಮುಂಬರುವ ಜಿ.ಪಂ., ತಾ.ಪಂ. ಚುನಾವಣೆಗೆ ಜಿಲ್ಲಾ, ತಾಲೂಕು ಮಟ್ಟದ ಎಲ್ಲ ಅಧ್ಯಕ್ಷರು, ಕರ‍್ಯಕರ್ತರು ಈಗಿನಿಂದಲೇ ಸನ್ನದ್ಧರಾಗಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಅವರು ಸೂಚಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈಗಿನಿಂದಲೆಯೇ ಪಕ್ಷದ ಕಾರ್ಯಕರ್ತರ ಜೊತೆಗೆ ಸಂಪರ್ಕ ವಹಿಸಿ ಜಿಲ್ಲಾ ಹಾಗಾ ತಾಲೂಕು ಮಟ್ಟದಲ್ಲಿ ಎಲ್ಲ ತಾಲೂಕು ಅಧ್ಯಕ್ಷರುಗಳು ತುಂಬಾ ಜಾಗೃತರಾಗಿ ಕೆಲಸ ಮಾಡಬೇಕು. ಮಹಿಳೆಯರು ಹೆÀಚ್ಚಿನ ಸಂಖ್ಯೆಯಲ್ಲಿ ಜಿಲ್ಲಾ ಹಾಗೂ ಬ್ಲಾಕ್ ಮಟ್ಟದಲ್ಲಿ ಪಕ್ಷವನ್ನು ಇನ್ನೂ ಹೆಚ್ಚಿಗೆ ಸಂಘಟನೆ ಮಾಡಬೇಕೆಂದು ಸಲಹೆ ನೀಡಿದರು.
ಬರುವ ದಿನಗಳಲ್ಲಿ ತಮ್ಮ ಬ್ಲಾಕ್ ಮಟ್ಟದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರವಾಸ ಕೈಗೊಳ್ಳಲಿದ್ದು, ತಮ್ಮ ಬ್ಲಾಕ್ ಮಟ್ಟದ ಎಲ್ಲ ಪದಾಧಿಕಾರಿಗಳ ಸಭೆ ನಡೆಸಿ ಪೂರ್ವ ತಯಾರಿ ಮಾಡಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತಾಲೂಕಾ ಅಧ್ಯಕ್ಷರುಗಳು ಹಾಗೂ ಮಹಿಳಾ ಪದಾಧಿಕಾರಿಗಳು ತಮ್ಮ ಸಮಸ್ಯೆಗಳ ಕುರಿತು ಚರ್ಚಿಸಿದರು. ಹಲವು ಮಹಿಳಾ ಪದಾಧಿಕಾರಿಗಳು ಪಕ್ಷದ ಸಂಘಟನೆಯ ಕುರಿತು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾವತಿ ತುಂಗಳ ಅವರು ಮಾತನಾಡಿ, ಎಲ್ಲ ಪದಾಧಿಕಾರಿಗಳು ಮುಂಬರುವ ಚುನಾವಣೆಯಲ್ಲಿ ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡು ಪಕ್ಷದ ಸಲುವಾಗಿ ಪ್ರಯತ್ನಿಸಬೇಕೆಂದು ಸಲಹೆ ನೀಡಿದರು
ಜಿಲ್ಲಾ ಉಪಾಧ್ಯಕ್ಷೆ ಸುಜಾತಾ ಸಿಂಧೆ, ಪ್ರಮುಖರಾದ ಗಂಗೂಬಾಯಿ ಧುಮಾಳೆ, ಭಾರತಿ ದೊಡಮನಿ, ಸುಮಿತ್ರಾ ಶಿರಗೂರ, ಸುಗಂದಾ ಪಾಟೀಲ, ಜಯಶ್ರೀ ಕಾಲೆಬಾಗ, ಶೋಭಾ ರಾಠೋಡ, ಶೈಲಾಶ್ರೀ ಜಾಧವ, ರಂಜನಾ ಕಿಚಡಿ, ಅಂಬಿಕಾ ಪಾಟೀಲ, ಜಯಶ್ರೀ ಹದನೂರ, ಆಸ್ಮಾ ಕಾಲೇಬಾಗ, ಹಮೀದಾ ಪಟೇಲ, ಸಂಗಮ್ಮ ಹಚಡದ, ಸಮೀಮಾ ಅಕ್ಕಲಕೋಟ, ಸುಜಾತಾ ಜಂಗಮಶೆಟ್ಟಿ, ರುಕ್ಮಿಣಿ ರಾಠೋಡ, ಗಂಗೂಬಾಯಿ ಹಚಡದ, ಶೈಲಾ ಹೊಸಮನಿ, ಬೋರಮ್ಮ ಬಜಾರ, ಮಂಜುಳಾ ಬಡಿಗೇರ, ಸಂಗಮ್ಮ ಹಚಡದ, ಕವಿತಾ ವಾಘಮೋರೆ, ಜ್ಯೋತಿ ಕುಂಬಾರ, ನಿರ್ಮಲಾ ನಾಗನೂರ, ಕಾವ್ಯಾ ತಡಗಾರ, ನೀಲಮ್ಮ ಪಾಟೀಲ, ಅಶ್ವಿನಿ ಪಾಟೀಲ ಹಾಗೂ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.