ಪ್ರಕಾಶ ಚವ್ಹಾಣ ರಾಷ್ಟç ಮಟ್ಟದ ಯೋಗಾಸನ ಚಾಂಪಿಯನ್ ಶಿಪ್‌ಗೆ ಆಯ್ಕೆ
ಸಂಜೆವಾಣಿ ವಾರ್ತೆ,
ವಿಜಯಪುರ,ಆ.೩:ಕರ್ನಾಟಕ ರಾಜ್ಯ ಯೋಗಾಸನ ಚಾಂಪಿಯನ್ ಶಿಫ್‌ನಲ್ಲಿ ವಿಜಯಪುರ ನಗರದ ಬೇಗಂ ತಲಾಬ್ ತಾಂಡಾದ ಕುಮಾರ ಪ್ರಕಾಶ ಚವ್ಹಾಣ ಅವರು ಗೋಲ್ಡ್ ಮೆಡಲ್ ಪಡೆದು ರಾಷ್ಟ್ರ ಮಟ್ಟದ ಯೋಗಾಸನ ಚಾಂಪಿಯನ್ನ ಶಿಫ್‌ಗೆ ಆಯ್ಕೆ ಆಗಿದ್ದಾರೆ.
ಚಿಕ್ಕಮಗಳೂರ ಜಿಲ್ಲೆಯ ಕಡೂರ ತಾಲೂಕಿನಲ್ಲಿ ನಡೆದ ರಾಜ್ಯ ಮಟ್ಟದ ಯೋಗಾಸನ ಹಾಗೂ ಕ್ರೀಡಾ ಚಾಂಪಿಯನ್‌ಶಿಫ್‌ನಲ್ಲಿ ೨೫-೩೦ ವಯಸ್ಸಿನ ಪುರುಷರ ವಿಭಾಗದಲ್ಲಿ ಭಾಗವಹಿಸಿ ಕುಮಾರ ಪ್ರಕಾಶ ಚವ್ಹಾಣ ಪ್ರಥಮ ಸ್ಥಾನದೊಂದಿಗೆ ಗೋಲ್ಡ್ ಮೆಡಲ್ ಪಡೆದು ರಾಷ್ಟ್ರಮಟ್ಟಕ್ಕೆ ಯೋಗಾಸನ ಚಾಂಪಿಯನ್ನ ಶಿಫ್‌ಗೆ ಆಯ್ಕೆಯಾಗಿದ್ದಾರೆ.
ಕುಮಾರ ಪ್ರಕಾಶ ಚವ್ಹಾಣ ಅವರು ಕರ್ನಾಟಕ ರಾಜ್ಯದಿಂದ ಸತತವಾಗಿ ೩ ನೇ ಬಾರಿ ರಾಷ್ಟ್ರಮಟ್ಟಕ್ಕೆ ಆಯ್ಕೆ ಆಗಿರುವದು ಸಂತಸದ ಸಂಗತಿಯಾಗಿದೆ. ಪ್ರಕಾಶ ಚವ್ಹಾಣ ಹಾಗೂ ಅವರ ಯೋಗ ಗುರುಗಳಾದ ರಮೇಶ ದಿನ್ನಿ ಅವರನ್ನು ವಿಜಯಪುರ ಜಿಲ್ಲಾ ಅಮೇಚೂರ ಯೋಗಾಸನ ಅಸೋಸಿಯೇಶನ್ ಅಧ್ಯಕ್ಷ ಸಿದರಾಯ ಬಿದರಿ, ಉಪಾಧ್ಯಕ್ಷÀ ಶ್ರೀನಾಥ ಬೆಂಕಿ [ ವಕೀಲರು ] ಕಾರ್ಯದರ್ಶಿ ಸುರೇಶ ಆನಂದಿ ಅವರು ಸಂಘದ ಎಲ್ಲ ಸದಸ್ಯರು ಇವರ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.
೨೦೨೨ ರಲ್ಲಿ ನಡೆದ ಚಿಕ್ಕಮಗಳೂರ ಜಿಲ್ಲೆಯ ಕಡೂರ ತಾಲೂಕಿನಲ್ಲಿ ನಡೆದ ರಾಜ್ಯ ಮಟ್ಟದ ಯೋಗಾಸನ ಹಾಗೂ ಕ್ರೀಡಾ ಚಾಂಪಿಯನ್‌ಶಿಫ್‌ನಲ್ಲಿ ತೃತೀಯ ಸ್ಥಾನ, ವಿಜಯಪುರದ ನಾಗೂರ ಆರ್ಯುವೇದಿಕೆ ಮೆಡಿಕಲ್ ಕಾಲೇಜ್‌ನಲ್ಲಿ ನಡೆದ ೨೦೨೩ ರಲ್ಲಿ ರಾಜ್ಯ ಮಟ್ಟದ ಯೋಗಾಸನ ಹಾಗೂ ಕ್ರೀಡಾ ಚಾಂಪಿಯನ್ ಶಿಫ್‌ನಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.