ಹುಟ್ಟಿದೂರು, ಕಲಿತ ಶಾಲೆ,ಕಲಿಸಿದ ಗುರುವಿನ ಸ್ಮರಣೆಯಿರಲಿ
ಸಂಜೆವಾಣಿ ವಾರ್ತೆ
ದಾವಣಗೆರೆ ಆ 2; ಶಿಕ್ಷಣ ಮಗುವನ್ನು ಜ್ಞಾನಿಯನ್ನಾಗಿ ಮಾದುವುದರೊಂದಿಗೆ ತನ್ನ ಗುರಿ ಸಾಧಿಸಲು ನೆರವಾಗುತ್ತದೆ. ಸಮಾಜದಲ್ಲಿ ವ್ಯಕ್ತಿ ಎತ್ತರೆತ್ತರಕ್ಕೆ ಬೆಳೆಯಲು ದಾರಿದೀಪವಾಗುತ್ತದೆ. ಆದ್ದರಿಂದ  ಹುಟ್ಟಿದ ಊರು, ಕಲಿತ ಶಾಲೆ, ಕಲಿಸಿದ ಗುರುಗಳನ್ನು ಯಾವಾಗಲೂ ಮರೆಯಬಾರದು ಎಂದು ದಾನಿಗಳಾದ ರಾಮಗೊಂಡನಹಳ್ಳಿಯ ಹೆಬ್ಬಾಳ್ ದಯಾನಂದ್  ತಿಳಿಸಿದರು.ಅವರು  ದಾವಣಗೆರೆ ದಕ್ಷಿಣ ವಲಯದ ರಾಮಗೊಂಡನಹಳ್ಳಿ ಯ ಸರ್ಕಾರಿ ಪ್ರೌಢಶಾಲೆ ಯಲ್ಲಿ ರೋಟರಿ ಕ್ಲಬ್ ವಿದ್ಯಾನಗರ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಟ್ರ್ಯಾಕ್ ಸೂಟ್ ವಿತರಣಾ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಟ್ರ್ಯಾಕ್ ಸೂಟ್ ವಿತರಿಸಿ ಮಾತನಾಡಿದರು.ಟ್ರ್ಯಾಕ್ ಸೂಟ್ ಧರಿಸಿರುವ ಮಕ್ಕಳನ್ನು ನೋಡಿದಾಗ ತುಂಬಾ ಸಂತೋಷ ವಾಗುತ್ತಿದೆ. ಸರ್ಕಾರಿ ಶಾಲೆಯ ಮಕ್ಕಳು ಯಾವುದೇ ಖಾಸಗಿ ಶಾಲೆಗಳನ್ನು ಮೀರಿಸುವಂತೆ ಅಭ್ಯಾಸ ಮಾಡಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಇನ್ನೂ ಹೆಚ್ಚಿನ ಮಾರ್ಗದರ್ಶನ ಮಾಡಬೇಕು. ಆಗ ಸರ್ಕಾರಿ ಶಾಲೆಗಳಿಗೆ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುವುದರಲ್ಲಿ ಸಂದೇಹವಿಲ್ಲ ಎಂದರು.ರೋಟರಿ ಕ್ಲಬ್ ವಿದ್ಯಾನಗರ ದಾವಣಗೆರೆ ಇದರ ಅಧ್ಯಕ್ಷರಾದ ರೋ ಮಳವಳ್ಳಿಎಸ್ ಎನ್ ರವರು ಮಾತನಾಡಿ ಸಹಾಯವನ್ನು ಬೇಡಿ ಬೆಳೆದ ವ್ಯಕ್ತಿ ಬೇರೆಯವರಿಗೆ  ಸಹಾಯವನ್ನು ಮಾಡುತ್ತಾನೆ. ಶಾಲೆಗಳ ಅಭಿವೃದ್ಧಿಗೆ ದಾನಿಗಳಿಂದ ಸಹಾಯ ಬೇಡಿ ಪಡೆಯುವಂತೆ ಸಲಹೆ ನೀಡಿದರು.