ನಿವೃತ್ತಿರ ಮಾರ್ಗದರ್ಶನ ಸಮಾಜಕ್ಕೆ ಸಿಗಲಿ
ಕೋಲಾರ,ಆ,೩- ಸುದೀರ್ಘ ಸೇವಾ ವೃತ್ತಿಯಿಂದ ನಿವೃತ್ತರಾದವರ ಮಾರ್ಗದರ್ಶನ ಸಮಾಜಕ್ಕೆ ಸದಾ ಸಿಗುವಂತಾಗಲಿ ಎಂದು ಭಾರತ ಸೇವಾದಳ ಗೌರವಾಧ್ಯಕ್ಷ ಸಿಎಂಆರ್ ಶ್ರೀನಾಥ್ ಹೇಳಿದರು.
ನಗರದ ಸರ್ವಜ್ಞ ಉದ್ಯಾನದಲ್ಲಿ ಶ್ರೀಗೋಕುಲ ಮಿತ್ರಬಳಗದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯಲ್ಲಿ ೩೧ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಸಹಾಯಕ ಸಬ್‌ಇನ್ಸ್‌ಪೆಕ್ಟರ್ ಪ್ರಸಾದ್‌ರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಪೊಲೀಸ್ ಇಲಾಖೆಯಲ್ಲಿ ಪ್ರಾಮಾಣಿಕ ಹಾಗೂ ದಕ್ಷತೆಯಿಂದ ಸೇವೆ ಸಲ್ಲಿಸಿದ ಪ್ರಸಾದ್ ಅವರ ವೃತ್ತಿ ಬದುಕು ಇತರರಿಗೂ ಮಾದರಿಯಂತಿತ್ತು, ನಿವೃತ್ತಿ ನಂತರವೂ ಅವರ ಸಲಹೆ ಇಲಾಖೆ ಹಾಗೂ ಸಮುದಾಯಕ್ಕೆ ಸಿಗಬೇಕಿದೆ ಎಂದರು.
ಬೀಳ್ಕೊಡುಗೆ ಸ್ಪೀಕರಿಸಿದ ನಿವೃತ್ತ ಪೊಲೀಸ್ ಅಧಿಕಾರಿ ಪ್ರಸಾದ್ ಮಾತನಾಡಿ, ೩೧ ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಯಾವುದೇ ಟೀಕೆ ಟಿಪ್ಪಣಿ ಎದುರಿಸದೆ ವಾದ ವಿವಾದಗಳಲ್ಲಿ ಸಿಲುಕದೆ ಸೇವೆ ಸಲ್ಲಿಸಿದ ತೃಪ್ತಿ ತಮಗಿದೆ, ಆತ್ಮೀಯರೆಲ್ಲರೂ ತಮ್ಮ ನಿವೃತ್ತಿ ಜೀವನಕ್ಕೆ ಶುಭ ಕೋರುತ್ತಿರುವುದು ಸಂತಸ ತಂದಿದೆ ಎಂದರು.
ಪೊಲೀಸ್ ಗುಪ್ತದಳ ನಿವೃತ್ತ ಅಧಿಕಾರಿ ಅಶ್ವತ್ಥ್ ಮಾತನಾಡಿ, ತಂದೆಯ ಹಾದಿಯಲ್ಲಿ ಪೊಲೀಸ್ ಇಲಾಖೆಗೆ ಸೇರಿದ ಪ್ರಸಾದ್, ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರೂ ಎಂದಿಗೂ ಯಾರಿಂದಲೂ ಮಾತು ಕೇಳಿದವರಲ್ಲ, ಇವರ ಸಲಹೆಗಳನ್ನು ಇಲಾಖೆಯ ಅನೇಕ ಪೊಲೀಸ್ ಅಧಿಕಾರಿಗಳು ಸ್ಪೀಕರಿಸುತ್ತಿದ್ದರೂ, ನಿವೃತ್ತಿ ನಂತರವೂ ಪೊಲೀಸ್ ಇಲಾಖೆಗೆ ಇವರ ಸಲಹೆ ಸೂಚನೆ ಸೇವೆಯ ಅಗತ್ಯವಿದೆ ಎಂದರು.
ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್, ಕಾರ್ಯದರ್ಶಿ ಎಸ್.ಸುಧಾಕರ್, ಶ್ರೀಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ಕೆ.ಆರ್.ತ್ಯಾಗರಾಜು, ನಾಗೇಂದ್ರ, ಜ್ಯೂಸ್ ನಾರಾಯಣಸ್ವಾಮಿ, ಪೊಲೀಸ್ ರಾಮಮೂರ್ತಿ, ಆರೋಗ್ಯ ಇಲಾಖೆಯ ಶ್ರೀನಿವಾಸ್, ರಾಧಣ್ಣ, ಪ್ರಸನ್ನ, ನಾರಾಯಣ್, ಯಲ್ಲಪ್ಪ, ಮಿಲಿಟರಿ ಮುನಿಯಪ್ಪ, ಆಡಿಟರ್ ನರಸಿಂಹಮೂರ್ತಿ, ಕೀಲುಕೋಟಿ ರವಿ, ಎಚ್.ಕೆ.ರಾಘವೇಂದ್ರ, ಚಂದ್ರು, ರಮಣ ಹಾಜರಿದ್ದು ನಿವೃತ್ತಿಯಾಗುತ್ತಿರುವ ಪ್ರಸಾದ್‌ರಿಗೆ ಶುಭ ಕೋರಿದರು.