ವಿಜೃಂಬಣೆಯಿAದ ಜರುಗಿದ ಮರಗಮ್ಮದೇವಿ ಜಾತ್ರೋತ್ಸವ
ತಾಳಿಕೋಟೆ:ಆ.೩: ಪಟ್ಟಣದ ಎಂ.ಜಿ.ಮುಖ್ಯರಸ್ತೆಯ ಮಗ್ಗಲಿರುವ ಆಧಿಕಾಲದಿಂದಲೂ ೩ ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರಲಾಗುತ್ತಿರುವ ಶ್ರೀ ಮರಗಮ್ಮದೇವಿಯ ಜಾತ್ರೋತ್ಸವವು ಶುಕ್ರವಾರರಂದು ಭಕ್ತಿಭಾವದೊಂದಿಗೆ ಜರುಗಿತು.
ಜಾತ್ರೋತ್ಸವ ಅಂಗವಾಗಿ ಶ್ರೀ ದೇವಿಯ ಉತ್ಸವ ಮಹಾಮೂರ್ತಿಗೆ ಮಹಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾಮಂಗಳಾರತಿ ಜರುಗಿತಲ್ಲದೇ ನಂತರ ಸುಮಂಗಲೆಯರಿAದ ಕುಂಭ ಮೇಳ ಜರುಗಿ ಸಮಸ್ತ ಭಕ್ತಾಧಿಗಳಿಗಾಗಿ ಅನ್ನಪ್ರಸಾದ ಜರುಗಿತು.
ಈ ಉತ್ಸವದ ನೇತೃತ್ವವನ್ನು ವಿಠ್ಠಲ ಘನಾತೆ, ಪರಶುರಾಮ ಘನಾತೆ, ಚಂದ್ರಕಾAತ ಘನಾತೆ, ಮಲ್ಲಯ್ಯ ಲೋಕರೆ, ರವಿ ಟೇಲರ ಮೊದಲಾದವರು ವಹಿಸಿದ್ದರು.