೩ ಆರೋಪಿಗಳ ಬಂಧನ- ೮,೫ ಲಕ್ಷ ರೂ ಮೌಲ್ಯದ ೧೨ ದ್ವಿಚಕ್ರ ವಾಹನ ವಶ
ಮುಳಬಾಗಿಲು,ಆ,೩- ಮನೆಯ ಮುಂದೆ ನಿಲ್ಲಿಸಿದ್ದ ವಾಹನವನ್ನು ಚೋರರು ಅಪಹರಿಸಿ ಕೊಂಡು ಪರಾರಿಯಾಗಿದ್ದ ಪ್ರಕರಣವನ್ನು ಮುಳಬಾಗಿಲು ಗ್ರಾಮಾಂತರ ಪೊಲೀಸರು ಪತ್ತೆ ಹಚ್ಚಿ ಮೂವರು ಅರೋಪಿಗಳನ್ನು ಬಂಧಿಸಿ, ವಿಚಾರಣೆಯಲ್ಲಿ ಕಳವು ಮಾಡಲಾಗಿದ್ದ ೮,೫ ಲಕ್ಷ ರೂ ಮೌಲ್ಯದ ೧೨ ದ್ವಿಚಕ್ರ ವಾಹನಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆಸಿ ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಪಟ್ಟಣದ ಬೂಸಲಗುಂಟೆಯ ಮಹ್ಮದ್ ಅಸೀಫ್ ಬಿನ್ ಸೈಯದ್ ಸಲಿಂ ಹಾಗೂ ಮಹಮ್ಮದ್ ವಸೀಂ ಬಿನ್ ಸೈಯದ್ ಸಲೀಂ ಮತ್ತು ಗಣೇಶ ಪಾಳ್ಯದ ಮುಬಾರಕ್ ಪಾಷ ಮುಬ್ಜ ಬಿನ್ ಅನಿಸ್ ಪಾಷ ಎಂದು ಗುರುತಿಸಲಾಗಿದೆ.
ಕಳೆದ ಜುಲೈ ೨೭ ರಂದು ತಾಲ್ಲೂಕಿನ ನರಸೀಪುರ ದಿನ್ನೆ ಗ್ರಾಮದ ಕಿರಣ್ ಸಿಂಗ್ ಎಂಬುವರು ಎಪಿ-೦೩-ಬಿಸಿ-೩೦೪೦ ಸಂಖ್ಯೆಯ ದ್ವಿಚಕ್ರ ವಾಹನವನ್ನು ಮನೆ ಮುಂದೆ ನಿಲ್ಲಿಸಿದ್ದು ಮಾರನೇ ದಿನ ಬೆಳಿಗ್ಗೆ ನೋಡಲಾಗಿ ದ್ವಿಚಕ್ರ ವಾಹನವು ನಾಪತ್ತೆಯಾಗಿತ್ತು. ಈ ಸಂಬಂಧವಾಗಿ ವಾಹನವನ್ನು ಪತ್ತೆ ಮಾಡಿ ಕೊಡಬೇಕೆಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದನ್ನು ದಾಖಲು ಮಾಡಿ ಕೊಳ್ಳಲಾಗಿತ್ತು
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಅವರ ಮಾರ್ಗದರ್ಶನದಲ್ಲಿ ಡಿ.ವೈ.ಎಸ್.ಪಿ. ನಂದಕುಮಾರ್ ಅವರ ನೇತ್ರತ್ವದಲ್ಲಿ ಗ್ರಾಮಾಂತರ ಠಾಣೆಯ ಪಿ.ಎಸ್.ಐ. ವಿಠಲ್ ವೈ ತಳವಾರ್, ಮಮತ ಎಲ್, ಹಾಗೂ ಸಿಬ್ಬಂದಿಗಳಾದ ಸುರೇಶ್, ವೆಂಕಟರಾಘನ್, ರಾಮಾಂಜಿ, ಮಧು, ಇವರ ತಂಡವು ಅರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಕಾರ್ಯವೈಖರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ.