ತಾಯಿಯ ಹಾಲು ಮಗುವಿಗೆ ಸಂಜೀವಿನಿ
ಕೋಲಾರ,ಆ,೩- ತಾಯಿಯ ಹಾಲು ಮಗುವಿಗೆ ಸಂಜೀವಿನಿ ಇದ್ದಂತೆ,ರೋಗ ನಿರೋಧಕ ಅಂಶಗಳಿಂದ ಒಳಗೊಂಡಿರುತ್ತದೆ. ಉತ್ತಮವಾದ ಪೌಷ್ಟಿಕಾಂಶಗಳಿಂದ ಕೊಡಿರುತ್ತದೆ ಇದರಿಂದ ಮಗುವು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಧೃಢವಾದ ಬೆಳವಣಿಗೆಗೆ ಪೊರಕವಾಗಿರುತ್ತದೆ.ಪತ್ರಿಯೊಬ್ಬ ತಾಯಂದಿರು ತಮ್ಮ ಮಕ್ಕಳಿಗೆ ಕನಿಷ್ಠ ೬ ತಿಂಗಳಾದರೂ ಹಾಲನ್ನು ಕುಡಿಸುವಂತಾಗ ಬೇಕೆಂದು ಜಿಲ್ಲಾಧಿಕಾರಿ ಅಕ್ರಂಪಾಷ ಕರೆ ನೀಡಿದರು,
ನಗರದ ಜಿಲ್ಲಾ ಎಸ್.ಎನ್.ಆರ್. ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆವತಿಯಿಂದ ತಾಯಿ ಮತ್ತು ಮಕ್ಕಳ ವಿಭಾಗದಲ್ಲಿ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು, ರಾಜ್ಯ ಸರ್ಕಾರವು ಪ್ರಸಕ್ತ ಸಾಲಿನಲ್ಲಿ ಈ ಕಾರ್ಯಕ್ರಮದ ಪ್ರಯುಕ್ತ ಕೊರತೆಗಳನ್ನು ಕೊನೆಗೊಳಿಸಿ ಸರ್ವರಿಗೂ ಸ್ತನ್ಯ ಪಾನದ ಬೆಂಬಲ ನೀಡಿ ಎಂಬ ವಿಶೇಷ ಘೋಷಣೆಯನ್ನು ಪ್ರಕಟಿಸಿದೆ ಎಂದರು,
ಹಿಂದಿನ ಕಾಲದಲ್ಲಿ ಶಿಕ್ಷಣವಂತರು ಇಲ್ಲದಿದ್ದರೂ ಸಹ ಅವರಲ್ಲಿ ವೈಜ್ಞಾನಿಕತೆಯ ಅರಿವು ಇತ್ತು ಇದರಿಂದಾಗಿ ಮಗುವಿನ ಅರೋಗ್ಯದ ಮೇಲೆ ಉಂಟಾಗುತ್ತಿದ್ದ ವೈಪರಿತ್ಯಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿತ್ತು, ಆ ಕಾಲದಲ್ಲಿ ಇಷ್ಟೊಂದು ರೋಗಗಳು ಇರಲಿಲ್ಲ. ಅದರೆ ಅಧುನಿಕತೆಯ ಯುಗದಲ್ಲಿ ಅವೈಜ್ಞಾನಿಕತೆಯ ಮೌಡ್ಯಗಳಿಂದ ಕೊಡಿರುವುದು ಕಾಣಬಹುದಾಗಿತ್ತು ಎಂದರು.
ಇಂದು ಶೇ ೬೦ ರಷ್ಟು ಮಾತ್ರ ತಾಯಂದಿರು ಮಾತ್ರ ತಮ್ಮ ಮಕ್ಕಳಿಗೆ ಸ್ತನ್ಯಪಾನ ಮಾಡಿಸುತ್ತಾರೆ.ಉಳಿದವರು ಮಾಡ್ಯತೆಗೆ ಒಳಗಾಗಿ ಮಗುವಿಗೆ ಹಾಲು ಕುಡಿಸುವುದನ್ನು ನಿಲ್ಲಿಸುತ್ತಾರೆ. ಹಾಗೂ ತಮ್ಮ ದೈಹಿಕ ಫೀಟ್‌ನೆಸ್ ಹಾಳಾಗುತ್ತದೆ ಎಂದು ೨-೩ ತಿಂಗಳಿಗೆ ಹಾಲು ಕುಡಿಸುವುದನ್ನು ಸ್ಥಗಿತಗೊಳಿಸಿ ಕೃತಕವಾದ ಹಾಲಿನ ಪುಡಿ ಇತರೆಗಳಿಗೆ ಮೊರೆ ಹೋಗುತ್ತಿರುವ ಹಿನ್ನಲೆಯಲ್ಲಿ ಮಕ್ಕಳು ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿರುವುದು ಕಳವಳಕಾರಿಯಾಗಿದೆ ಎಂದು ಹೇಳಿದರು,
ಕೋಲಾರದ ಜಿಲ್ಲಾ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಇರುವಂತ ಸೌಲಭ್ಯಗಳು ಬೇರೇಲ್ಲೂ ಇಲ್ಲ. ತಾಯಿ ಮತ್ತು ಮಗವಿನ ಪ್ರತ್ಯೇಕ ವಿಭಾಗ ಇದ್ದು ಡಿಜಿಟಲ್ ನರ್‍ವ ಸೆಂಟರ್ ಒಳಗೊಂಡಿದೆ. ಗರ್ಭಿಣಿ ಮತ್ತು ಬಾಣಂತಿಯರಿಗೆ ಅಗತ್ಯವಾದ ವೈದ್ಯಕೀಯ ಪೌಷ್ಟಿಕಾಂಶದ ಸೌಲಭ್ಯಗಳನ್ನು ಒಳಗೊಂಡಿದೆ. ತಾಯಿ ಮಗುವಿನ ಮರಣಗಳ ಸಂಖ್ಯೆ ಜಿಲ್ಲಾ ಆಸ್ಪತ್ರೆಯಲ್ಲಿ ಕಡಿಮೆ ಸಂಖ್ಯೆಯಲ್ಲಿದೆ. ಉತ್ತಮವಾದ ತಜ್ಞರಿಂದ ಗುಣಮಟ್ಟದ ಚಿಕಿತ್ಸೆಗಳನ್ನು ನೀqಲಾಗುತ್ತಿದೆ. ಗರ್ಭಿಣಿ ಮತ್ತು ಬಾಣಂತಿಯರಿಗೆ.ಎಲ್ಲಾರ ರೀತಿಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದೆ ಯಾವೂದೇ ಕೊರತೆ ಇಲ್ಲದೆ ನೆಮ್ಮದಿಯ ಅರೈಕೆ ಸಿಗಲಿದೆ. ಈ ಕುರಿತು ಇತರರಲ್ಲಿ ಅರಿವು ಮೋಡಿಸುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ಸದ್ಬಳಿಸಿ ಕೊಳ್ಳುವಂತಾಗ ಬೇಕೆಂದರು,
ತಾಯಿಯ ಹಾಲು ಅಮೃತ –
ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ. ಎನ್.ಸಿ.ನಾರಾಯಣಸ್ವಾಮಿ ಪ್ರಸ್ತಾವಿಕ ನುಡಿಗಳಾಡಿ ತಾಯಿಯ ಹಾಲು ಮಗುವಿಗೆ ಅಮೃತದ ಸಮಾನವಾಗಿರುತ್ತದೆ. ಅತ್ಯಂತ ಅಮೂಲ್ಯ ಹಾಗೂ ಶ್ರೇಷ್ಟಕರವಾದದ್ದು, ಮಗು ಜನಿಸಿದ ೧ ಗಂಟೆಯ ಒಳಗೆ ಮಗವಿಗೆ ತಾಯಿ ಹಾಲುಣಿಸ ಬೇಕು, ಕಾಂಗೊರು ಪ್ರಾಣಿ ತನ್ನ ಮಗುವನ್ನು ಹೊಟ್ಟೆಯ ಚೀಲದಲ್ಲಿಟ್ಟು ದಿನದ ೨೪ ಗಂಟೆ ಅರೈಕೆ ಮಾಡುವಂತೆ ತಾಯಿ ಮಗವನ್ನು ಅರೈಕೆ ಮಾಡುವಂತಾಗ ಬೇಕು ಎಂದು ತಿಳಿಸಿದರು,
ಬಾಣಂತಿ ಎಂದು ಹಿಂದಿನ ಕಾಲದ ಪಥ್ಯ ಇರುವುದನ್ನು ಬಿಟ್ಟು ಗುಣಮಟ್ಟದ ಪೌಷ್ಟಿಕಾಂಶದ ಆಹಾರಗಳನ್ನು ಸೇವಿಸಿದಾಗ ಮಗುವಿಗೆ ಉತ್ತಮ ಪೌಷ್ಠಿಕಾಂಶದ ಹಾಲು ಕುಡಿಸಿದಂತಾಗುವುದು ಇದರಿಂದ ಉತ್ತಮವಾದ ಆರೋಗ್ಯ ಹಾಗೂ ಬೆಳವಣಿಗೆಗೆ ಪೂರಕವಾಗಲಿದೆ. ಕನಿಷ್ಠ ೬ ತಿಂಗಳು ಮಗವಿಗೆ ಹಾಲು ಕುಡಿಸಿದಾಗ ಮಗುವಿನಲ್ಲಿ ಸುಧಾರಣೆ ಕಾಣಬಹುದಾಗಿದೆ. ಕಾಲ,ಕಾಲಕ್ಕೆ ಮಗುವಿಗೆ ವ್ಯಾಕ್ಸಿನ್ ಹಾಕಿಸುವುದನ್ನು ತಪ್ಪಿಸ ಬಾರದು, ಮಗುವಿಗೆ ಯಾವೂದೇ ಸೊಂಕು ತಗುಲದಂತೆ ಜಾಗೃತೆಯಿಂದ ಕಾಪಾಡ ಬೇಕು. ಪ್ರಾರಂಭದಲ್ಲಿಯೇ ವೈದ್ಯರ ಬಳಿ ತಪಾಸಣೆ ಮಾಡಿರುವುದರಿಂದ ಯಾವೂದೇ ಕಾಯಿಲೆಗಳು ಬೇಗನೆ ವಾಸಿಯಾಗಲು ಸಾಧ್ಯವಾಗುತ್ತದೆ ಎಂದು ಕಿವಿ ಮಾತು ತಿಳಿಸಿದರು,
ಮಕ್ಕಳ ತಜ್ಞ ಡಾ,ಬೀರೇಗೌಡರು ಮಾತನಾಡಿ ಈ ಹಿಂದೆ ಜಿಲ್ಲಾ ಎಸ್.ಎನ್.ಆರ್.ಸರ್ಕಾರಿ ಆಸ್ಪತ್ರೆಯಲ್ಲಿ ಸಮರ್ಪವಾದ ಸೌಲಭ್ಯಗಳು ಇರಲಿಲ್ಲ ತಜ್ಞರ ಕೊರತೆ ಈಗಾ ಸರ್ಕಾರವು ಎಲ್ಲಾ ವಿಧವಾದ ಸೌಲಭ್ಯಗಳನ್ನು ನೀಡಿದೆ. ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರಿಗೆ ವಿಶೇಷವಾದ ಎಂ.ಸಿ.ಹೆಚ್. ಹಾಗೂ ಎನ್.ಐ.ಸಿ. ನಿರ್ಮಾಣವಾದ ಮೇಲೆ ಹೊರಗಿನವರು ಜಿಲ್ಲಾ ಆಸ್ಪತ್ರೆಗೆ ರೆಫಾರ್ ಮಾಡುವಂತಾಗಿದೆ. ಹಲವಾರು ಯೋಜನೆಗಳನ್ನು ರೂಪಿಸಿ ಸಾಕಷ್ಟು ಸುಧಾರಣೆ ಕಂಡಿದೆ.ಸಾರ್ವಜನಿಕರು ಈ ಸೌಲಭ್ಯಗಳನ್ನು ಸದ್ಬಳಿಸಿ ಕೊಳ್ಳುವಂತಾಗ ಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ. ಮಮತ, ಆರ್.ಎಮ್.ಓ. ಡಾ.ಬಾಲಸುಂದರ್, ಮಕ್ಕಳ ತಜ್ಞ ಡಾ. ಕಮಲಾಕರ್ ಕೆ.ಆರ್. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಮ್.ಪ್ರೇಮ್ ಉಪಸ್ಥಿತರಿದ್ದು ಶೋಶೋಷ್ರಣಾ ಅಧೀಕ್ಷಕಿ ಎಸ್ ವಿಜಿಯಮ್ಮ ಸ್ವಾಗತಿಸಿ, ನಿರೂಪಿಸಿದರು
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಎಸ್ ಇನ್ ಆರ್. ಆಸ್ಪತ್ರೆಯಲ್ಲಿ ಮಿಲ್ಕ್ ಬ್ಯಾಂಕ್ ಉದ್ಘಾಟನೆ ಮಾಡಿದರು.