ತಾಳಿಕೋಟೆಯಲ್ಲಿಮಹಾರಾಣಾಪ್ರತಾಪಸಿಂಹ್ ಮೂರ್ತಿ ಪ್ರತಿಷ್ಠಾಪನೆಗೆ ಸಜ್ಜು
ತಾಳಿಕೋಟೆ:ಆ.೩: ದೇಶದ ಇತಿಹಾಸ ಕಾಪಾಡಲು ತಮ್ಮದೇ ಆದ ಹೋರಾಟ ನಡೆಸುವದರೊಂದಿಗೆ ದೇಶವನ್ನು ಉಳಿಸುವಲ್ಲಿ ಮುಖ್ಯ ಪಾತ್ರ ವಹಿಸಿದಂತಹ ಮಹಾರಾಣಾಪ್ರತಾಪಸಿಂಹ್ ಅವರ ಮೂರ್ತಿ ಪ್ರತಿಷ್ಠಾಪನೆಗೆ ತಾಳಿಕೋಟೆಯಲ್ಲಿಯ ರಜಪೂತ ಸಮಾಜ ಬಾಂದವರೇ ಸಜ್ಜಾಗಿದ್ದಾರೆ.
ಈ ಹಿಂದೆ ಮಹಾರಾಣಾಪ್ರತಾಪಸಿಂಹ್‌ರ ಮೂರ್ತಿ ಪ್ರತಿಷ್ಠಾಪನೆಗಾಗಿ ಕೆಲವು ರಾಜಕೀಯ ಮುಖಂಡರುಗಳಿಗೆ ಹಾಗೂ ಕೆಲವು ಧುರಿಣರಿಗೆ ಹೇಳಿದರೂ ಕೂಡಾ ಕೇವಲ ಮೀನ ಮೇಷ ಏಣಿಸುವ ಕಾರ್ಯ ನಡೆಯಿತಲ್ಲದೇ ಮೂರ್ತಿ ಪ್ರತಿಷ್ಠಾಪನೆಗೊಳ್ಳಲೇ ಇಲ್ಲಾ ಈ ವಿಷಯವನ್ನು ಅರೀತ ತಾಳಿಕೋಟೆಯ ರಜಪೂತ ಸಮಾಜದ ರಜಪೂತ ಕುಮಾರರೇ ಸಜ್ಜಾಗಿ ಜೂಲೈ ೨೦ ರಂದು ತಾವೇ ನಿರ್ಣಯ ಕೈಕೊಂಡು ಮಹಾರಾಣಾಪ್ರತಾಪಸಿಂಹ್ ಅವರ ಮೂಲ ಸ್ಥಳವಾದಂತಹ ರಾಜಸ್ಥಾನಕ್ಕೆ ತೆರಳಿ ಜೈಪೂರದಲ್ಲಿ ಮೂರ್ತಿ ನಿರ್ಮಾಣ ಮಾಡುತ್ತಿರುವ ಭಾರತೀಯ ಶಿಲ್ಪಕಲಾ ಕೇಂದ್ರಕ್ಕೆ ಬೆಟ್ಟಿ ನೀಡಿ ಸುಮಾರು ೩೩ ಲಕ್ಷ ಕೀಮ್ಮತ್ತಿನ ೧೫ ಅಡಿ ಎತ್ತರದ ಕುದುರಿ ಮೇಲೆ ಸವಾರಿ ಮಾಡುತ್ತಿರುವ ಮಹಾರಾಣಾಪ್ರತಾಪಸಿಂಹ್ ಅವರ ಪಂಚಲೋಹ ದಾತುವಿನ ಮೂರ್ತಿ ನಿರ್ಮಾಣ ಕಾರ್ಯಕ್ಕೆ ೩೩ ಜನ ರಜಪೂತ ಸಮಾಜ ಬಾಂದವರು ಅಲ್ಲಿ ತೆರಳಿ ಚಾಲನೆ ನೀಡಿ ೧೫ ದಿನದೊಳಗೆ ವಿವಿಧ ಪುಣ್ಯ ಕ್ಷೇತ್ರಗಳಿಗೆ ಬೆಟ್ಟಿ ನೀಡಿ ಅಗಸ್ಟ ೨ ಶುಕ್ರವಾರರಂದು ತಾಳಿಕೋಟೆಗೆ ಆಗಮಿಸಿದ್ದಾರೆ.
ಈ ರಜಪೂತ ಸಮಾಜ ಬಾಂದವರ ಆಗಮನದ ಸುದ್ದಿಯನ್ನು ಕೇಳಿದ ಸಮಾಜದ ಹಿತೈಷಿಗಳು, ಹಾಗೂ ಸಮಾಜ ಬಾಂದವರು ಆಗಮನದ ಸ್ಥಳಕ್ಕೆ ತೆರಳಿ ಪ್ರತಿಯೊಬ್ಬರಿಗೂ ಹೂಗುಚ್ಚವನ್ನು ನೀಡುವದರೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿದ್ದೇನು ಕಡಿಮೇನಿಲ್ಲಾ. ೧೫ ದಿವಸದ ಪ್ರವಾಸಿನಲ್ಲಿ ಮುಖ್ಯವಾಗಿ ಮಹಾರಾಣಾಪ್ರತಾಪಸಿಂಹ್ ಅವರ ಮೂರ್ತಿಯ ನಿರ್ಮಾಣದ ಕಾರ್ಯಕ್ಕೆ ಚಾಲನೆ ನೀಡಿದ ನಂತರ ತ್ರಿಂಬಕೇಶ್ವರ ದೇವಾಲಯ, ಓಂಕಾರೇಶ್ವರ, ಉಜ್ಜಯಿನಿ, ಕಾಲಬೈರವ, ಪಶುಪತಿನಾಥ, ಮಂದಸಾರ, ಛತ್ತಿಸಘಡ, ಸಾವರಿಯಾ, ಉದಯಪುರ, ಜೈಯಪೂರ, ಹಳದಿಘಾಟ, ಮಧುರಾ, ಅಯೋದ್ಯಾ, ವಾರಣಾಸಿ, ಯೊಳಗೊಂಡು ವಿವಿಧ ಕ್ಷೇತ್ರಗಳಿಗೆ ಹೋಗಿ ದೇವಸ್ಥಾನಗಳಲ್ಲಿ ಮಹಾಪೂಜೆ ಸಲ್ಲಿಸಿ ೪ ಜ್ಯೋತಿರ್ಲಿಂಗಗಳಿಗೂ ಬೆಟ್ಟಿ ನೀಡಿ ಮೂರ್ತಿ ಪ್ರತಿಷ್ಠಾಪನೆ ಒರೆಗೂ ಎಲ್ಲರೂ ಒಗ್ಗೂಡಿ ಈ ಮಹತ್ವದ ಕಾರ್ಯವನ್ನು ಯಶಸ್ವಿಗೊಳಿಸೋಣವೆಂಬ ಹರ್ಷ ವ್ಯಕ್ತಪಡಿಸಿದ ಈ ರಜಪೂತ ಸಮಾಜ ಬಾಂದವರು ತಾಳಿಕೋಟೆಗೆ ಶುಕ್ರವಾರರಂದು ಸಾಯಂಕಾಲ ೬ ಗಂಟೆಗೆ ಆಗಮಿಸಿದರು.
ಈ ಸೇವಾ ಕಾರ್ಯಕ್ಕೆ ತೆರಳಿದವರಲ್ಲಿ ರಜಪೂತ ಸಮಾಜದ ಅಧ್ಯಕ್ಷ ಹರಿಸಿಂಗ್ ಮೂಲಿಮನಿ, ಭರತಸಿಂಗ್ ಹಜೇರಿ, ಗೋವಿಂದಸಿAಗ್ ಗೌಡಗೇರಿ, ರಘುರಾಮಸಿಂಗ್ ಹಜೇರಿ, ಪ್ರಕಾಶ ಹಜೇರಿ, ಉಮರಸಿಂಗ್ ಗೌಡಗೇರಿ, ರತನಸಿಂಗ್ ಕೊಕಟನೂರ, ಬದಾನಸಿಂಗ್ ಹಜೇರಿ, ಸಂಜೀವಕುಮಾರ ಹಜೇರಿ, ಗೋವಿಂದ ಮೂಲಿಮನಿ, ದೇವಿಂದ್ರಸಿAಗ್ ಹಜೇರಿ, ಸುರೇಶ ಹಜೇರಿ, ಅರುಣ ದಡೇದ, ಮಂಜುನಾಥಸಿAಗ್ ಹಜೇರಿ, ಗಂಗಾರಾಮಸಿAಗ್ ವಿಜಾಪೂರ, ಗಂಗಾರಾಮ ಕೊಕಟನೂರ, ಗೋಪಾಲ ಹಜೇರಿ, ಅಲೌಕಸಿಂಗ್ ಗೌಡಗೇರಿ, ಮೊದಲಾದವರು ಪಾಲ್ಗೊಂಡಿದ್ದರು.