ಎದೆಹಾಲು ಮಗುವಿಗೆ ಸಂಪೂರ್ಣವಾದ ಆಹಾರ; ಡಾ.ಜಿ.ಎಸ್ ಲತಾ
ಸಂಜೆವಾಣಿ ವಾರ್ತೆ
ದಾವಣಗೆರೆ: ಸ್ತನ್ಯಪಾನ ಮಗುವಿನ ಉತ್ತಮ ಆರೋಗ್ಯಕ್ಕೆ ಸೋಪಾನ ಮಾತ್ರವಲ್ಲ ಹೆರಿಗೆ ನಂತರ ಹಾಲುಣಿಸುವು ದರಿಂದ ತಾಯಿಂದಿರಲ್ಲಿ ರಕ್ತಸ್ರಾವಕಡಿಮೆ ಮಾಡಿ ತಾಯಿಂದಿರ ಮರಣವನ್ನು ತಪ್ಪಿಸಲು ಸಹಾಯಕ ಎಂದು ಎಸ್.ಎಸ್. ಹೈಟೆಕ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮಕ್ಕಳ ವಿಭಾಗದ ಪ್ರಾಧ್ಯಾಪಕಿ ಡಾ.ಜಿ.ಎಸ್. ಲತಾ ತಿಳಿಸಿದರು. ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದಲ್ಲಿ ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಲ್ಲಿ ಸ್ತನ್ಯಪಾನದ ಅಂತವರನ್ನು ಕಡಿಮೆಗೊಳಿಸಿ ಎದೆಹಾಲುಣಿಸಲು ತಾಯಂದಿರನ್ನು ಪ್ರೋತ್ಸಾಹಿಸಿ.. ವಿಷಯ ಕುರಿತು ಮಾತನಾಡಿದರು.ಎದೆಹಾಲು ಮಗುವಿಗೆ ಸಂಪೂರ್ಣವಾದ ಆಹಾರ, ಮಕ್ಕಳಿಗೆ ಅತ್ಯುತ್ತಮ ಪೋಷಕಾಂಶಗಳ  ಒದಗಿಸುತ್ತದೆ. ಇದರಲ್ಲಿ ಶಿಶುಗಳ ಆರೋಗ್ಯಕರವಾದ ಬೆಳವಣಿಗೆಗೆ ಅಗತ್ಯವಿರುವ ವಿಟಮಿನ್, ಖನಿಜಗಳು, ಪ್ರೋಟಿನ್, ಕೊಬ್ಬಿನಾಂಶಗಳು ಸೇರಿವೆ ಎಂದು ತಿಳಿಸಿದರು.ಎದೆಹಾಲು ಮಕ್ಕಳ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮ್ಕಕಳ ಅತಿಸಾರ, ಶೀತ,ಕಫ ಮತ್ತು ಇತರೆ ಬ್ಯಾಕ್ಟಿ ರೀಯಾ, ವೈರಸ್ ದಾಳಿಯಿಂದ ಕಾಪಾಡುತ್ತದೆ. ಇತರೆ ಸಾಂಕ್ರಾಮಿಕ ರೋಗಗಳಿಂದ ಕೂಡ ರಕ್ಷಣೆ ಸಿಗುತ್ತದೆ. ಮುಂದೆ ಸಕ್ಕರೆ, ಬಿ.ಪಿ ಕಾಯಿಲೆಗಳು ಕಡಿಮೆ ಪ್ರಮಾಣದಲ್ಲಿ ಇರುವುದು ಕಂಡುಬಂದಿದೆ ಎಂದು ತಿಳಿಸಿದರು.ತಾಯಿ ಹಾಲಿನಲ್ಲಿ ಸಾಕಷ್ಟು ಪೌಷ್ಠಿಕಾಂಶಗಳಿರುವುದರಿಂದ ಮಗುವಿನ ಬೆಳವಣಿಗೆಗೆ ಸಹಕರಿಸುತ್ತದೆ. ಮಾತ್ರವಲ್ಲ, ಮಗುವಿನ ಆರೋಗ್ಯವನ್ನು ಕಾಪಾಡುತ್ತದೆ.ಹಸುವಿನ ಹಾಲಿಗಿಂತ ಬೇಗ ತಾಯಿಯ ಹಾಲು ಜೀರ್ಣ ಆಗುವುದರಿಂದ ಮಗುವಿಗೆ ತಾಯಿಯ ಹಾಲು ಉತ್ತಮ ಎಂದು ತಿಳಿಸಿದರು.ಸ್ತನ್ಯಪಾನ ಮಗುವಿನ ಮೆದುಳಿನ ಬೆಳವಣಿಗೆಗೂ ಸಹಕಾರಿ. ಮಗುವಿನ ಚುರುಕುತನ, ಐಕ್ಯು ಹೆಚ್ಚಾಗುವಂತೆ ಮಾಡು ವ ಶಕ್ತಿ ಸ್ತನ್ಯಪಾನಕ್ಕಿದೆ. ತಾಯಿ ಹಾಲು ಮಕ್ಕಳಿಗೆ ತಕ್ಷಣವೇ ಸಿಗುವುದರಿಂದ ತಾಜಾತನದಿಂದ ಕೂಡಿರುತ್ತದೆ ಮತ್ತು ಯಾವುದೇ ರೀತಿಯ ಕಲಬೆರಿಕೆ ಸಾಧ್ಯವಿಲ್ಲ. ಹಾಗಾಗಿಯೇ ಎದೆಹಾಲು ಸುರಕ್ಷಿತವೂ ಹೌದು.ಇತ್ತೀಚಿನ ದಿನಗಳಲ್ಲಿ ಪುಟ್ಟ ಮಕ್ಕಳನ್ನೂ ಕಾಡುತ್ತಿರುವ ಬೊಜ್ಜಿನ ಸಮಸ್ಯೆಯನ್ನೂ ನಿವಾರಿಸುವ ಶಕ್ತಿ ಸ್ತನ್ಯಪಾನಕ್ಕಿದೆ ಎಂದು ತಿಳಿಸಿದರು.ತಾಯಿ ಮತ್ತು ಶಿಶುವಿನ ನಡುವಿನ ಭಾವನಾತ್ಮಕ ಸಂಬಂಧವನ್ನು ಬಲಪಡಿಸುತ್ತದೆ, ಮಕ್ಕಳ ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಜಗತ್ತಿನ ಏಕೈಕ ಕಲಬೆರಕೆ ಆಗದ್ದು ಎಂದರೆ ಎದೆಹಾಲು ಎಂದು ತಿಳಿಸಿದರು.ಆ. ೧ ರಿಂದ೭ ರವರೆಗೆ ಸ್ತನ್ಯಪಾನ ಸಪ್ತಾಹಾವನ್ನು ಜಾಗತಿಕವಾಗಿ ಆಚರಿಸಲಾಗುವುದು. ಸಪ್ತಾಹದಲ್ಲಿ ತಾಯಂದಿರು ಶಿಶು ಗಳಿಗೆ ಸ್ತನ್ಯಪಾನವನ್ನು ಮಾಡಿಸಲು ಪ್ರೇರೇಪಿಸುವುದು, ತಾಯಿ ಹಾಲಿನ ಮಹತ್ವ ತಿಳಿಸುವುದು ಹಾಗೂ ಸ್ತನ್ಯ ಪಾನ ಕುರಿತಾದ ಜಾಗೃತಿ ಮೂಡಿಸುವುದ ಮುಖ್ಯ ಉದ್ದೇಶ ಎಂದು ತಿಳಿಸಿದರು.ಕೇಂದ್ರದ ನಿರ್ದೇಶಕ ಡಾ.ಜಿ.ಗುರುಪ್ರಸಾದ್, ಡಾ. ಸುರೇಶ್‌ಬಾಬು,ಡಾ.ಕೌಜಲಗಿ, ಡಾ. ಎ.ಎಸ್.ಮೃತ್ಯುಂಜಯ, ಡಾ.ಮೂಗನಗೌಡ, ವ್ಯವಸ್ಥಾಪಕ ಸಿದ್ದೇಶ್ವರ ಗುಬ್ಬಿ, ಅಂಜಲಿ ಇತರರು ಇದ್ದರು.