ಮೂಡಬಿದ್ರೆಯ ಆಳ್ವಾಸ್ ಪಿ.ಯು. ಕಾಲೇಜು ತಂಡ ಪ್ರಥಮ; ದ್ವಿತೀಯ ಸ್ಥಾನ ಪಡೆದ ಉಜಿರೆಯ ಎಸ್.ಡಿ.ಎಂ. ಪದವಿಪೂರ್ವ ಕಾಲೇಜು ತಂಡ
ಉಜಿರೆ: ಇಲ್ಲಿನ ಎಸ್.ಡಿ.ಎಂ. ಕಾಲೇಜಿನ ಇಂದ್ರಪ್ರಸ್ಥ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪದವಿಪೂರ್ವ ಕಾಲೇಜುಗಳ ದಕ್ಷಿಣಕನ್ನಡ ಜಿಲ್ಲಾಮಟ್ಟದ ಬಾಲಕಿಯರ ಕಬಡ್ಡಿ ಟೂರ್ನಿಯಲ್ಲಿ ಮೂಡಬಿದ್ರೆಯ ಆಳ್ವಾಸ್ ಪದವಿಪೂರ್ವ ಕಾಲೇಜಿನ ಬಾಲಕಿಯರ ತಂಡ ಪ್ರಥಮ ಸ್ಥಾನ ಗಳಿಸಿದೆ.
ಫಲಿತಾಂಶ: ಅತಿಥೇಯ ಉಜಿರೆಯ ಎಸ್.ಡಿ.ಎಂ. ಪದವಿಪೂರ್ವ ಕಾಲೇಜು ತಂಡ (ದ್ವಿತೀಯ) ಉತ್ತಮ ರೈಡರ್: ಕುಮಾರಿ ಬಿಂದು, ಎಸ್.ಡಿ.ಎಂ. ಪಿ.ಯು. ಕಾಲೇಜು ಉಜಿರೆ. ಆಲ್ ರೌಂಡರ್ ಆಟಗಾರ್ತಿ: ಕುಮಾರಿ ಪ್ರಾನ್ವಿಕ, ಆಳ್ವಾಸ್ ಪಿ.ಯು. ಕಾಲೇಜು, ಮೂಡಬಿದ್ರೆ ಉತ್ತಮ ಕ್ಯಾಚರ್: ಕುಮಾರಿ ವಂಶಿಕ, ಆಳ್ವಾಸ್ ಪಿ.ಯು. ಕಾಲೇಜು, ಮೂಡಬಿದ್ರೆ
ಸೋನಿಯಾವರ್ಮ ವಿಜೇತರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.
ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ. ಪ್ರಮೋದ್ ಕುಮಾರ್, ಉಪಪ್ರಾಂಶುಪಾಲ ರಾಜೇಶ್ ಕೆ. ಉಪನ್ಯಾಸಕಿ ಅಂಕಿತ ಗೌಡ, ಕಬಡ್ಡಿ ತರಬೇತುದಾರ ಕೃಷ್ಣಾನಂದ ರಾವ್, ದೈಹಿಕಶಿಕ್ಷಣ ನಿರ್ದೇಶಕ ಸಂದೇಶ್ ಪೂಂಜ ಉಪಸ್ಥಿತರಿದ್ದರು.