ಭಗತ್‌ಸಿಂಗ್‌ರ ದೇಶಪ್ರೇಮ ಯುವಕರಿಗೆ ಪ್ರೇರಣೆ: ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠ
ಸAಜೆವಾಣಿ ವಾರ್ತೆ,
ವಿಜಯಪುರ,ಸೆ.೩೦:ರಕ್ತದ ಕಣಕಣಗಳಲ್ಲಿಯೂ ರಾಷ್ಟ್ರ ಪ್ರೇಮವನ್ನು ತುಂಬಿಕೊAಡು ದೇಶದ ಸ್ವಾತಂತ್ರ‍್ಯಕ್ಕಾಗಿ ತನ್ನ ಪ್ರಾಣವನ್ನೇ ಮುಡುಪಾಗಿಟ್ಟ ಅಪ್ರತಿಮ ಹೋರಾಟಗಾರ, ಕ್ರಾಂತಿಯ ಕಿಡಿ ಭಗತ್‌ಸಿಂಗ್‌ರ ದೇಶ ಪ್ರೇಮ ಯುವಕರಿಗೆ ಪ್ರೇರಣೆ ಎಂದು ನ್ಯಾಯವಾದಿ ಸಾಹಿತಿ ಮಲ್ಲಿಕಾರ್ಜುನ ಭೃಂಗಿಮಠ ಹೇಳಿದರು
ನಗರದ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಭಾನುವಾರ ಸ್ವಾಮಿ ವಿವೇಕಾನಂದ ಯುವ ಬ್ರಿಗೇಡ್ ಮತ್ತು ಭಾರತ ವೇದಿಕೆ ಚಾರಿಟೇಬಲ್ ಫೌಂಡೇಶನ್ ಸಹಯೋಗದಲ್ಲಿ ಹಮ್ಮಿಕೊಂಡ ದೇಶಪ್ರೇಮಿ ಭಗತ್‌ಸಿಂಗರÀ ಜಯಂತ್ಯುತ್ಸವದ ಕಾರ್ಯಕ್ರಮದಲ್ಲಿ ಭಗತ್ ಸಿಂಗ್‌ರÀ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು
ಮುಖ್ಯ ಅತಿಥಿ ಸಾಹಿತಿ ಪ್ರೊ, ಎ.ಎಚ್. ಕೊಳಮಲಿ ಸ್ವಾತಂತ್ರ ಹೋರಾಟಗಾರ ಭಗತ್ ಸಿಂಗನ ಕುರಿತು ವಿಶೇಷ ಉಪನ್ಯಾಸವನ್ನು ನೀಡಿ, ದೇಶಕ್ಕೆ ಸ್ವಾತಂತ್ರ‍್ಯವನ್ನು ತಂದು ಕೊಡುವುದೇ ಭಗತ್‌ಸಿಂಗರÀ ಗುರಿ ಮತ್ತು ಛಲವಾಗಿತ್ತು. ಬಾಲ್ಯದಿಂದಲೂ ದೇಶಪ್ರೇಮವನ್ನು ಒಳಗೊಂಡಿದ್ದನು. ದುಷ್ಟ ಬ್ರಿಟಿಷರನ್ನು ಹೊಡೆದು ಓಡಿಸುವುದೇ ನನ್ನ ಬಲವಾದ ಛಲ ಎಂದು ಹೋರಾಡಿ ಕೇವಲ ೨೪ ವರ್ಷದಲ್ಲಿ ದೇಶಕ್ಕಾಗಿ ಪ್ರಾಣವನ್ನು ತ್ಯಾಗ ಮಾಡಿದ ಅಪ್ಪಟ ದೇಶಪ್ರೇಮಿ ಭಗತ್‌ಸಿಂಗರÀ ದೇಶ ಅಭಿಮಾನ ಮೆಚ್ಚುವಂತದ್ದು. ಇಂದಿನ ಯುವಕರು ದೇಶಕ್ಕಾಗಿ ದುಡಿಯಬೇಕು. ದೇಶಕ್ಕಾಗಿ ಮಡಿಯಬೇಕು. ತಾಯಿ ಹಾಗೂ ತಾಯಿ ನಾಡಿಗಾಗಿ ಹೋರಾಡುವ ಯುವ ಪಡೆಯ ಅವಶ್ಯಕತೆ ಇದೆ ಎಂದು ಹೇಳಿದರು
ಫೌಂಡೇಶನದ ಅಧ್ಯಕ್ಷ ಸುನೀಲ ಜೈನಾಪುರ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದ ಭವಿಷ್ಯ ಯುವಕರ ಕೈಯಲ್ಲಿದೆ. ದೇಶ ಕಟ್ಟುವಲ್ಲಿ ಯುವಕರು ಕಂಕಣ ಬದ್ಧರಾಗಿ ನಿಲ್ಲಬೇಕು. ಇಂದಿನ ಯುವಕರಲ್ಲಿ ಭಗತ್‌ಸಿಂಗರÀ ದೇಶಾಭಿಮಾನ ಬೆಳೆಯಬೇಕೆಂದರು
ಗುರು ಗಚ್ಚಿನಮಠ, ಸಂಗಮೇಶ ಜಾಧವ, ಶಂಕರ ಹಾಲಳ್ಳಿ, ಸಂತೋಷ ಹೆಗಡೆ, ಅಮಿತ ನಾಯ್ಕೋಡಿ, ಸಂಜು ಹೂಗಾರ, ಕಿರಣ ಕೆಂಗನಗುತ್ತಿ, ಅವಿನಾಶ ಮೆಹಿದ್ರಕರ್, ವಿಜಯ ಮುರಗಾನೂರ, ಸುಧೀರ, ಪ್ರಸಾದ್ ಪಾಟೀಲ, ಪ್ರೇಮ ನಿಡೋಣಿ, ಯೋಗೇಶ ಹೊನಕೇರಿ ಮುಂತಾದವರು ಉಪಸ್ಥಿತರಿದ್ದರು,