ಬೀದಿ ಬದಿಯ ವ್ಯಾಪಾರಸ್ಥರಿಗೆ ಬೆನ್ನೆಲುಬಾಗಿ ನಿಲ್ಲುತ್ತೇನೆ :ಮೈಹಿಬೂಬ ಕುಳಗೇರಿ
ಮುದ್ದೇಬಿಹಾಳ :ಸೆ.೩೦: ಬೀದಿ ಬದಿಯ ವ್ಯಾಪಾರಸ್ಥರಿಗೆ ಸರಕಾರದಿಂದ ಸಿಗುವಂತಹ ಮೂಲಭೂತ ಸೌಲಭ್ಯಗಳನ್ನು ಯಾರಿಗೂ ಅನ್ಯಾಯವಾಗದಂತೆ ನೀಡಲು ಪ್ರಯತ್ನ ಪಡುತ್ತೇವೆ ಎಂದು ಕೆಪಿಸಿಸಿ ಬೀದಿಬದಿಯ ವ್ಯಾಪಾರಸ್ಥರ ವಿಭಾಗದ ಬ್ಲಾಕ್ ಅಧ್ಯಕ್ಷ ಮಹಿಬೂಬ ಕುಳಗೇರಿ ಹೇಳಿದರು .
ಇಲ್ಲಿನ ಬಸವೇಶ್ವರ ವೃತ್ತದಲ್ಲಿರುವ ನಂದಿನಿ ಪಂಕ್ಷೇನ್ ಹಾಲನಲ್ಲಿ ಕೆಪಿಸಿಸಿ ಬೀದಿಬದಿಯ ವಿಭಾಗದ ಪದಾಧಿಕಾರಿಗಳಿಗೆ ಆದೇಶ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಸಣ್ಣ ಸಣ್ಣ ವ್ಯಾಪಾರಿಗಳು ಸಂಘಟಿತರಾಗಬೇಕು ಅಂದಾಗಲೇ ಮಾತ್ರ ನಮಗೆ ಸೂಕ್ತವಾದ ಸ್ಥಾನಮಾನ ಸಿಗುತ್ತದೆ. ಮತ್ತು ಪೋಲಿಸ್ ಇಲಾಖೆಯಿಂದ ನಮಗೆ ತೊಂದರೆಯಾಗುತ್ತದೆ. ಎಂದು ಹಲವಾರು ವ್ಯಾಪಾರಿಗಳು ಹೇಳುತ್ತಿದ್ದಾರೆ. ನಾವು ವ್ಯಾಪಾರ ಮಾಡುತ್ತೇವೆ ಎಂದು ತಿಳಿದುಕೊಂಡು
ಕಾನೂನಡಿಯಲ್ಲಿಯೇ ವ್ಯವಹಾರ ಮಾಡಬೇಕು ಎಂದು ಸಲಹೆ ನೀಡಿದರು. ನಂತರ ಜಿಲ್ಲಾ ಅಧ್ಯಕ್ಷರಾದ ಲಾಲಸಾಹೇಬ್ ಕೊರಬ ಮಾತನಾಡಿ ಕೆಪಿಸಿಸಿ ವಿಭಾಗದಲ್ಲಿ ಬೀದಿಬದಿಯ ವ್ಯಾಪಾರಸ್ಥರಿಗೆ ಉತ್ತಮವಾದ ಗೌರವ ಇದೆ. ಈ ಹಿಂದಿನಿAದಲೂ ಮುದ್ದೇಬಿಹಾಳ ನಗರದಲ್ಲಿ ವ್ಯಾಪಾರಸ್ಥರಿಗೆ ಕೆಲವು ತೊಂದರೆಗಳು ಆಗುತ್ತಿವೆ ಎಂದು ನಮ್ಮ ಗಮನಕ್ಕೂ ಬಂದಿದೆ ಸಂಭAದಿಸಿದ ಇಲಾಖೆಗಳ ಅಧಿಕಾರಿಗಳ ಜೊತೆಯಲ್ಲಿ ಮಾತನಾಡುತ್ತೇವೆ. ಮತ್ತು ಇಲ್ಲಿನ ಬೀದಿಬದಿಯ ವ್ಯಾಪಾರಸ್ಥರಿಗೆ ಸೂಕ್ತವಾದ ಸ್ಥಳವನ್ನು ನೀಡಬೇಕು ಎನ್ನುವ ಕೂಗು ಇದೆ ಅದಕ್ಕೆ ಸ್ಪಂದಿಸುವ ಕಾರ್ಯ ಸ್ಥಳೀಯ ಶಾಸಕರು ಮಾಡುತ್ತಾರೆಂದು ಹೇಳಿದರು. ನಂತರ ನೂತನವಾಗಿ ಪುರಸಭೆಯ ಅಧ್ಯಕ್ಷರಾಗಿ ಆಯ್ಕೆಯಾದ ಮಹಿಬೂಬ ಗೊಳಸಂಗಿ, ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಪ್ರೀತಿ ದೇಗಿನಾಳ ಇವರಿಗೆ ಗೌರವಿಸಿ ಸನ್ಮಾನಿಸಲಾಯಿತು ಹಾಗೂ ಸಂಘದ ಸದಸ್ಯರಿಗೂ ಆದೇಶ ಪತ್ರಗಳನ್ನು ಬ್ಲಾಕ ಕಾಂಗ್ರೆಸ ಅಧ್ಯಕ್ಷ ಗುರು ತಾರನಾಳ ಹಾಗೂ ಕಾಂಗ್ರೆಸ್ ಮುಖಂಡ ಸಿದ್ದಣ್ಣ ಮೇಟಿ, ಮಹಿಬೂಬ ಜಾಗೀರದಾರ ವಿತರಿಸಿದರು, ಈ ಸಂಧರ್ಭದಲ್ಲಿ ಶರಣಮ್ಮ ನಾಯಕ, ಸಿದ್ದು ಹಡಪದ
ಮಹಿಬೂಬ ಸಣ್ಣಕ್ಕಿ,ಆರ್ ಕೆ. ಆಶಿಪ್ ನಿಡಗುಂದಿ ಮಹಮ್ಮದ ರಫೀಕ್ ನದಾಫ,ನಿಂಗಪ್ಪ ಚಲವಾದಿ, ಬಾಬಾಜಾನ ಮಮದಾಪೂರ ತೌಫಿಕ್ ಜಾಗಿರದಾರ,ಕಿರಣ್ ಕುಮಾರ ದಸ್ತಗೀರ ಹೆಬ್ಬಾಳ ಬಸಯ್ಯ ಸ್ವಾಮಿ ಕಾಲೀಮಾ ಬೀಳಗಿ ಬಾಲವ್ವ ಅಂಬಿಗೇರ, ಗದ್ದೆವ್ವ, ಬಿಬಿ ನದಾಫ ಬಾಬು ಬಳಗಾನೂರ, ಗೋವಿಂದ ಭಜಂತ್ರಿ ಅಬ್ದುಲ್ ರಜಾಕ ಬನ್ನೇಟ್ಟಿ ಮುನ್ನಾ ಶಿವಪುರ ಯಲ್ಲಪ್ಪ ಗುಂಡಕರ್ಚಿಗಿ ಇನ್ನೀತರರು ಉಪಸ್ಥಿತರಿದ್ದರು.