ತೀರ್ಥಹಳ್ಳಿ ತಾಲೂಕಿನ ವಿವಿಧೆಡೆ ಭೂ ಕುಸಿತ!
ಸಂಜೆವಾಣಿ ವಾರ್ತೆ
ಶಿವಮೊಗ್ಗ, ಆ. ೩:  ಭಾರೀ ಮಳೆಯಿಂದ ತೀರ್ಥಹಳ್ಳಿ ತಾಲೂಕಿನ ವಿವಿಧೆಡೆ ಭೂ ಕುಸಿತ ಉಂಟಾಗಿರುವ ಘಟನೆಗಳು ವರದಿಯಾಗಿವೆ.ದೇವಂಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಲ್ಲುಕೂಡಿಗೆಯ ಬೆಕ್ಕನೂರು ಗ್ರಾಮದ ಮಂಜುನಾಥ್ ಎಂಬುವರ ಮನೆಯ ಪಕ್ಕದಲ್ಲಿಯೇ ಗುಡ್ಡವೊಂದು ಕುಸಿದಿದೆ. ಗುಡ್ಡದ ಮಣ್ಣು ಮನೆಯ ಕೊಟ್ಟಿಗೆ ಸೇರಿದಂತೆ ಸುತ್ತಮುತ್ತಲು ಆವರಿಸಿದೆ.ಮತ್ತೊಂದೆಡೆ, ಮೇಗರವಳ್ಳಿ ಸಮೀಪ ಉಡುಪಿ – ಶಿವಮೊಗ್ಗ ನಡುವಿನ ರಾಷ್ಟ್ರೀಯ ಹೆದ್ಧಾರಿ ಬದಿಯಲ್ಲಿ ಭೂ ಕುಸಿತವಾಗಿದೆ. ಭಾರೀ ಪ್ರಮಾಣದ ಮಣ್ಣು ಕುಸಿದಿದೆ. ಸಂಬಂಧಿಸಿದ ಇಲಾಖೆಯುವರು ಕುಸಿತವಾದ  ಸ್ಥಳದಲ್ಲಿ ಕುಸಿತ ತಡೆ ನಿಟ್ಟಿನಲ್ಲಿ ತಾತ್ಕಾಲಿಕ ಪರಿಹಾರ ಕ್ರಮಕೈಗೊಂಡಿದ್ಧಾರೆ ಎಂದು ಹೇಳಲಾಗಿದೆ.ತಾಲೂಕಿನ ಸಾಲೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುನ್ನಿಕೇವಿ ಸೇತುವೆಯು ಮಳೆಯಿಂದ ಅಪಾಯಕಾರಿ ಸ್ಥಿತಿಗೆ ತಲುಪಿದ್ದು, ಕುಸಿದು ಬೀಳುವ ಸಾಧ್ಯತೆಯಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.ತಡೆಗೆ ಕ್ರಮಕೈಗೊಳ್ಳಲಿ : ‘ತೀರ್ಥಹಳ್ಳಿ ತಾಲೂಕಿನ ಹಲವೆಡೆ ಭಾರೀ ಪ್ರಮಾಣದ ಭೂ ಕುಸಿತವಾಗುತ್ತಿದೆ.