ಬೆಣ್ಣೆನಗರಿ ದಾವಣಗೆರೆಯಲ್ಲಿ ಜೀ಼ ಕನ್ನಡದ ವರಮಹಾಲಕ್ಷ್ಮೀ ಉತ್ಸವ
ಸಂಜೆವಾಣಿ ವಾರ್ತೆ
ದಾವಣಗೆರೆ. ಆ.೩; ತನ್ನ ವಿಭಿನ್ನ, ವಿಶೇಷ ಕಾರ್ಯಕ್ರಮಗಳಿಂದಲೇ ಕನ್ನಡಿಗರನ್ನು ನಿರಂತರವಾಗಿ ರಂಜಿಸುತ್ತಲಿರುವ ಕರ್ನಾಟಕದ ನಂಬರ್ 1 ಮನರಂಜನಾ ವಾಹಿನಿ ಜೀ಼ ಕನ್ನಡ ಇದೀಗ ಜನಮೆಚ್ಚಿದ 2 ಧಾರಾವಾಹಿಗಳಾದ ಶ್ರಾವಣಿ ಸುಬ್ರಹ್ಮಣ್ಯ ಹಾಗು ಬ್ರಹ್ಮಗಂಟು ತಂಡಗಳೊಟ್ಟಿಗೆ ಜೀ಼ ಕನ್ನಡ ವರಮಹಾಲಕ್ಷ್ಮೀ ಉತ್ಸವ ವನ್ನು ಇದೇ ಆಗಸ್ಟ್ 4 ರಂದು  ಬೆಣ್ಣೆನಗರಿ  ದಾವಣಗೆರೆಯಲ್ಲಿ ಆಯೋಜಿಸಿದೆ .ಹಬ್ಬ ಅಂದರೆ ಸಂಭ್ರಮ , ಸಡಗರ ಬಾರಿಯ ವರಮಹಾಲಕ್ಷ್ಮೀ ಹಬ್ಬ ಕನ್ನಡಿಗರಿಗೆ ವಿಶಿಷ್ಟವಾಗಿರಲಿದ್ದು  ತಮ್ಮ ನೆಚ್ಚಿನ ಕಲಾವಿದರ ಜೊತೆ ಆಚರಿಸಬಹುದಾಗಿದೆ. ವೀಕ್ಷಕರ ಜೊತೆ ವಿಶೇಷ ನಂಟು ಹೊಂದಿರುವ ಜೀ಼ ಕನ್ನಡ ವಾಹಿನಿ ಅವರ ನಡುವೆಯೇ ಮನರಂಜನೆಯನ್ನು ಹಬ್ಬವಾಗಿಸುತ್ತಿದೆ. ಪ್ರತಿದಿನ ರಾತ್ರಿ 9 ಗಂಟೆ ಪ್ರಸಾರವಾಗುವ ಶ್ರಾವಣಿ ಸುಬ್ರಹ್ಮಣ್ಯ ಹಾಗು 10 ಗಂಟೆಗೆ ಪ್ರಸಾರವಾಗುವ ಬ್ರಹ್ಮಗಂಟು ಧಾರಾವಾಹಿಗಳ ಕಲಾವಿದರು , ತಂತ್ರಜ್ಞರು ಉತ್ಸವದಲ್ಲಿ ಭಾಗಿಯಲಿದ್ದು ಹಾಡಿ, ಕುಣಿದು ನೋಡುಗರನ್ನು ರಂಜಿಸಿ ಹಬ್ಬದ ಮೆರುಗನ್ನು ಹೆಚ್ಚಿಸಲಿದ್ದಾರೆ.  ಹದಡಿ  ರಸ್ತೆಯ ಐಟಿಐ ಗೇಟ್ ಬಳಿಯಿರುವ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಈ ಕಾರ್ಯಕ್ರಮ ಜರುಗಲಿದೆ . ಆಗಸ್ಟ್ 4 ರಂದು ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿರುವ ಈ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದೆ. ಆಗಸ್ಟ್ 3 ಶನಿವಾರ ಸಂಜೆ 4 ಗಂಟೆಗೆ ಕಾರ್ಯಕ್ರಮ ನಡೆಯುವ ಸ್ಥಳದಲ್ಲೇ ಪಾಸ್ ವಿತರಣೆಯಾಗಲಿದೆ. ಸೀಮಿತ ಆಸನಗಳಿರಲಿದ್ದು ಮೊದಲು ಬಂದವರಿಗೆ ಆದ್ಯತೆ ಎಂದು ವಾಹಿನಿ ವಿಶೇಷ ಸೂಚನೆ ನೀಡಿದೆ.ದಾವಣಗೆರೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಈ ಮನರಂಜನಾ ಉತ್ಸವಕ್ಕೆ ಆಗಮಿಸಿ ನೆಚ್ಚಿನ ಕಲಾವಿದರ ಜೊತೆ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಿ.