ತೇಜಸ್ವಿನಿಗೆ ರಾಷ್ಟ್ರಮಟ್ಟದ ಸಂಶೋಧನಾ ಪ್ರಶಸ್ತಿ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೩: ರಾಜಸ್ತಾನದ ಚರು ನಗರದ ಲೋಹಿಯಾ ಸರ್ಕಾರಿ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ರಾಷ್ಟಿçÃಯ ಮಟ್ಟದ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಿದ ದಾವಣಗೆರೆ ವಿಶ್ವವಿದ್ಯಾನಿಲಯದ ರಸಾಯನಶಾಸ್ತç ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಡಿ.ಎಂ. ತೇಜಸ್ವಿನಿ ದ್ವಿತೀಯ ಸ್ಥಾನ ಪಡೆದಿದ್ದಾರೆ.ಜಲ ಆವಿಷ್ಕಾರ ಸವಾಲು (ಜಿಯೊ ಇನೊವೇಶನ್ ಚಾಲೆಂಜ್) ಸ್ಪರ್ಧೆಯ ಆಲೋಚನಾ ಪ್ರಸ್ತಾವನೆ ವಿಭಾಗದಲ್ಲಿ ‘ನೀರಿನಲ್ಲಿರುವ ಆರ್ಸೆನಿಕ್ ಅಂಶವನ್ನು ಸುಲಭವಾಗಿ ಪತ್ತೆ ಮಾಡಲು ನಾನೊಫರ‍್ರಿಟ್ ತಂತ್ರಜ್ಞಾನದ ಬಳಕೆ’ ಕುರಿತು ತೇಜಸ್ವಿನಿ ಅವರು ಪ್ರಬಂಧ ಮಂಡಿಸಿ ಪ್ರಶಸ್ತಿ ಪಡೆದಿದ್ದಾರೆ. ರಸಾಯನಶಾಸ್ತç ವಿಭಾಗದ ಪ್ರಾಧ್ಯಾಪಕ ಪ್ರೊ.ಎಚ್.ಪಿ.ನಾಗಸ್ವರೂಪ ಅವರ ಮಾರ್ಗದರ್ಶನ ಮತ್ತು ಜೈನ ಕಾಲೇಜಿನ ನಿರ್ದೇಶಕ ಪ್ರೊ.ಮಂಜಪ್ಪ ಸಾರಥಿ ಅವರ ಸಲಹೆಯಂತೆ ಪ್ರಬಂಧ ಸಿದ್ಧಪಡಿಸಿದ್ದರು.ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳ ಒಟ್ಟು ೨೫ ಅತ್ಯುತ್ತಮ ಸಂಶೋಧನಾ ಪ್ರಬಂಧಗಳ ಮಂಡನೆಗೆ ಅವಕಾಶ ನೀಡಲಾಗಿತ್ತು. ಜೈಪುರದ ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಸೈಂಟಿಫಿಕ್ ರಿಸರ್ಚ್ನ ಪ್ರೊ.ಪೂನಿಯಾ, ನಿಟ್ಟೆ ವಿಶ್ವವಿದ್ಯಾಲಯದ ಪ್ರೊ.ರಾಧಾಕೃಷ್ಣ, ನವದೆಹಲಿಯ ಡಿಎಸ್‌ಟಿ ಪ್ರತಿನಿಧಿ ಅಂಕುರ್ ಮೆಹ್ತಾ, ದಾವಣಗೆರೆ ವಿಶ್ವವಿದ್ಯಾಲಯದ ಪ್ರೊ.ಎಚ್.ಪಿ.ನಾಗಸ್ವರೂಪ ಅವರು ಪ್ರಬಂಧಗಳ ಪರಿಶೀಲನೆ ನಡೆಸಿದ್ದರು.
ರಾಷ್ಟಿçÃಯ ಮಟ್ಟದಲ್ಲಿ ಪ್ರಶಸ್ತಿ ಪಡೆದ ತೇಜಸ್ವಿನಿ ಅವರಿಗೆ ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಡಿ.ಕುಂಬಾರ, ಕುಲಸಚಿವ ಪ್ರೊ.ಯು.ಎಸ್.ಮಹಾಬಲೇಶ್ವರ  ಅವರು ಅಭಿನಂದಿಸಿದ್ದಾರೆ