ಬದುಕಿಗೊಂದು ಗುರಿ ಮತ್ತು ಗುರು ಇಲ್ಲದವ ನಿಜವಾದ ಬಡವ: ಕಾಶಿ ಜಗದ್ಗುರುಗಳು
ಕಲಬುರಗಿ:ಆ.2:ಜ್ಞಾನ ಬುದ್ಧಿ ಶಕ್ತಿ ನೀಡಿದರೆ ನಡತೆ ಗೌರವವನ್ನು ತಂದು ಕೊಡುತ್ತದೆ. ದುಡ್ಡಿಲ್ಲದವ ಬಡವನಲ್ಲ. ಬದುಕಿಗೊಂದು ಗುರಿ ಮತ್ತು ಗುರು ಇಲ್ಲದವನು ನಿಜವಾದ ಬಡವನೆಂದು ಶ್ರೀ ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ಅವರು ನಗರದ ಸೊಗಸನಗೇರಿಯ ಶ್ರೀ ಗುರುಶಾಂತಲಿAಗೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿದ ಶ್ರೀ ಸಿದ್ಧಾಂತ ಶಿಖಾಮಣಿ ಪ್ರವಚನದ ಸಮಾರೋಪ ಸಮಾರಂಭದಲ್ಲಿ ಆರ್ಶಿವಚನ ನೀಡುತ್ತಿದ್ದರು.
ಬಣ್ಣ ಮತ್ತು ಸುವಾಸನೆ ಹೇಗೆ ಹೂವಿಗೆ ಮೆರಗು ನೀಡುತ್ತವೆಯೋ ಅದೇ ರೀತಿ ಒಳ್ಳೆಯ ಗುಣ ನಡತೆಗಳು ಮನುಷ್ಯನ ವ್ಯಕ್ತಿತ್ವಕ್ಕೆ ಮೆರಗು ತರುತ್ತವೆ. ಕತ್ತಲೆಯನ್ನು ಕಳೆದು ಹೃದಯ ಮತ್ತು ಮನಸ್ಸನ್ನು ಬೆಳಗಿಸಲು ಗುರುವಿನ ಬೋಧಾಮೃತ ಮುಖ್ಯವೆಂಬುದನ್ನು ಮರೆಯಬಾರದು. ಉತ್ತಮ ನಡೆ ನುಡಿ ನಮ್ಮ ಜೀವನದ ನಿಜವಾದ ಆಸ್ತಿಗಳು. ಅರ್ಥ ಮಾಡಿಕೊಳ್ಳುವ ಮನಸ್ಸು, ಕ್ಷಮಿಸುವ ಗುಣ, ಕೈಜೋಡಿಸುವ ಸ್ನೇಹ, ಸಮಾಧಾನ ಮಾಡುವ ಒಂದು ಹೃದಯ ಮನುಷ್ಯ ಜೀವನದ ನಿಜವಾದ ಆಸ್ತಿಗಳೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ನಿರೂಪಿಸಿದ್ದನ್ನು ಯಾರೂ ಮರೆಯಬಾರದೆಂದು ನುಡಿದರು.
ಕಡಗಂಚಿ ವೀರಭದ್ರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಆಳಂದ ಸಿದ್ಧೇಶ್ವರ ಶಿವಾಚಾರ್ಯರು, ಜಯಶಾಂತಲಿAಗೇಶ್ವರ ಶಿವಯೋಗಿಗಳು ಹಿರೇನಾಗಾವಿ, ರಟಕಲ್ ರೇವಣಸಿದ್ಧೇಶ್ವರ ಶಿವಾಚಾರ್ಯರು, ಅಷ್ಠಗಿ, ಸೋಮವಾರಪೇಟೆ, ಮಂಗಳವಾರಪೇಟೆ, ಚಂದನಕೆರೂರ, ಚಿಣಮಗೇರಾ ಶ್ರೀಗಳು ಉಪಸ್ಥಿತರಿದ್ದರು.
ಕೆಎಸ್‌ಆರ್‌ಟಿಸಿ ನಿರ್ದೇಶಕ ಮಲ್ಲಿಕಾರ್ಜುನ ತಡಕಲ್, ಬಸವರಾಜ ಪಾಟೀಲ ಗೊಳಾ, ಹೈಕೋರ್ಟ ವಕೀಲ ಸಿದ್ದು ಪಾಟೀಲ, ಎಂ.ಎಸ್.ಪಾಟೀಲ ನರಿಬೋಳ, ಆನಂದ ದಂಡೋತಿ, ವೀರಣ್ಣ ಹೊನ್ನಳ್ಳಿ ಧೂತರಗಾಂವ, ಮಲ್ಲಣ್ಣ ಕಣಿ, ಸೋಮಶೇಖರ ಮಠಪತಿ, ಚಂದ್ರಕಾAತ ಹಾವನೂರ, ಚಂದ್ರಕಾAತ ಭೂಪನೂರ, ಗುರುಲಿಂಗಯ್ಯಸ್ವಾಮಿ ಆಳೂರ ಇದ್ದರು.
ಸಿದ್ರಾಮಪ್ಪ ಆಲಗೂಡಕರ ಸ್ವಾಗತಿಸಿದರು. ಪಾಳಾದ ಡಾ.ಗುರುಮೂರ್ತಿ ಶಿವಾಚಾರ್ಯರು ನಿರೂಪಿಸಿದರು. ಗುರುಲಿಂಗಯ್ಯ ಹಿತ್ತಲಶಿರೂರ ಇವರಿಂದ ಸಂಗೀತ ಜರುಗಿತು.
ಸಾರೋಟ ಮೆರವಣಿಗೆ: ಸಮಾರಂಭಕ್ಕೂ ಮುನ್ನ ನೆಹರು ಗಂಜ ಶ್ರೀ ಹನುಮಾನ ಮಂದಿರದಿAದ ನೇತಾಜಿ ಚೌಕ, ಶಹಾಬಜಾರ ಮಾರ್ಗವಾಗಿ ಬೆಳ್ಳಿ ಸಾರೋಟಿನಲ್ಲಿ ಶ್ರೀ ಕಾಶೀ ಜಗದ್ಗುರುಗಳ ಭವ್ಯ ಮೆರವಣಿಗೆ ನಡೆಯಿತು. ಕುಂಭ ಹೊತ್ತ ಸುಮಂಗಲೆಯರು, ಪುರವಂತರು, ಡೊಳ್ಳು ಭಜನಾ ಮಂಡಳಿ ವಾದ್ಯ ವೃಂದ ಭಕ್ತರ ಜೈಕಾರದೊಂದಿಗೆ ಕಲ್ಯಾಣ ಮಂಟಪಕ್ಕೆ ಜಗದ್ಗುರುಗಳನ್ನು ಬರಮಾಡಿಕೊಳ್ಳಲಾಯಿತು.