ರಾಜೇಂದ್ರ ಕಾರಂತರಿಗೆ ರಾಘವ ಪ್ರಶಸ್ತಿ ಪ್ರದಾನಬಳ್ಳಾರಿ ವಿವಿ ಬಯಲು ರಂಗ ಮಂದಿರಕ್ಕೆ ರಾಘವರ ಹೆಸರು: ರುದ್ರೇಶ್
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ನಗರದ ರಾಘವ ಕಲಾ ಮಂದಿರದಲ್ಲಿ ಇಂದು ಮತ್ತು ನಾಳೆ ಹಮ್ಮಿಕೊಂಡಿರುವ ನಾಟ್ಯ ಕಲಾ ಪ್ರಪೂರ್ಣ ಬಳ್ಳಾರಿ ರಾಘವರ 144ನೇ ಜಯಂತಿ. ಮತ್ತು ರಾಘವರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಇದು ಸಂಜೆ ಜಿಲ್ಲಾ ನ್ಯಾಯಾಧೀಶೆ ಕೆ.ಜಿ.ಶಾಂತಿ ಅವರು ಚಾಲನೆ ನೀಡಿ. ಪ್ರಶಸ್ತಿ ಪ್ರದಾನ‌ಮಾಡಿದರು.
ಸಮಾರಂಭದಲ್ಲಿ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಕುಲಸಚಿವ ಎಸ್.ಎನ್.ರುದ್ರೇಶ್ ಮಾತನಾಡಿ, ವಿವಿಯಲ್ಲಿ ನಿರ್ಮಾಣ ಮಾಡುತ್ತಿರುವ ಬಯಲ ರಂಗ ಮಂದಿರಕ್ಕೆ ಬಳ್ಳಾರಿ ರಾಘವರ ಹೆಸರು ಇಡಲು ಶಿಫಾರಸು ಮಾಡಲಿದೆಂದು ಹೇಳಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಾಜೇಂದ್ರ ಕಾರಂತ ಅವರು, ಬಹು ಭಾಷೆ ಮತ್ತು ದೇಶ ವಿದೇಶಗಳಲ್ಲಿ ನಟಿಸಿದ ರಾಘವರ ಪ್ರಶಸ್ತಿ ದೊರೆತಿದ್ದು ಅವಿಸ್ಮರಣೀಯವಾದುದು.ನಾಟಕ ನೋಡಲು ಬರುವ ಪ್ರೇಕ್ಷಕರು ಇದ್ದಾರೆ.
ರಂಗಭೂಮಿ ರಂಗ ಮಂದಿರಗಳ ಕೊರತೆ ಇದೆ. ಬೆಂಗಳೂರಿನಲ್ಲಿ ಕೇವಲ‌ ಮೂರು ಇವೆ. ನಾಟಕ ಕಲಿಯಲು‌ಮಕ್ಕಳು ಹೋದರೆ ಹಾಳಾಗುತ್ತಾರೆಂಬ ಪೋಷಕರಲ್ಲಿನ ಭಾವನೆ ದೂರವಾಗಬೇಕು. ನಾಟಕ ಪ್ರಾಥಮಿಕ ಶಿಕ್ಷದಿಂದಲೇ ಕಲಿಸುವಂತ ಕೆಲಸ ಆಗಬೇಕು ಇದರಿಂದ ಅವರ ವಿವೇಚನಾ ಶಕ್ತಿ ಹೆಚ್ಚಲಿದೆ ಈ ದಿಶೆಯಲ್ಲಿ ಸರ್ಕಾರ ಚಿಂತನೆ ಮಾಡಬೇಕು ಎಂದರು.
ಅಧ್ಯಕ್ಷತೆವಹಿಸಿದ್ದ ರಾಘವ ಮೆಮೋರಿಯಲ್ ಅಸೋಸಿಯೇಷನ್ ಗೌರವ ಅಧ್ಯಕ್ಷ ಕೆ.ಚೆನ್ನಪ್ಪ  ಮಾತನಾಡಿ, 2008 ರಿಂದ
ರಾಘವ ಮೆಮೋರಿಯಲ್ ಅಸೋಸಿಯೇಷನ್ ಪ್ರತಿವರ್ಷ ಕನ್ನಡ ಮತ್ತು ತೆಲುಗು ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ ನೀಡುತ್ತಾ ಬಂದಿದೆ. ಪ್ರಶ್ತಿ 21 ಸಾವಿರ ನಗದು ಮತ್ತು ರಾಘವರ ಬೆಳ್ಳಿ ಪದಕ ನೆನಪಿನ ಕಾಣಿಕೆ ನೀಡಿ ಗೌರವಿಸುತ್ತಿದೆಮನದು ಹೇಳಿದರು.
ಪ್ರಶಸ್ತಿ ಪ್ರದಾನ ಸಮಾರಂಭದ ನಂತರ  ರಾಜೇಂದ್ರ ಕಾರಂತರ ನಿರ್ದೇಶನದಲ್ಲಿ “ಮರಣ ಮೃದಂಗ” ನಾಟಕ ಪ್ರದರ್ಶನಗೊಂಡಿತು.‌
ನಾಳೆ ಆ.3 ರಂದು ಸಂಜೆ6 ಗಂಟೆಗೆ ನಡೆಯುವ ಸಮಾರಂಭದ ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಾ. ಮಂಜುಳಾ ಚೆಲ್ಲೂರು ಹಾಗೂ ಆಂಧ್ರಪ್ರದೇಶದ ಖ್ಯಾತನಟ ವಾಡೇವು ಸುಂದರರಾವ್‌ ಭಾಗವಹಿಸುವರು. ರಾಘವ ಮೆಮೋರಿಯಲ್ ಅಸೋಸಿಯೇಷನ್ ಅಧ್ಯಕ್ಷ ಕೆ.ಕೋಟೇಶ್ವರ ರಾವ್‌ ಅಧ್ಯಕ್ಷತೆ ವಹಿಸುವರು.
ಈ  ವೇಳೆ ತಿರುಪತಿಯ ಕೋನೇಟಿ ಸುಬ್ಬರಾಜು ಅವರಿಗೆ ಬಳ್ಳಾರಿ ರಾಘವ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಬಳಿಕ ಶ್ರೀವಾಡ್ರೆವು ಸುಂದರರಾವ್ ಅವರಿಂದ ಯಯಾತಿಪುತ್ರ ಏಕಪಾತ್ರ ಅಭಿನಯ ಹಾಗೂ ಆಂಧ್ರಪ್ರದೇಶದ ಗುಂಟೂರಿನ ಅಮೃತ ಲಹರಿ ಥಿಯೇಟರ್‌ಆರ್ಟ್ಸ್ ತಂಡದಿಂದ ‘ನಾನ್ನಾ…ನೇನು ವಚ್ಚೇಸ್ತ…’ ತೆಲುಗು ನಾಟಕ ಪ್ರದರ್ಶನಗೊಳ್ಳಲಿದೆ.