ಬಟ್ಟೆ ತೊಳೆಯಲು ಹೋಗಿ ಭೀಮಾ ನದಿಯಲ್ಲಿ ಮುಳುಗಿ ವ್ಯಕ್ತಿ ಸಾವು
ಕಲಬುರಗಿ,ಆ.2-ಜಿಲ್ಲೆಯ ಅಫಜಲಪುರ ತಾಲ್ಲೂಕಿನ ದೇವಲಗಾಣಗಾಪುರದಲ್ಲಿ ಶ್ರಾವಣ ಮಾಸದ ನಿಮಿತ್ಯವಾಗಿ ಬಟ್ಟೆ ತೊಳೆಯಲೆಂದು ಭೀಮಾ ನದಿಗೆ ಇಳಿದ ವ್ಯಕ್ತಿಯೊಬ್ಬರು ಕಾಲು ಜಾರಿ ಬಿದ್ದು ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತನನ್ನು ದೇವಲಗಾಣಗಾಪುರದ ಶಶಿಕಾಂತ ಶಂಕರ ಡಾಂಗೆ (38) ಎಂದು ಗುರುತಿಸಲಾಗಿದೆ.
ಶ್ರಾವಣ ಮಾಸದ ಪ್ರಯುಕ್ತ ಗ್ರಾಮದ ಬಳಿ ಇರುವ ಭೀಮಾ ನದಿಗೆ ಬಟ್ಟೆ ತೋಳೆಯಲು ಹೋಗಿದ್ದ ಶಶಿಕಾಂತ ಬಟ್ಟೆ ತೊಳೆಯುವ ವೇಳೆ ಕಾಲು ಜಾರಿ ನದಿಯಲ್ಲಿ ಬಿದ್ದು ಮುಳುಗಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಈ ಸಂಬAಧ ದೇವಲಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.