ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಪತ್ರಿಕಾರಂಗದ ಪಾತ್ರ ಬಹಳ ಪ್ರಮುಖ: ಶಾಸಕ ಪಾಟೀಲ್
ಹುಮನಾಬಾದ್ :ಆ.2:ಭಾರತೀಯ ಸಂವಿಧಾನದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಪತ್ರಿಕಾರಂಗದ ಪಾತ್ರ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಆದ್ದರಿಂದ ಪತ್ರಕರ್ತರು ಪ್ರಾಮಾಣ ಕತೆಯಿಂದ ಕೆಲಸ ಮಾಡಬೇಕು ಎಂದು ಶಾಸಕ ಡಾ. ಸಿದ್ದು ಪಾಟೀಲ್ ಹೇಳಿದರು.
ಪಟ್ಟಣದಲ್ಲಿರುವ ಶಾಸಕರ ಖಾಸಗಿ ಕಚೇರಿಯಲ್ಲಿ ನಡೆದ ಪತ್ರಿಕಾ ದಿನಾರಣೆಯಲ್ಲಿ ಪತ್ರಕರ್ತರಿಗೆ ವಿಶೇಷವಾಗಿ ಸನ್ಮಾನಿಸಿದ ಬಳಿಕ ಮಾತನಾಡಿದರು.
ಸಮಾಜದ ಸ್ವಾಸ್ಥö ಕಾಪಾಡುವ ಜವಾಬ್ದಾರಿಯುತ ಸ್ಥಾನ ಪತ್ರಿಕಾರಂಗ ಪಡೆದುಕೊಂಡಿದೆ. ಹೀಗಾಗಿ ಪತ್ರಿಕಾರಂಗ ನೈಜ್ಯತೆಯನ್ನು ಕಾಪಾಡಿಕೊಂಡರೆ ಮಾತ್ರ ಪ್ರಜಾಪ್ರಭುತ್ವ ಸದೃಢವಾಗಿರುತ್ತದೆ. ಚುನಾಯಿತ ಜನಪ್ರತಿಧಿ ಹಾಗೂ ಅಧಿಕಾರಿಗಳು ತಮ್ಮ ಕೆಲಸಗಳನ್ನು ಮರೆತು ಕಾಲಹರಣ ಮಾಡುತ್ತಿದ್ದ ಸಂದರ್ಭದಲ್ಲಿ ಪತ್ರಕರ್ತರು ತಮ್ಮ ಲೇಖನಿಯ ಮೂಲಕ ಅವರನ್ನು ಎಚ್ಚರಿಸುವ ಪ್ರಾಮಾಣ ಕ ಪ್ರಯತ್ನ ಮಾಡಬೇಕು ಎಂದು
ಜಿಲ್ಲಾ ಬಿಜೆಪಿ ಅಧ್ಯಕ್ಷ ಸೋಮನಾಥ ಪಾಟೀಲ್ ಮಾತನಾಡಿ ಇಡೀ ಜಿಲ್ಲೆಯಲ್ಲೇ ಹುಮನಾಬಾದ ತಾಲ್ಲೂಕಿನ ಪತ್ರಕರ್ತರು ಅತ್ಯಂತ ಕ್ರಿಯಾಶೀಲರಾಗಿದ್ದಾರೆ ಎಂಬುದಕ್ಕೆ ಅವರ ಕಾರ್ಯ ಚಟುವಟಿಕೆಗಳೇ ಸಾಕ್ಷಿ ಎಂದರು.
ಕರ್ನಾಟಕ ಕಾರ್ಯನಿರ್ತರ ಪತ್ರಕರ್ತ ಸಂಘದ ಅಧ್ಯಕ್ಷ ದುರ್ಯೋಧನ ಹೂಗಾರ ಮಾತನಾಡಿ ಕಳೆದ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಪತ್ರಿಕಾಭವನ ನಿವೇಶನ ಶೀಘ್ರದಲ್ಲಿ ಮಂಜೂರು ಮಾಡಿಸಿಕೊಡುವುದರ ಜತೆಗೆ ಕಟ್ಟಡ ನಿರ್ಮಿಸಿಕೊಡುವಂತೆ ಶಾಸಕರಲ್ಲಿ ಮನವಿ ಮಾಡಿದರು.
ಪತ್ರಕರ್ತರಾದ ಸಂಜೀವಕುಮಾರ ಜುನ್ನಾ, ಸಂಜಯ್ ದಂತಕಾಳೆ, ರಾಜು ಪೂಜಾರಿ, ಗುಂಡು ಅತಿವಾಳ, ಶೈಲೇಂದ್ರ ಕಾವಡಿ, ವೆಂಕಟೇಶ ಜಾಧವ್, ಪ್ರಶಾಂತ , ಶಿವಶರಣ ಚಾಂಗಲೇರಿ,
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಬಸವರಾಜ ಆರ್ಯ, ವಿಶ್ವನಾಥ ಪಾಟೀಲ್ ಮಾಡಗೋಳ, ಗಜೇಂದ್ರ ಕನಕಟ್ಟಕರ, ಮಲ್ಲಿಕಾರ್ಜುನ ಪಾಟೀಲ್, ಸುನೀಲ್ (ಕಾಳಪ್ಪ) ಪಾಟೀಲ್, ಸಂತೋಷ ಪಾಟೀಲ್, ಗೀರಿಷ ತುಂಬಾ, ಸುನಿಲ್ ಡಿ.ಎನ್ ಪತ್ರಿ, ರಾಂಪೂರೆ, ಗೋಪಾಲಕೃಷ್ಣ ಮೊಹಳೆ, ಅನೀಲ್ ಪಸರ್ಗಿ, ರವಿಕುಮಾರ ಹೊಸಳ್ಳಿ, ಸೀರೆಯಂತೆ ಉಪಸ್ಥಿತರಿದ್ದರು