ಕರಕಿಹಳ್ಳಿ ಗ್ರಾ.ಪಂ.ಲಕ್ಷಾಂತರ ಹಣ ಲೂಟಿ ಆರೋಪ
-ಮಡಿವಾಳಪ್ಪ ಟಿ.ಯತ್ನಾಳ
ಯಡ್ರಾಮಿ,ಆ.೨-ತಾಲೂಕಿನ ಕರಕಿಹಳ್ಳಿ ಗ್ರಾಮ ಪಂಚಾಯತಿಯಲ್ಲಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ನಕಲಿ ಕ್ರಿಯಾ ಯೋಜನೆ ಮಾಡಿ ಲಕ್ಷಾಂತರ ಹಣ ಲೂಟಿ ಮಾಡಲಾಗಿದೆ.
೧೫ನೇ ಹಣಕಾಸು ಯೋಜನೆ, ಗ್ರಾಮ ಪಂಚಾಯತಿಗೆ ಬರುವ ವಿವಿಧ ಅನುಧಾನ ಹಾಗೂ ಕರ ವಸೂಲಿಯ ಬ್ಯಾಂಕ್ ಖಾತೆಯಲ್ಲಿ ೧೫ನೇ ಹಣಕಾಸಿನ ಯೋಜನೆಯ ಹಣ ತೆಗೆಯಲಾಗಿದೆ.
ಇದಲ್ಲದೆ ಗ್ರಾಮ ಪಂಚಾಯತಿಯ ಸಭೆಯಲ್ಲಿ ಅನುಮೋದನೆ ಇಲ್ಲದೆ ಗ್ರಾಮ ಪಂಚಾಯತಿಯ ಅಧ್ಯಕ್ಷ ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿ ತಮ್ಮ ಮನಸ್ಸಿಗೆ ಬಂದ ಹಾಂಗೆ ಹಣವನ್ನು ಗ್ರಾಮ ಪಂಚಾಯತಿ ಸದ್ಯಸರ ಗಮನಕ್ಕೆ ತರದೆ ಆಕ್ರಮ ಮಾಡಿದ್ದಾರೆ ಎಂದು ಗ್ರಾಮ ಪಂಚಾಯತಿಯ ಸದ್ಯಸರಾದ ಬಸಲಿಂಗಪ್ಪಗೌಡ ಆರೋಪಿಸಿ ಗ್ರಾಮ ಪಂಚಾಯತಿಯ ಮುಂದೆ ಸತ್ಯಾಗ್ರಹ ಮಾಡುತ್ತಿದ್ದಾರೆ.
ಯಡ್ರಾಮಿ ತಾಲೂಕಿನ ಹೊಸ ಪಂಚಾಯತಿಯಾಗಿ ಪ್ರಾರಂಭದಿAದ ಒಂದಿಲ್ಲ ಒಂದು ಸುದ್ದಿಯಲ್ಲಿ ಇರುವ ಕರಕಿಹಳ್ಳಿ ಪಂಚಾಯತಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹಲವಾರು ನಕಲಿ ದಾಖಲೆ ನಿರ್ಮಾಣ ಮಾಡಿ ಲಕ್ಷಾಂತರಹ ಹಣ ಲೂಟಿ ಮಾಡಲಾಗಿದ್ದು, ೧೫ನೇ ಹಣಕಾಸಿನ ಯೋಜನೆಯು ದುರುಪಯೋಗ, ಗ್ರಾಮ ಪಂಚಾಯತಿಯ ಕರ ವಸೂಲಿಯಲ್ಲಿ ಕರಾಮತ್ತು, ಸಿಬ್ಬಂದಿ ನೇಮಕದಲ್ಲಿ ಆಕ್ರಮ ಮಾಡಲಾಗಿದೆ. ಕ್ರಿಯಾ ಯೋಜನೆಯ ಮೂಲ ಪ್ರತಿಯನ್ನು ತಿದ್ದುಪಡಿ ಮಾಡಿ ಸೈದಾಪೂರ ಗ್ರಾಮದಲ್ಲಿ ೧೬.೫೦ ಲಕ್ಷ ಹಾಗೂ ವರವಿ ಗ್ರಾಮದಲ್ಲ೧೧.೫೦ ಲಕ್ಷದ ಕಾಮಗಾರಿ ಮಾಡಿ ಬೊಗಸ್ ಬಿಲ್ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದರು.
೧೫ನೇ ಹಣಕಾಸು ಯೋಜನೆಯಲ್ಲಿ ೫೦ ಲಕ್ಷಕ್ಕಿಂತ ಹೆಚ್ಚು ಕರ ವಸೂಲಿಯಲ್ಲಿ ೧೫ ಲಕ್ಷಕ್ಕಿಂತ ಹೆಚ್ಚು ಹಣವನ್ನ ಸದ್ಯಸರ ಗಮನಕ್ಕೆ ತರದೆ ದುರುಪಯೋಗ ಮಾಡಿ ತಮ್ಮ ಮನಸ್ಸಿಗೆ ಬಂದವರ ಖಾತೆಗೆ ಜಮೆ ಮಾಡಲಾಗಿದೆ. ಕರ್ಕಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಅವ್ಯವಹಾರ ಹಗರಣ ಬಗ್ಗೆ ನಮ್ಮ ಗ್ರಾಮ ಪಂಚಾಯತಿಯಲ್ಲಿ ಎಲ್ಲಾ ಸಿಬ್ಬಂದಿಯವರು ಸೇರಿ ಎಲ್ಲಾ ಅನುದಾನಗಳನ್ನು ದುರುಪಯೋಗ ಪಡೆಸಿಕೊಂಡಿದ್ದಾರೆ.
ಬರೀ ಉದ್ಯೋಗ ಖಾತ್ರಿಯ ಕೆಲಸಗಳನ್ನು ನಡೆಸಿ ಉದ್ಯೋಗ ಖಾತ್ರಿಯ ಜಾಬ್ ಕಾರ್ಡ್ಗಳನ್ನು ಬಳಸಿ ತಯಾರು ಮಾಡಿ ಸುಳ್ಳು ಕೆಲಸಗಾರರ ಹಾಜರಿ ಹಾಕಿ ಅದರ ನೇರ ಲಾಭವನ್ನು ಪಡೆದುಕೊಂಡಿದ್ದಾರೆ.
ಇದರಿAದ ತಾತ್ಕಾಲಿಕ ಸಿಬ್ಬಂದಿಗಳು ಮತ್ತು ಅಧ್ಯಕ್ಷರು, ಪಂಚಾಯತಿಯ ಅಭಿವೃದ್ಧಿ ಅಧಿಕಾರಿ, ನರೇಗಾ ಜೆ.ಇ, ಹಾಗೂ ಪಂಚಾಯತ್ ರಾಜ್ ಇಲಾಖೆಯ ಕಿರಿಯ ಇಂಜಿನಿಯರ್ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹ ಮಾಡಿದರು.
ಈ ವಿಷಯವಾಗಿ ಹಲವಾರು ಬಾರಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಅವರ ಘಮನಕ್ಕೆ ತಂದರೂ ಕೂಡ ಕ್ರಮ ಮಾತ್ರ ಇಲ್ಲ ಎಂದು ಆಡಳಿತದ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದರು.
ಕರಕಿಹಳ್ಳಿ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ವರವಿ, ವಸ್ತಾರಿ, ಹರನಾಳ, ಸೈದಾಪೂರ, ಬೆಣ್ಣೂರ ಹಾಗೂ ಕರಕಿಹಳ್ಳಿ ಗ್ರಾಮಗಳು ಬರುತ್ತವೆ. ಈ ಗ್ರಾಮದ ಜನರು ಕಚೇರಿಗೆ ಬಂದವರಿಗೆ ಅಧಿಕಾರಿಗಳು ಕೆಲಸ ಮಾಡಿಕೊಡುತ್ತಿಲ್ಲ ಎಂದು ಆರೋಪಿಸಿದರು.
ಸುಳ್ಳು ದಾಖಲೆ ಮಾಡಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಸಂಭAದ ಪಟ್ಟ ಕಾರ್ಯನಿರ್ವಾಹಕ ಅಧಿಕಾರಿ ಜಇ ವಿರುದ್ಧ ಹಾಗೂ ಪಂಚಾಯತಿ ಅಧ್ಯಕ್ಷರ ವಿರುದ್ಧ ಸುಕ್ತ ತನಿಖೆ ಮಾಡಿ ಕಾನೂನು ಕ್ರಮ ಜರುಗಿಯಬೇಕು ಎಂದು ಆಗ್ರಹಿಸಿದರು. ಶಂಕರಲಿAಗ ಪೂಜಾರಿ, ಅಣ್ಣಾರಾಯಗೌಡ ವಸ್ತಾರಿ, ಶ್ರೀಮಂತ ತಳವಾರ, ಪುಡಲಿಂಕ್ ಪೂಜಾರಿ, ಚಂದ್ರಪ್ಪ ವಸ್ತಾರಿ, ಬಗವಂತರಾಯ ಬೆಣ್ಣೂರ, ರಾಜು ಪೂಜಾರಿ, ದೇವಾನಂದ ಪೂಜಾರಿ, ಸೋಮರಾಯಗೌಡ ಪಾಟೀಲ್, ಸಿದ್ದಣ್ಣ ಪೂಜಾರಿ ವಸ್ತಾರಿ, ಗುರುನಾಥ ವಸ್ತಾರಿ ಇತರರು ಸತ್ಯಾಗ್ರಹದಲ್ಲಿ ಇದ್ದರು.
ನಾಲ್ಕು ದಿನಗಳಿಂದ ಸತ್ಯಾಗ್ರಹ ನಡೆಸಲಾಗುತ್ತಿದ್ದು, ಸಂಬAಧಿಸಿದ ಅಧಿಕಾರಿಗಳು ಸೂಕ್ತ ತನಿಖೆ ಮಾಡಿ ತಪಿತಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸದಿದ್ದರೆ ಜಿಲ್ಲಾ ಪಂಚಾಯತ ಮುಂದೆ ಧರಣಿ ಮಾಡಲಾಗುವುದು.
-ಬಸವಲಿಂಗಪ್ಪಗೌಡ, ಗ್ರಾಮ ಪಂಚಾಯತಿ ಸದ್ಯಸರು, ಕರಕಿಹಳ್ಳಿ
ನಮ್ಮ ಗ್ರಾಮ ಪಂಚಾಯತಿಯಲ್ಲಿ ಜನರಿಗೆ ಒಂದು ಕ್ರೀಯಾ ಯೋಜನೆ ತೋರಿಸುತ್ತಾರೆ. ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿಯ ಅಧಿಕಾರಿಗಳು ಭೋಗಸ್ ಕ್ರೀಯಾ ಯೋಜನೆಗೆ ಅನುಮತಿ ನೀಡುತ್ತಾರೆ. ಹಾಗಾದರೆ ಗ್ರಾಮ ಪಂಚಾಯತಿ ಗ್ರಾಮ ಸಭೆ ಏಕೆ ಮಾಡಬೇಕು.
ಈಗಾಗಲೇ ಕರಕಿಹಳ್ಳಿ ಪಂಚಾಯತಿಗೆ ಭೇಟಿ ನೀಡಲಾಗಿದ್ದು, ಸರ್ಕಾರದಿಂದ ಎಲ್ಲಾ ಅನುದಾನ ಖರ್ಚು ವೆಚ್ಚದ ಬಗ್ಗೆ ಅಭಿವೃದ್ಧಿ ಅಧಿಕಾರಿಯವರಿಗೆ ತಿಳಿಸಲಾಗಿದೆ.