ಹೆಂಡತಿಯಿಂದಲೇ ಗಂಡನ ಕೊಲೆ
ಕಲಬುರಗಿ,ಆ.2-ಹೆಂಡತಿಯೇ ಗಂಡನನ್ನು ಕೊಲೆ ಮಾಡಿರುವ ಘಟನೆ ಇಲ್ಲಿನ ಆರ್.ಜಿ.ನಗರದಲ್ಲಿ ನಡೆದಿದೆ.
ಇಲ್ಲಿನ ಕನಕ ನಗರದ ನಿವಾಸಿ ಈಶ್ವರ (26) ಕೊಲೆಯಾದವರು.
ಪತ್ನಿ ರಂಜಿತಾ ಮತ್ತು ಅವರ ಮನೆಯವರ ಸೇರಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಕಳೆದ ನಾಲ್ಕೆöÊದು ವರ್ಷಗಳ ಹಿಂದೆ ರಂಜಿತಾ-ಈಶ್ವರ ಮದುವೆಯಾಗಿದ್ದು, ಒಂದು ಮಗುವಿದೆ. ಪತಿ-ಪತ್ನಿ ನಡುವೆ ಜಗಳವಾದ ಹಿನ್ನೆಲೆಯಲ್ಲಿ ರಂಜಿತಾ ತವರು ಮನೆಯಲ್ಲಿದ್ದರು. ಈಶ್ವರ ನಿನ್ನೆ ರಾತ್ರಿ ಮಗುವನ್ನು ನೋಡಲು ಹೋದಾಗ ಗಲಾಟೆ ನಡೆದು ರಂಜಿತಾ ಮತ್ತು ಅವರ ಮನೆಯವರು ಸೇರಿ ಕೈಕಾಲು ಕಟ್ಟಿ ಹಾಕಿ ಹೊಡೆದು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈಶ್ವರ ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಈ ಸಂಬAಧ ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
ಅತ್ತೆ ಹಾಗೂ ಪತ್ನಿಯನ್ನು ವಶಕ್ಕೆ ಪಡೆಯಲಾಗಿದ್ದು ವಿಚಾರಣೆ ನಡೆಯುತ್ತಿದೆ.