ಮೆಟ್ರಿಕ್ ನಂತರ ಬಾಲಕಿಯರ ನೂತನ ವಸತಿ ನಿಲಯ ಉದ್ಘಾಟಿಸಿದ ಶಾಸಕ ಶರಣುಗೌಡ ಕಂದಕೂರ
ಗುರುಮಠಕಲ್,ಆ.2-ಶೈಕ್ಷಣಿಕ ಅಭಿವೃದ್ದಿಗಾಗಿ ಸರಕಾರವು ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಈ ಭಾಗದ ವಿಧ್ಯರ್ಥಿಗಳು ಉನ್ನತ ಪದವಿಗಳನ್ನು ಪಡೆಯಬೇಕು ಯಾರೂ ಕೂಡ ಶಿಕ್ಷಣದಿಂದ ವಂಚಿತರಾಗಬಾರದು. ಶಿಕ್ಷಣ ಕ್ಷೇತ್ರಕ್ಕೆ ಸಂಬAಧಿಸಿದ ಮೂಲ ಸೌಕರ್ಯಗಳನ್ನು ಸರಕಾರದಿಂದ ಒದಗಿಸಲು ಬದ್ದನಾಗಿದ್ದೆನೆ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಹೇಳಿದರು.
ಪಟ್ಟಣದಲ್ಲಿ ಜಿ ಪಂ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕ್ರೆöÊಸ್ ವತಿಯಿಂದ ಡಿ. ದೇವರಾಜು ಅರಸು ಮೆಟ್ರಿಕ್ ನಂತರ ಬಾಲಕಿಯರ ವಸತಿ ನೀಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು,
ಹಿಂದುಳಿದ ವರ್ಗಗಳ ಸಬಲೀಕರಣಕ್ಕಾಗಿ ಶ್ರಮಿಸಿದ ಡಿ.ದೇವರಾಜು ಅರಸ್ ಅವರು ಅಪರೂಪದ ಜನ ನಾಯಕರು ಈ ಸಮಯದಲ್ಲಿ ಅವರ ಭಾವ ಚಿತ್ರವನ್ನಿಟ್ಟು ಪೂಜೆ ಮಾಡಿರುವದು ಬಹಾಳ ಸಂತೋಷವಾಯಿತು ಎಂದು ಹೇಳಿದರು.
ಪ್ರತಿ ವಸತಿ ನಿಲಯಗಳಲ್ಲಿರುವ ನಿಜಾಂಶವನ್ನು ಅರಿತು ಅಲ್ಲಿ ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸಿಕೊಡಲು ಎಲ್ಲಾ ವಿಧ್ಯಾರ್ಥಿ ವಸತಿ ನಿಲಯಗಳಲ್ಲಿ ಖುದ್ದಾಗಿ ಒಂದು ದಿನ ವಾಸ್ತವ್ಯ ಮಾಡುವ ಯೋಜನೆಯನ್ನು ಮಾಡಿದ್ದೆನೆ ಇದಕ್ಕೆ ಅಧಿಕಾರಿಗಳ ಸಹಕಾರ ಬೇಕು ಎಂದು ಹೇಳಿದರು. ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿ ಸಂತೋಷರೆಡ್ಡಿ ಮಾತನಾಡಿ, ಇಲಾಖೆಯಲ್ಲಿ ಏನು ಇದೆ ಅನ್ನುವವರು ಬಹಳಷ್ಟು ಜನರು ಇದ್ದಾರೆ. ಆದರೆ ಇಲಾಖೆಗೆ ಏನು ಬೇಕು ಅನ್ನುವ ನಾಯಕರು ಬಹಳಷ್ಟು ಕಡಿಮೆ. ಶಾಸಕರು ಅಂತ್ಯAತ್ತ ಕಡಿಮೆ ಅವಧಿಯಲ್ಲಿ ಕ್ಷೇತ್ರದಲ್ಲಿ ಅಪಾರವಾದ ಅಭಿವೃದ್ದಿ ಕಾರ್ಯಗಳನ್ನು ಮಾಡಿ ಜನರ ಆಪಾರ ಪ್ರೀತಿ ಗಳಿಸಿದ್ದಾರೆ ಎಂದು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ತಾಲೂಕ ತಹಸೀಲ್ದಾರರಾದ ನೀಲಪ್ರಭಾ, ತಾ ಪಂ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಶೇಷಲು ,ಪುರಸಭೆ ಮುಖ್ಯಧಿಕಾರಿ ಭಾರತಿ ಎಸ್ ದಂಡೋತಿ, ಎ ಇ ಇ ಅಂಬಾರಾಯ, ಶಿಶು ಅಭಿವೃದ್ದಿ ಅಧಿಕಾರಿ ಶರಣಬಸಪ್ಪ, ಜಿ ತಮ್ಮಣ್ಣ,ಕಿಷ್ಟರೆಡ್ಡಿ ಪೋಲಿಸ್ ಪಾಟಿಲ್,ಶರಣು ಅವುಂಟಿ, ಪಾಪಣ್ಣ ಮನ್ನೆ, ಸೋಮರೆಡ್ಡಿ, ಅನಂತಪ್ಪ ಹಾಗೂ ಸಾರ್ವ ಜನಿಕರು ಇದ್ದರು. ಕುಮಾರಿ ಭಾಗ್ಯಶ್ರೀ, ಯಶೋಧ ಪ್ರಾಥನ ಗೀತೆಯನ್ನು ಹಾಡಿದರು.