ರಾಜಕುಮಾರಗೆ ಪಿಎಚ್.ಡಿ ಪದವಿ
ಕಲಬುರಗಿ,ಆ.2-ರಾಜಕುಮಾರ ಧುಮ್ಮನಸೂರ ಅವರು ಡಾ.ಬಸವರಾಜ ಸಬರದ ಅವರ ಮಾರ್ಗದರ್ಶನದಲ್ಲಿ ” ಅಲ್ಲಮಪ್ರಭು ಬೆಟ್ಟದೂರು ಅವರ ಸಾಹಿತ್ಯ-ಒಂದು ಅಧ್ಯಯನ” ಎಂಬ ವಿಷಯದ ಮೇಲೆ ಮಂಡಿಸಿದ ಮಹಾಪ್ರಬಂಧಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯ ಡಾಕ್ಟರೇಟ್ (ಪಿಎಚ್.ಡಿ) ಪದವಿ ನೀಡಿದೆ.
ಧುಮ್ಮನಸೂರ ಚಿತ್ತಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.