ಮರಗೂರ ಬಳಿ ನೆಲಕ್ಕಪ್ಪಳಿಸಿದ ಇಸ್ರೋ ಸಂಶೋಧನೆ ಪರಿಕರ…!
ವಿಜಯಪುರ,ಆ.2:ಲೋ ಇನ್ಟೆನ್ಸಿಟಿ ವೆದರ್ ಮಾನಿಟರರಿಂಗ್ ಸಿಸ್ಟಮ್
ಪ್ಯಾರಾಚೂಟ್ ಮಾದರಿಯಲ್ಲಿ ಹಾರಾಡುವ ಪರಿಕರವೊಂದು
ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಮರಗೂರ ಗ್ರಾಮದ ಬಳಿ ನೆಲಕ್ಕುರುಳಿದೆ.
ಬೆಂಗಳೂರಿನ ಇಸ್ರೋದಿಂದ ಕೆಲ ದಿನಗಳ ಹಿಂದೆ ಈ ಸಾಧನ ಉಡಾವಣೆಯಾಗಿತ್ತು.
ಲೋ ಲ್ಯಾಟಿಟ್ಯೂಡ್ ವೆದರ್ ಮಾನಿಟರಿಂಗ್ ಮಾಡುವ ವಿಶೇಷತೆ ಹೊಂದಿರುವ ಸಾಧನ ಸ್ಥಳೀಯ ಪ್ರದೇಶಗಳ ಹವಾಮಾನ ಮಾಹಿತಿ ಕಲೆ ಹಾಕಿ ಮಾಹಿತಿ ರವಾನೆ ಮಾಡುವ ಸಲುವಾಗಿ ಈ ಸಾಧನ ಉಡಾವಣೆ ಮಾಡಲಾಗಿತ್ತು.
ಹೈದರಾಬಾದ್‌ನ ಇಸ್ರೋ ಕಚೇರಿಯ ಅಧಿಕಾರಿಗಳಿಂದ ಈ ಸಾಧನ ಮಾನಿಟರಿಂಗ್ ಮಾಡಲಾಗುತ್ತಿತ್ತು. ಪರಿಕರ
ನೆಲಕ್ಕುರುಳಿದ ಮಾಹಿತಿ ಪಡೆದು ಇಸ್ರೋದ ವಿಜ್ಞಾನಿಗಳು ತಂತ್ರಜ್ಞರು
ವಿಜ್ಞಾನಿಗಳು ಹಾಗೂ ತಂತ್ರಜ್ಞರು ಸ್ಥಳಕ್ಕೆ ಆಗಮಿಸಲಿದ್ದಾರೆ. ವಿಜ್ಞಾನಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು
ಆತಂಕ ಬೇಡ- ಸಾರ್ವಜನಿಕರಲ್ಲಿ ಜಿಲ್ಲಾಧಿಕಾರಿ ಮನವಿ
ಭಾರತ ಸರ್ಕಾರದ ಪರಮಾಣು ಶಕ್ತಿ ಇಲಾಖೆಯ ಅಧೀನದಲ್ಲಿನ ಹೈದರಾಬಾದ್ ಮೂಲದ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ (ಟಾಟಾ ಇನ್ ಸ್ಟಿಟ್ಯೂಟ್ ಆಫ್ ಫಂಡಮೆAಟಲ್ ರೀಸರ್ಚ್) ಹವಾಮಾನ ಹಾಗೂ ವಾತಾವರಣ ಅಧ್ಯಯನಕ್ಕಾಗಿ ಉಡಾವಣೆ ಮಾಡಿದ್ದ ಹವಾಮಾನ ಅಧ್ಯಯನಾಶೀಲ ವೈಜ್ಞಾನಿಕ ಉಪಕರಣ ( ಪೇಲೋಡ್ ) ವೊಂದು ಪ್ಯಾರಾಚೂಟ್ ನ ನೆರವಿನಿಂದ ಚಡಚಣ ತಾಲೂಕಿನ ಗ್ರಾಮವೊಂದರ ಜಮೀನಿನಲ್ಲಿ ಬಂದಿಳಿದಿದೆ.
ಜಿಲ್ಲಾಡಳಿತವು ಸಂಬAಧಿತ ಸಂಸ್ಥೆಯನ್ನು ಸಂಪರ್ಕಿಸಿ ಈಗಾಗಲೇ ಮಾಹಿತಿ ಒದಗಿಸಿದೆ.
ಸಂಸ್ಥೆಯ ಅಧಿಕಾರಿಗಳ ತಂಡ ಸದ್ಯದಲ್ಲಿಯೇ ವಿಜಯಪುರಕ್ಕೆ ಆಗಮಿಸಲಿದೆ. ಅಲ್ಲದೆ, ಜಮೀನಿನಲ್ಲಿ ಬಿದ್ದಿರುವ ಪ್ಯಾರಾಚ್ಯೂಟ್ ಹಾಗೂ ಪೆಲೋಡ್, ಅದಕ್ಕೆ ಸಬಂಧಿಸಿದ ಸಾಧನಾ ಸಲಕರಣೆಗಳನ್ನು ತೆಗೆದುಕೊಂಡು ಹೋಗಲಿದೆ.
ಆದ ಕಾರಣ, ಈ ಬಗ್ಗೆ ಯಾರೂ ಯಾವುದೇ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.