ನೈಜ ತಳವಾರರಿಗೆ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರ ವಿತರಿಸಲು ಒತ್ತಾಯಿಸಿ ಡಿಸಿಗೆ ಮನವಿ
ವಿಜಯಪುರ,ಆ,2: ನೈಜ ತಳವಾರರಿಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ನಗರ ಅಧ್ಯಕ್ಷÀ ಪ್ರವೀಣ ನಾಟೀಕಾರ ಮಾತನಾಡಿ, ಭಾರತ ಸರ್ಕಾರದ ಗೆಜೆಟ್ ನೋಟಿಫಿಕೇಶನ್ ಮತ್ತು ಕರ್ನಾಟಕ ಸರ್ಕಾರಕ್ರಮ ಸಂಖ್ಯೆ: (88ಊ) ಸಮೇತ ಗೆಜೆಟ್ ಸುತ್ತೋಲೆಗಳನ್ನು ಆಧರಿಸಿ ನೈಜ ತಳವಾರರಿಗೆ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರಗಳು ಕರ್ನಾಟಕದ, ಎಲ್ಲಾ ಜಿಲ್ಲೆ/ತಾಲೂಕುಗಳಲ್ಲಿ ವಿತರಣೆಯಾಗಿದ್ದು, ಯಾವುದೋ ನಕಲಿ ಸಂಘ/ಸAಸ್ಥೆಗಳ ಒತ್ತಡಕ್ಕೆ ಮಣೆಯದೆ ನೈಜ ತಳವಾರ ಜಾತಿಯವರಿಗೆ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರಗಳನ್ನು ವಿತರಿಸುವ ಯಥಾಸ್ಥಿತಿಯನ್ನು ಕಾಪಾಡಬೇಕೆಂದು ಜಿಲ್ಲೆಯ ಎಲ್ಲಾ ತಹಶೀಲದಾರಗಳಿಗೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.
ಸಿಂಧುತ್ವ, ನೌಕರಿ, ಮುಂಬಡ್ತಿ, ಶಾಲಾ-ಕಾಲೇಜುಗಳ ಪ್ರವೇಶ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಸೌಲಭ್ಯಗಳನ್ನು ವಿತರಿಸುವ ಯಥಾಸ್ಥಿತಿಯನ್ನು ಇದರ ಜೊತೆಗೆ ಕಾಪಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಪ್ರಕಾಶ ಸೊನ್ನದ, ಭರತ ಕೋಳಿ, ಸಾಹೇಬಗೌಡ ಬಿರಾದಾರ, ತಳವಾರ ಸಮಾಜದ ಹಿರಿಯ ಮುಖಂಡರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.