ವ್ಯಸನಮುಕ್ತ ಜೀವನ ನಡೆಸಿ, ಸಮಾಜದ ಸ್ವಾಸ್ಥö್ಯö ಕಾಪಾಡಿಕೊಳ್ಳಿ: ಮಾತೋಶ್ರೀ ದಾನಮ್ಮತಾಯಿ ಹಿರೇಮಠ
ವಿಜಯಪುರ,ಆ.2:ನಗರ ಹೊರವಲಯದ ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದಲ್ಲಿ ಪ.ಪೂ ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ, ಶಿವಬಸವ ಯೋಗಾಶ್ರಮದ ಮಾತೋಶ್ರೀ. ದಾನಮ್ಮತಾಯಿ ಹಿರೇಮಠ, ಮಹಾಂತ ಶಿವಯೋಗಿಗಳು ಅಪಾರ ಪಾಂಡಿತ್ಯ ಉಳ್ಳವರಾಗಿದ್ದು, ಸದಾ ದೀನದಲಿತರ ಸೇವೆಯಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿದ್ದರು ಎಂದು ಪೂಜ್ಯರ ಸೇವೆಯನ್ನು ನೆನಪಿಸಿಕೊಂಡರು.
ಪೂಜ್ಯರು ಮಹಾಂತರ ಜೋಳಿಗೆ ಎಂಬ ವಿನೂತನ ಅಭಿಯಾನದ ಮೂಲಕ ಯುವಕರಲ್ಲಿ, ಬಡಜನರಲ್ಲಿ, ಎಲ್ಲರಲ್ಲಿ ವ್ಯಸನಮುಕ್ತಿ ಕುರಿತು ಜನಜಾಗೃತಿ ಮೂಡಿಸಿ, ಎಲ್ಲರೂ ವ್ಯಸನಮುಕ್ತರಾಗುವಂತೆ ಮಾಡಿದ ಮಹಾನ್ ಸಾಧಕರು. ಅದಕ್ಕಾಗಿಯೇ ಇಂದು ಅವರ ಜನ್ಮ ದಿನವನ್ನು ಸರ್ಕಾರವು ವ್ಯಸನಮುಕ್ತರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಕೃಷಿ ಮಹಾವಿದ್ಯಾಲಯದ ವೈದ್ಯಾಧಿಕಾರಿ ಡಾ. ಬಸವರಾಜ ಬೀಳೂರ ಮಾತನಾಡಿ, ಬೀಡಿ, ತಂಬಾಕು ಸೇವೆನೆ, ಧೂಮ್ರಪಾನ, ಮದ್ಯಪಾನ ಚಟಗಳಿಂದ ಜನರು ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇಂತಹ ದುಶ್ಚಟಗಳಿಂದ ದೂರವಿರುವುದು, ಅತೀ ಅವಶ್ಯಕವಾಗಿದೆ ಎಂದರು.
ಬಿ.ಎಲ್.ಡಿ.ಇ. ಯೋಗ ಶಿಕ್ಷಕ ಮಡಿವಾಳಪ್ಪ ದೊಡ್ಡಮನಿ ಮಾತನಾಡಿ, ಯೋಗ ಮಾಡುವುದರಿಂದ, ದುಶ್ಚಟಗಳಿಂದ ದೂರವಿರಬಹುದು. ಅನೇಕ ಯೋಗ ಕ್ರಮಗಳಿಂದ, ಸದೃಢ ಮನಸ್ಸಿನೊಂದಿಗೆ ಆರೋಗ್ಯವನ್ನು ಕಾಪಾಡಿ ಆಯುಷ್ಯವನ್ನು ಹೆಚ್ಚಿಸಿಕೊಳ್ಳಬಹುದೆಂದರು.
ಅಧ್ಯಕ್ಷತೆ ವಹಿಸಿದ ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಎ. ಭೀಮಪ್ಪ ಮಾತನಾಡಿ, ಯುವಕರಲ್ಲಿ ಮಾದಕ ವ್ಯಸನಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವುಗಳೆಲ್ಲದರಿಂದ ದೂರವಿದ್ದು, ಅಭ್ಯಾಸ ಮಾಡಿ ಪದವಿಗಳಿಸಬೇಕೆಂದರು.
ಇದೇ ಸಂದರ್ಭದಲ್ಲಿ ವ್ಯಸನಮುಕ್ತರಾಗಲು ವಿದ್ಯಾರ್ಥಿಗಳಿಗೆ, ಸಿಬ್ಬಂದಿಗಳಿಗೆ ಪ್ರತಿಜ್ಞಾವಿಧಿ ಭೋದಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಹ ಸಂಶೋಧನಾ ನಿರ್ದೇಶಕ ಡಾ. ಅಶೋಕ ಎಸ್. ಸಜ್ಜನ, ಸಹ ವಿಸ್ತರಣಾ ನಿರ್ದೇಶಕ ಡಾ. ಆರ್. ಬಿ. ಬೆಳ್ಳಿ, ಡಾ. ಎಮ್. ವಾಯ್. ತೆಗ್ಗಿ, ಡಾ. ಆರ್. ಬಿ. ಜೊಳ್ಳಿ, ಡಾ. ಸಾವಿತ್ರಿ ಪಾಟೀಲ, ಡಾ. ಜಿ. ಶ್ರೀನಿವಾಸಲು, ವಿದ್ಯಾರ್ಥಿಗಳಾದ ವಿಕ್ರಂ ತುಂಬಗಿ, ರಿಹಾನ್‌ಮಲಿಕ್ ಹಳ್ಳೂರ, ಲಕ್ಷಿö್ಮÃ ಬಳ್ಳೂರ ಸೇರಿದಂತೆ ಆವರಣದ ಸಿಬ್ಬಂದಿ, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.