ಬಿದರಕುಂದಿ ಗ್ರಾಮದೇವತೆ ಜಾತ್ರಾ ಮಹೋತ್ಸವ
ಮುದ್ಧೇಬಿಹಾಳ :ಆ.2: ತಾಲೂಕಿನ ಸುಕ್ಷೇತ್ರ ಬಿದರಕುಂದಿ ಗ್ರಾಮದ ಗ್ರಾಮದೇವತೆ ಜಾತ್ರಾ ಮಹೋತ್ಸವ ದಿ. ಅಗಸ್ಟ್ 2ರಿಂದ ದಿ. 06 ರವರೆಗೆ ನೆರವೇರುವುದು.
ಶುಕ್ರವಾರ ದಿ. 2 ಮುಂಜಾನೆ ಗ್ರಾಮ ದೇವತೆಯನ್ನು ಗಂಗಾಸ್ಥಳದಿAದ ಈರಗಾರ, ಡೋಳ್ಳು ಕುಣಿತ, ಜೋಗುತಿ ನೃತ್ಯದ ಜೊತೆಗೆ ಪಾದಗಟ್ಟಿಗೆ ಕರೆತರಲಾಗುವದು.
ಅಂದೇ ರಾತ್ರಿ 9 : 00 ಮಾಳಿಂಗೇಶ್ವರ ಡೋಳ್ಳಿನ ಸಂಘ ಶಿವಣಗಿ, ಹಾಗೂ ಅಮೋಘ ಗಾಯನ ಸಂಘ ಕುರುಗೋಟ ಇವರಿಂದ ಸುಪ್ರಸಿದ್ದ ವಾದಿ ಪ್ರತಿವಾದಿ ಡೋಳ್ಳಿನ ಹಾಡಿಕೆ ನಡೆಯುವದು. ದಿ.03 ಶನಿವಾರದಂದು ಬೆಳಗ್ಗೆ 9:00 ಗಂಟೆಯಿAದ ಸಾಯಂಕಾಲ 5:00ವರೆಗೆ ಮಾಯಮ್ಮನ ಹಬ್ಬ, ಅಂದೇ ದಿನ ಸಾಯಂಕಾಲ ಶ್ರೀ ಸಂಗಮೇಶ್ವರ ಸ್ಪೋಟ್ಸ್ ಕ್ಲಬ್ ಬಿದರಕುಂದಿಯವರು ಹಮ್ಮೀಕೊಂಡಿರುವ ಅಂತರ ರಾಜ್ಯಮಟ್ಟದ ಕಬ್ಬಡ್ಡಿ ಪಂದ್ಯಾವಳಿಗಳು, ಬಿದರಕುಂದಿ ಕಬಡ್ಡಿ ವೈಭವ ನಡೆಯಲಿದೆ.
ದಿ 04 ರವಿವಾರದಂದು ಜಾನಪದ ಗಾಯಕರಿಂದ ಸಂಗಿತ ಕಾರ್ಯಕ್ರಮ ಅಂದೇ ದಿನ ಸಾಯಂಕಾಲ 4 :00ಗಂಟೆಗೆ ರಂಗೋಲಿ ಸ್ಪರ್ದೆ ನಡೆಸಲಾಗುವದು.ದಿ.5:00 ಸೋಮವಾರದಂದು ಬೆಳಗ್ಗೆ 8:00 ಗಂಟೆಗೆ ಸುಮಾರು 15 ಕಿಮೀ ಪುರುಷರಿಂದ ಓಟದ ಸ್ಪರ್ದೆ , 10:00 ಗಂಟೆಗೆ 50 ಕೆಜಿ ಇರುವ ಪುರುಷರಿಂದ ಪುಟ್ಟಿಗಾಡಿ ಓಡುವ ಸ್ಪರ್ದೆ,ಅಂದೇ ದಿನ ಸಂಜೆ 10:00 ಗಂಟೆಗೆ ವಿಶ್ವ ಜ್ಯೋತಿ ಪಂಚಾಕ್ಷರಿ ನಾಟ್ಯ ಸಂಘ ಜವರ್ಗಿ ಇವರಿಂದ ಕುಂಟ ಕೋಣ ಮೂಕ ಜಾಣ ಎಂಬ ಹಾಸ್ಯ ಭರಿತ ನಾಟಕ ನಡೆಯುವದು.ದಿ.06 ಮಂಗಳವಾರ ಬೆಳಗ್ಗೆ 9:00 ಗಂಟೆಗೆ ಒಂದು ಕುದುರೆ, ಒಂದು ಎತ್ತಿನಿಂದ ಪುಟ್ಟಿಗಾಡಿ ರೇಸ್ ನಡೆಯುವದು,ಅಂದೇ ದಿನ ಸಾಯಂಕಾಲ ಗ್ರಾಮದೇವತೆಯನ್ನು ವಾಧ್ಯ ವೈಭವದೊಂದಿಗೆ ಮೆರೆವಣಿಗೆ ಮಾಡುತ್ತಾ ದೇವಸ್ಥಾನಕ್ಕೆ ತರಲಾಗುವದು ಎಂದು ಜಾತ್ರಾ ಕಮೀಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.