ಪೋಲಿಸ್ ಕೆಲಸ ಅತ್ಯಂತ ಪವಿತ್ರವಾದದ್ದು
ಕೆಂಭಾವಿ :ಆ.2:ಪಟ್ಟಣದ ಪೊಲೀಸ್ ಠಾಣೆಯ ನೂತನ ಕಟ್ಟಡ ಉದ್ಘಾಟನಾ ಕಾರ್ಯದಲ್ಲಿ ಪಿಎಸ್‌ಐ ರಾಜಶೇಖರ ರಾಠೋಡ ಅವರ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಹಿರಿಯ ಪತ್ರಕರ್ತ ಸಂಜೀವರಾವ ಕುಲಕರ್ಣಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಆಗಿ ಕಾರ್ಯ ನಿರ್ವಹಿಸಿ ವರ್ಗಾವಣೆಗೊಂಡ ರಾಜಶೇಖರ ರಾಠೋಡ ಅವರಿಗೆ ಬುಧವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಪೊಲೀಸ್ ಠಾಣೆಯ ಜಿಲ್ಲೆಯಲ್ಲಿಯೆ ಅತೀ ಹೆಚ್ಚು ಗ್ರಾಮಗಳನ್ನು ಒಳಗೊಂಡ ಪೊಲೀಸ್ ಠಾಣೆಯಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಪೊಲೀಸ್ ಅಧಿಕಾರಿಗಳಿಗೆ ಒಂದು ದೊಡ್ಡ ಸವಾಲೆ ಸರಿ. ಇಂಥಾ ಪರಿಸ್ಥಿತಿಯಲ್ಲೂ ದಿಟ್ಟ ಸೇವೆ ಮಾಡಿ ಒಬ್ಬ ಮಾದರಿ ಪಿಎಸ್‌ಐ ಆಗಿ ರಾಠೋಡ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು.
ನಂತರ ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಪಿಎಸ್‌ಐ ರಾಜಶೇಖರ ರಾಠೋಡ, ನಮ್ಮ ಇಲಾಖೆಯಲ್ಲಿ ವರ್ಗಾವಣೆ ಸಾಮಾನ್ಯ, ನಾವು ನಿರ್ವಹಿಸುವ ಕರ್ತವ್ಯದ ಸ್ಥಳದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಾರ್ವಜನಿಕರಿಗೆ ಮತ್ತು ಯಾವುದೆ ಸಮಾಜಕ್ಕೆ ತೊಂದರೆಯಾಗದAತೆ ಕಾನೂನಿನ ರಕ್ಷಣೆ ಮಾಡುವುದು ನಮ್ಮಕರ್ತವ್ಯ. ಈ ನಿಟ್ಟಿನಲ್ಲಿ ನಾನು ನನ್ನ ಸೇವಾ ಅವಧಿಯಲ್ಲಿ ಪ್ರಾಮಾಣಿಕ ಕರ್ತವ್ಯ ನಿರ್ವಹಿಸಿದ್ದೇನೆ ಎಂಬ ಭಾವನೆ ನನಗಿದೆ. ಇದಕ್ಕೆ ಇಲ್ಲಿನ ಜನತೆಯ ಸಹಕಾರ ಮರೆಯುವಂತಿಲ್ಲ ಎಂದು ಹೇಳಿದರು. ವೈದ್ಯಾಧಿಕಾರಿ ಡಾ. ಗಿರೀಶ ಕುಲಕರ್ಣಿ, ಪತ್ರಕರ್ತ ಡಿ. ಸಿ. ಪಾಟೀಲ, ಪೇದೆ ಮಾಳಪ್ಪ ಮಾತನಾಡಿದರು.
ಎಎಸ್‌ಐ ಬಲರಾಮ, ಬಸನಗೌಡ, ನೀಲಪ್ಪ, ಪತ್ರಕರ್ತ ಪವನ ಕುಲಕರ್ಣಿ, ಲಾಲಪ್ಪ ಆಲ್ಹಾಳ, ದೇವೇಂದ್ರ ಮಾಸ್ತರ, ಶಿವಶರಣ ನಾಗರೆಡ್ಡಿ, ಜುಮ್ಮಣ್ಣ, ರಹೆಮಾನ ಪಟೇಲ, ಎಸ್. ಕೆ. ಕಲೀಮ್, ಧರ್ಮಣ್ಣ ಸೇರಿದಂತೆ ಹಲವರಿದ್ದರು. ರೇಖಾ ನಿರೂಪಣೆ ಮಡಿದರು, ದೇವಕಿ ಸ್ವಾಗತಿಸಿದರು, ಮಾಳಪ್ಪ ವಂದಿಸಿದರು.