ಸುಂದರ ಭಾವಿಕಟ್ಟಿ ಸೇವಾ ವಯೋನಿವೃತ್ತಿ, ಬಿಳ್ಕೋಡುಗೆ
ಹುಮನಾಬಾದ್: ಆ.2:ತಾಲ್ಲೂಕಿನ ಹಳ್ಳಿಖೇಡ(ಬಿ) ಗ್ರಾಮದ ಬಸವತೀರ್ಥ ವಿದ್ಯಾಪೀಠ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಸುಂದರ ಭಾವಿಕಟ್ಟಿ ಅವರು ತಮ್ಮ ಸೇವೆಯಿಂದ ವಯೋನಿವೃತ್ತಿ ಹೊಂದಿರುವ ಪ್ರಯುಕ್ತ ಬಿಟಿವಿಪಿ ಶಾಲಾ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಬಿಳ್ಕೋಡಲಾಯಿತು.
ಸಂಸ್ಥೆಯ ಕಾರ್ಯಾಧ್ಯಕ್ಷ ಕೇಶವರಾವ ತಳಘಟಕರ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸುಂದರ ಭಾವಿಕಟ್ಟಿ ಅವರು ಸುಮಾರು 38 ವರ್ಷಗಳಿಂದ ನಮ್ಮ ಸಂಸ್ಥೆಯ ಬಸವತೀರ್ಥ ವಿದ್ಯಾಪೀಠ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಉತ್ತಮ ಸೇವೆ ಸಲ್ಲಿಸಿದ ಇವರು ಸರಳ, ಸಜ್ಜನಿಕೆಯ ಮತ್ತು ಮಕ್ಕಳ ಅಚ್ಚು ಮೇಚ್ಚಿನ ಶಿಕ್ಷಕರಾಗಿದ್ದರು ಎಂದು ತಿಳಿಸಿದರು.
ಬಸವತೀರ್ಥ ವಿದ್ಯಾಪೀಠ ಸಂಸ್ಥೆಯ ಆಡಳಿತಾಧಿಕಾರಿ ಗುಂಡಯ್ಯಾ ತೀರ್ಥ ಇವರು ಮಾತನಾಡಿ, ಸುಂದರ ಭಾವಿಕಟ್ಟಿ ಅವರು ಮಕ್ಕಳ ನೆಚ್ಚಿನ ಶಿಕ್ಷಕರಲ್ಲಿ ಒಬ್ಬರಾಗಿದ್ದಾರೆ, ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಸೋಮಯ್ಯಾ ಹಿರೇಮಠ, ರಮೇಶ ಮಹೇಂದ್ರಕರ್, ಪ್ರಭುರಾವ ದುರ್ಗದ, ಬಸವರಾಜ ದುಬಲಗುಂಡಿಕರ್, ಸೇರಿದಂತೆ ಶಿಕ್ಷಕರ ಕುಟುಂಬಸ್ಥರು, ಸಂಬಧಿಕರು, ಹಳೆಯ ವಿದ್ಯಾರ್ಥಿಗಳು, ಆತ್ಮೀಯರು ಹಾಗೂ ಸಂಸ್ಥೆಯ ಆಡಳಿತ ಮಂಡಳಿಯವರು ಮತ್ತು ಶಾಲಾ, ಕಾಲೇಜಿನ ಶಿಕ್ಷಕರು ಹಾಗೂ ಉಪನ್ಯಾಸಕರು, ಉಪಸ್ಥಿತರಿದ್ದರು.
ಪ್ರಾಂಸುಪಾಲ ಮಸ್ತಾನ ಪಟೇಲ್ ಪ್ರಾಸ್ತವಿಕ ಮಾತನಾಡಿದರು, ಕುಮಾರಿ ಸಹನಾ ಹಾಗೂ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ರೇವಪ್ಪಯ್ಯ ಸ್ವಾಮಿ ಸ್ವಾಗತಿಸಿದರು. ಸಹ ಶಿಕ್ಷಕ ಸಂಗಪ್ಪ ಪಾಟೀಲ್, ನಿರೂಪಿಸಿದರು, ಕುಮಾರ ದಿನೇಶಕುಮಾರ ಕೊಂಡಾ ವರದಿ ವಾಚನ ಮಾಡಿದರು. ಉಪ್ಯಾಸಕ ನರೇಂದ್ರ ಪಾಟೀಲ್ ವಂದಿಸಿದರು.