ಧ್ವಜದ ಸೃಷ್ಟಿಕರ್ತ ಪಿಂಗಳಿ ವೆಂಕಯ್ಯ
ಕಲಬುರಗಿ:ಆ.೨: ಕೇಸರಿ, ಬಿಳಿ, ಹಸಿರು ಬಣ್ಣ ಹಾಗೂ ನಡುವೆ ಅಶೋಕ ಚಕ್ರವಿರುವ, ಭಾರತದಲ್ಲಿರುವ ಎಲ್ಲರಿಗೂ ಒಂದೇಯಾಗಿರುವ ಹೆಮ್ಮೆಯ, ಗೌರವ, ಸಮಾನತೆ ಹಾಗೂ ಸಾರ್ವಭೌಮತೆಯನ್ನು ಸಾರುವ ಚಿಹ್ನೆಯಾದ ನಮ್ಮ ದೇಶದ ತ್ರಿವರ್ಣ ಧ್ವಜವನ್ನು ಸೃಷ್ಟಿಸಿದವರು ಪಿಂಗಳಿ ವೆಂಕಯ್ಯನವರಾಗಿದ್ದಾರೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಜೆ.ಆರ್ ನಗರದಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಜರುಗಿದ ‘ಪಿಂಗಳಿ ವೆಂಕಯ್ಯನವರ ೧೪೮ನೇ ಜನ್ಮದಿನಾಚರಣೆ’ಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಹಾಗೂ ರಾಷ್ಟçಧ್ವಜಕ್ಕೆ ಗೌರವ ಸಲ್ಲಿಸಿ ಮಾತನಾಡಿದರು.
ವೆಂಕಯ್ಯನವರು ಆಂಧ್ರಪ್ರದೇಶದ ಭಟ್ಲೆಪೆನ್ನುಮಾರು ಎಂಬಲ್ಲಿ ಆಗಷ್ಟ್ ೨, ೧೮೭೬ರಲ್ಲಿ ಜನಿಸಿದರು. ಸ್ವಾತಂತ್ರö್ಯ ಹೋರಾಟಗಾರರಾಗಿದ್ದು. ಭೂವಿಜ್ಞಾನಿ, ಪ್ರಾಧ್ಯಾಪಕರು, ಶಿಕ್ಷಣ ತಜ್ಞರಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ೧೯ನೇ ವಯಸ್ಸಿನಲ್ಲಿ ಬ್ರಿಟಿಷ್ ಸೇನೆಯಲ್ಲಿ ಸೈನಿಕರಾಗಿದ್ದಾಗ ಇವರು, ಬ್ರಿಟಿಷರ ಪರ ದಕ್ಷಣಿ ಆಫ್ರಿಕಾದಲ್ಲಿ ನಡೆ ಯುದ್ಧದಲ್ಲಿ ಪಾಲ್ಗೊಂಡಿದ್ದರು. ಆಗ ಅವರಿಗೆ ರಾಷ್ಟçಧ್ವಜದ ಮಹತ್ವ ಅರಿವಾಯಿತು. ಜುಲೈ ೨೨,೧೯೪೭ರಂದು ಅವರು ರೂಪಿಸಿದ ಭಾರತೀಯ ರಾಷ್ಟçಧ್ವಜವನ್ನು ಅಂಗೀಕರಿಸಲಾಯಿತು ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಶಿಕ್ಷಕಿ ನಿಲೊಫರ್ ಶೇಖ್, ಪ್ರಮುಖರಾದ ಸ್ನೇಹಾ, ಭೂಮಿಕಾ,ಬಸಮ್ಮ, ಲಕ್ಷಿö್ಮÃ ಸೇರಿದಂತೆ ಇನ್ನಿತರರಿದ್ದರು.