ಬಸವ ತತ್ವ ಪಾಲಿಸಲು ಕರೆ
ಜೇವರ್ಗಿ:ಆ.೨: ಬಸವ ತತ್ವ ಪಾಲಿಸಲು ಇಂದಿನ ಯುವ ಜನಾಂಗಕ್ಕೆ ತಿಳಿಸುವುದು ಅಗತ್ಯ ಇದೆ ಎಂದು ಉಪನ್ಯಾಶಕ ಗಣಪತಿ ಸಿಣ್ಣುರು ಹೇಳಿದರು. ಜಗದ್ಗುರು ಶ್ರೀ ತೋಂಟದಾರ್ಯ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ, ಬಸವ ಕೇಂದ್ರ ಜೇವರ್ಗಿ ಹಾಗೂ ಜಗದ್ಗುರು ಶ್ರೀ ತೋಂಟದಾರ್ಯ ಶಿಕ್ಷಣ ಸಂಸ್ಥೆಗಳು ಇವರ ಸಹಯೋಗದೊಂದಿಗೆ ಕಾರ್ಯಕ್ರಮವು ವಚನಗಳಲ್ಲಿ ವ್ಯಕ್ತಿತ್ವ ವಿಕಸನ ವಿಷಯವನ್ನು ಕೆ ವಿ ವಿ ಕಲಬುರಗಿಯ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಗಣಪತಿ ಸಿಣ್ಣೂರ ಅವರು ಅನುಭಾವ ನೀಡುವ ಮುಖಾಂತರ ಪೂಜ್ಯ ಶ್ರೀ ಕೋರಣೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ, ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಶಿವರಾಜ ಪಾಟೀಲ್ ರದ್ದೇವಾಡಗಿ, ಶ್ರೀ ಗೌಡಪ್ಪಗೌಡ ಪಾಟೀಲ್ ಆಂದೋಲ ರವರ ಉಪಸ್ಥಿತಿಯಲ್ಲಿ , ಈ ಕಾರ್ಯಕ್ರಮದ ರೂವಾರಿಗಳಾದ ಜೇವರ್ಗಿ ಬಸವ ಕೇಂದ್ರ ಅಧ್ಯಕ್ಷರಾದ ಶ್ರೀ ಶರಣಬಸವ ಕಲ್ಲಾ ಅಣ್ಣನವರು ಹಾಗೂ ಎಲ್ಲಾ ಪದಾಧಿಕಾರಿಗಳು ಇತ್ತೀಚೆಗೆ ರಾಜ್ಯ ಮಟ್ಟದ ಕಾಯಕರತ್ನ ಪ್ರಶಸ್ತಿ ಪಡೆದ ಹಿರಿಯರು, ಮಾರ್ಗದರ್ಶಕರು, ಬಸವಪರ ಚಿಂತಕರು ಶಿವಣಗೌಡ ಪಾಟೀಲ ಹಂಗರಗಿ ಅವರಿಗೆ ಸತ್ಕರಿಸಿ ಸನ್ಮಾನಿಸುವುದರ ಮುಖಾಂತರ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.ಈ ಸಂದರ್ಭದಲ್ಲಿ ಭಗವಂತರಾಯ ಬೆಣ್ಣೂರ ವಿಜಯಕುಮಾರ ಕಲ್ಲಾ ಸದಾನಂದ ಪಾಟೀಲ್ ಕಂಟೆಪ್ಪ ಹರವಾಳ ವೆಂಕಟರಾವ್ ಮುಜುಮದಾರ್ ಸಂಗನಗೌಡ ರದ್ದೇವಾಡಗಿ ಗುರುಲಿಂಗಪ್ಪಗೌಡ ಮಾಲಿಪಾಟೀಲ್ ಹಣಮಂತ ಶಹಾಬಾದ್ ಸಂಗಮೇಶ್ ಕೊಂಬಿನ್ ಈರಣ್ಣ ಬೂತಪುರ್ ಮಲಕನಗೌಡ ಹೆಗ್ಗಿನಾಳ ನಿಂಗಣ್ಣ ಹಳಿಮಾನಿ ವಿಜಯ್ ಕುಮಾರ್‌uಟಿಜeಜಿiಟಿeಜ ಕಲ್ಲಾ ಸೇರಿದಂತೆ ಅನೇಕ ಮುಖಂಡರು ಬಾಗವಸಿದ್ದರು. ಸುನಂದಾ ಕಲ್ಲಾ ನಿರೂಪಿಸಿದರು ಶರಣಬಸವ ಕಲ್ಲಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು