ಮೀಸಲಾತಿ ವರ್ಗೀಕರಣ ಐತಿಹಾಸಿಕ ತೀರ್ಪು
ಕಲಬುರಗಿ: ಆ.2:ಮೀಸಲಾತಿ ವರ್ಗೀ ಕರಣ ಸಂಬAಧ ಸುಪ್ರೀಂ ಕೋರ್ಟ ಮಹಾ ತೀರ್ಪು ನೀಡಿದೆ ಎಂದು ಬಿಜೆಪಿ ಮುಖಂಡ ಅನೀಲ ಡೊಂಗರಗಾAವ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಮೀಸಲಾತಿ ಪ್ರಯೋಜನಗಳಿಂದ ದೂರ ಉಳಿದ ಸಮುದಾಯಗಳಿಗೆ ಈ ತೀರ್ಪು ಸಹಾಯಕವಾಗಲಿದೆ.ಸಂವಿಧಾನದ 341ನೇ ವಿಧಿ ಅನ್ವಯ ರಾಜ್ಯಗಳು ಎಸ್ಸಿ ಪಟ್ಟಿಯನ್ನು ವರ್ಗೀಕರಣ ಮಾಡ ಬಹುದು ಎಂಬ ಸುಪ್ರೀಂ ಕೋರ್ಟ್ನ ತೀರ್ಪು ಶೋಷಿತ ಸಮುದಾಯಗಳಿಗೆ ಬಲ ಬಂದಿದೆ ಎಂದರು. ಎಸ್ಸಿಯಲ್ಲಿ ಮಾದಿಗ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ದ್ದರೂ ಮೀಸಲು ಕಲ್ಪಿಸುವ ವಿಷಯದಲ್ಲಿ ತಾರತಮ್ಯ ವಾಗುತ್ತಿತ್ತು. ನಿರೀಕ್ಷಿತ ಮಟ್ಟ ದಲ್ಲಿ ಇಂಥ ಅನೇಕ ಸಮುದಾಯಗಳಿಗೆ ಮೀಸಲು ಸಿಗುತ್ತಿರ ಇಲ್ಲ, ವರ್ಗೀಣಕರಣ ಮಾಡಿ ಜನಸಂಖ್ಯೆಗೆ ಅನುಗುಣವಾಗಿ ಮಾದಿಗ ಸಮುದಾಯಕ್ಕೆ ಮೀಸಲು ಸಿಗಬೇಕು ಎಂಬ ಬಹು ದಿನಗಳ ಹೋರಾಟಕ್ಕೆ ಈ ತೀರ್ಮ ಐತಿಹಾಸಿಕವಾಗಿದೆ ಎಂದು ಹೇಳಿದರು.
ಒಳ ಮೀಸಲಾತಿಗಾಗಿ ಕಳೆದ ಮೂರು ದಶಕಗಳಿಂದ ಹೋರಾಟ ನಡೆಯುತ್ತಿತ್ತು. ಪರಿಶಿಷ್ಟ ಜಾತಿಯಲ್ಲಿರುವ ಬಲಿಷ್ಟ ಮತ್ತು ಸಶಕ್ತ ಜಾತಿಗಳು ಹೆಚ್ಚಿನ ಪ್ರಮಾಣದಲ್ಲಿ ಮೀಸಲು ಕಬಳಿಸಿರುವುದು ಮೀಸಲಾತಿ ಹಂಚಿಕೆಯಲ್ಲಿ ಕಾಣುತ್ತಿತ್ತು. ಕೆಲವು ಶೋಷಿತ ಸಮುದಾಯಗಳು ಮೀಸಲಾತಿ ಪ್ರಯೋಜನದಿಂದ ದೂರ ಉಳಿದಿದ್ದು, ಮೀಸಲಾತಿ ಇರುವ ಜಾತಿಗಳಲ್ಲಿ ಆಸಮಾನತೆಗೆ ಒಳಗಾದವರಿಗೆ ಸಮಾನತೆ ಸಿಗಬೇಕೆಂದರೆ ಜನಸಂಖ್ಯೆಗೆ ?ನುಗುಣವಾಗಿ ಮೀಸಲಾತಿ ಬೇಕು.ಈ ಮೀಸಲಾತಿ ಸಮಾನ ಹಂಚಿಕೆಯಾಗಬೇಕಾದರೆ ಒಳಮೀಸಲಾತಿ ಬೇಕು. ಮೀಸಲಾತಿ ನ್ಯಾಯೋಚಿತ ಹಂಚಿಕೆ ಸಾಮಾಜಿಕ ನ್ಯಾಯದ ಭಾಗ. ಒಳ ಮೀಸಲಾತಿ ಎನ್ನುವುದು ಮೀಸಲಾತಿಯ ಮೂಲ ಆಶಯದ ವಿಸ್ತರಣೆಯಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿರುವುದು ಸ್ವಾಗತಾರ್ಹ ಎಂದರು.