ವಿಶ್ವ ಸ್ತನ್ಯಪಾನ ಸಪ್ತಾಹ
ಬೀದರ, ಆ.02: ದೇಶಾದ್ಯಂತ ಸ್ತನ್ಯಪಾನದ ಮಹತ್ವವನ್ನು ತಿಳಿಸಲು ಹಾಗೂ ಶಿಶುಗಳ ಮತ್ತು ತಾಯಂದಿರ ಆರೋಗ್ಯ ಸುಧಾರಣೆಗಾಗಿ ಸ್ತನ್ಯಪಾನವನ್ನು ಮುಂದುವರೆಸಲು, ಉತ್ತೇಜಿಸಲು ಮತ್ತು ಬೆಂಬಲಿಸಲು “ವಿಶ್ವ ಸ್ತನ್ಯಪಾನ ಸಪ್ತಾಹ” ವನ್ನು 2024 ಆಗಸ್ಟ್ 01 ರಿಂದ 07ನೇ ದಿನಾಂಕದವರೆಗೆ “ಕೊರತೆಗಳನ್ನು ಕೊನೆಗೊಳಿಸಿ ಸರ್ವರಿಗೂ ಸ್ತನ್ಯಪಾನದ ಬೆಂಬಲ ನೀಡಿ” ಎಂಬ ಈ ವರ್ಷದ ಘೋಷವಾಕ್ಯದೊಂದಿಗೆ ಎಲ್ಲೆಡೆ ಜಾಗತಿಕ ಅಭಿಯಾನವಾಗಿ ಆಚರಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಧ್ಯಾನೇಶ್ವರ ನೀರಗುಡೆ ಹೇಳಿದರು.
ಅವರು ಗುರುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೀದರ ವತಿಯಿಂದ ತಾಯಿ ಮತ್ತು ಮಕ್ಕಳ ಆರೈಕೆ ಕೇಂದ್ರ ನೂರು ಹಾಸಿಗೆ ಆಸ್ಪತ್ರೆ ಬೀದರನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸ್ತನ್ಯಪಾನ ಸಪ್ತಾಹದ ಬಗ್ಗೆ ಎಲ್ಲಾ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರು ಆರೋಗ್ಯ ಸಂಸ್ಥೆಗಳ ಉಪಕೇಂದ್ರಗಳ ಗುಂಪು ಸಭೆಗಳಲ್ಲಿ, ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಪೌಷ್ಠಿಕ ಸಮಿತಿ ಸಭೆಯಲ್ಲಿ ಸಭೆಗಳಲ್ಲಿ ಸ್ತನ್ಯಪಾನದ ಮಹತ್ವದ ಬಗ್ಗೆ ತಾಯಂದಿರು ಹಾಗೂ ಗರ್ಭಿಣಿಯರು ಮಾಹಿತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ. ಎಲ್ಲಾ ಗರ್ಭಿಣಿ ಮತ್ತು ಬಾಣಂತಿಯರಿಗೆ ಎದೆಹಾಲಿನ ಮಹತ್ವ ಕುರಿತು ಅರಿವು ಮೂಡಿಸಲಾಗುವುದು
ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ|| ಶಿವಶಂಕರ.ಬಿ ಮಾತನಾಡಿ, ಜಿಲ್ಲೆಯ ಎಲ್ಲಾ ಆರೋಗ್ಯ ಸಂಸ್ಥೆಯ ಅಂದರೆ ಸಾರ್ವಜನಿಕ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಎಸ್.ಎನ್.ಸಿ.ಯು, ಎಸ್.ಬಿ.ಎಸ್.ಯು, ಎನ್.ಆರ್.ಸಿ, ಪಿ.ಎನ್.ಸಿ.ಯು, ಮಕ್ಕಳವಾರ್ಡ್ ಕಾರ್ಯತಂತ್ರದ ಸ್ಥಳಗಳಲ್ಲಿ ವಿಶೇಷವಾಗಿ ಸ್ತನ್ಯಪಾನಕ್ಕಾಗಿ ಒಂದು ಕೊಠಡಿ ಮೀಸಲಿದೆ ಎಂದರು.
ಬೀದರನ ತಾಯಿ ಮತ್ತು ಮಕ್ಕಳ ಆರೈಕೆ ಕೇಂದ್ರ ನೂರು ಹಾಸಿಗೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ|| ಸೋಹೆಲ್ ಮಾತನಾಡಿ, ಮಗು ಜನಿಸಿದ ಒಂದು ಗಂಟೆಯೊಳಗೆ ಸ್ತನ್ಯಪಾನ ಮಾಡಿಸುವುದು ಕೊಲೊಸ್ಟೊçÃಮ್ ಸೇವನೆಯ ಪ್ರಾಮುಖ್ಯತೆ ಹಾಗೂ ಮೊದಲ ಆರು ತಿಂಗಳ ವರೆಗೆ ಕಡ್ಡಾಯ ಸ್ತನ್ಯಪಾನ ಮಾಡುವುದರಿಂದ ಆರಂಭಿಕ ಬಾಲ್ಯದ ಬೆಳವಣಿಗೆ ಹೆಚ್ಚಿಸಲು ಮತ್ತು ಪೌಷ್ಟಿಕಾಂಶವನ್ನು ಸುಧಾರಿಸಲು ಹಾಗೂ ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡಲು ಸ್ತನ್ಯಪಾನ ಮಾಡಿಸುವುದು ಬಹಳ ಮುಖ್ಯವಾಗಿರುತ್ತದೆ. ಎಲ್ಲರೂ ಎಚ್ಚೆತ್ತುಕೊಂಡು ಎದೆಹಾಲಿನ ಮಹತ್ವದ ಬಗ್ಗೆ ಅರಿತುಕೊಂಡು ಎಲ್ಲಾ ತಾಯಂದಿರು ಹಾಗೂ ಗರ್ಭಿಣಿಯರು ಕನಿಷ್ಟ ಎರಡು ವರ್ಷದವರೆಗೆ ಸ್ತನ್ಯಪಾನ ಮಾಡಿಸುವಂತೆ ಹೇಳಿದರು.
ಈ ಕಾರ್ಯಕ್ರಮದಲ್ಲಿ ಡಾ|| ಸಂಗರೆಡ್ಡಿ ತಾಲೂಕಾ ಆರೋಗ್ಯ ಅಧಿಕಾರಿಗಳು ಬೀದರ,. ಅನೀತಾ ಪ್ರ.ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು, ಭಾಗ್ಯಲಕ್ಷಿö?? ಪ್ರ.ಡಿ.ಎನ್.ಓ. ಶಿವಶಂಕರ ಬೇಮಳಗಿ ಡಿ.ಪಿ.ಸಿ., ಓಂಕಾರ ಮಲ್ಲಿಗೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ಬೀದರ, ಸಂಗೀತಾ ಡಿ.ಸಿ.ಎಂ, ಅನಿತಾ ಪಿ.ಹೆಚ್.ಸಿ.ಓ, ರಜನಿಕಾ ಪಿ.ಹೆಚ್.ಸಿ.ಓ ಸೇರಿದಂತೆ ಇತರರು ಉಪಸ್ಥಿತರಿದ್ದರು.