ಔಷಧದ ಮೇಲೆ ಅವಲಂಬಿತರಾಗದೆ, ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಿ: ಡಾ. ರಾಜಶೇಖರ್
ಬೀದರ: ಆ.2:ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ರೋಗ, ಯಕೃತ್ತಿನ ಕಾಯಿಲೆಗಳಿಗೆ ಬದಲಾದ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯೇ ಕಾರಣ. ಆದ್ದರಿಂದ ಜನರು ಕೇವಲ ಔಷದ ಮೇಲೆ ಅವಲಂಬಿತರಾಗಬಾರದು ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು.ದಿನನಿತ್ಯ ಯೋಗ, ನಡಿಗೆ, ಪ್ರಾಣಾಯಾಮ, ಧ್ಯಾನ ಮುಂತಾದವುಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡುಹೋದರೆ,ಇAತಹ ರೋಗಗಳಿಂದ ದೂರವಿರಬಹುದು ಎಂದು ಖ್ಯಾತ ಹೃದಯ ರೋಗ ತಜ್ಞರಾದ ಡಾ. ರಾಜಶೇಖರ ಪಾಟೀಲ್‌ರವರು ಜನತೆಗೆ ಕರೆ ನೀಡಿದರು. ಅವರು ಇಂದು ಬೀದರನ ಜೆ.ಪಿ. ನಗರದಲ್ಲಿರುವ ದಿ.ಕಲ್ಲಪ್ಪ ಚಿದ್ರಿಯವರ ಐವತ್ತನೇ ಪುಣ್ಯ ಸ್ಮರಣೆ ನಿಮಿತ್ಯ ಆಯೋಜಿ ಸಿರುವ””ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಉದ್ಘಾಟಕರಾಗಿ ಮಾತನಾಡಿದರು. ಯಾವುದೇ ಕಾಯಿಲೆಗೆ ತುತ್ತಾಗಿ ಆಸ್ಪತ್ರೆಗೆ ಬಂದಾಗ, ವೈದ್ಯರು ನೀಡಿದಂತಹ ಚಿಕಿ ತ್ಸೆ, ಔಷದಗಳ್ಳೋoದಿಗೆ ಅವರ ಸಲಹೆ ಸೂಚನೆ ಗಳನ್ನು ಚಾಚು ತಪ್ಪದೆ ಪಾಲಿಸಿದಾಗ ಮಾತ್ರ ತಮ್ಮ ಆರೋಗ್ಯ ಸುರಕ್ಷಿತ ವಾಗಿಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎಂದು ನುಡಿದರು. ಮುಖ್ಯ ಅತಿಥಿಗಳಾಗಿ ಮಾತನಾಡಿದ ಖ್ಯಾತ ಶಸ್ತ್ರ ಚಿಕಿತ್ಸಕರಾದ ಡಾ. ವೈಜೀನಾಥ್ ತುಗಾo ವೆಯವರು ಮಾತನಾಡಿ, ಆರೋಗ್ಯವೇ ಮಹಾಭಾಗ್ಯ. ಎಲ್ಲರೂ ತಮ್ಮ ಆರೋಗ್ಯದ ಕಡೆ ಗಮನ ಕೊಡಬೇಕು. ಬಡಜನರ ಉಪಯೋಗ ಕ್ಕಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸುತ್ತಿರುವುದು ಶ್ಲಾಘ ನೀಯವಾಗಿದೆ ಎಂದು ನುಡಿದರು. ಖ್ಯಾತ ಇಎನ್‌ಟಿ ಶಸ್ತ್ರ ಚಿಕಿತ್ಸಕ ರಾದ ಡಾ. ಸುಧೀರ್ ಕಾಮ ತಿಕರ್ ರವರು ಮಾತನಾಡಿ, ಇಂದಿನ ಯುವಕರು ಬುಕ್ಕ ತಂಬಾಕು ಸೇವನೆಗಳಿಂದ ಗಂಟಲು ಕ್ಯಾನ್ಸರ್, ಕರುಳು ಬೇನೆ, ಯಕ್ರತ್ತಿನ ತೊಂದರೆ, ಕ್ಷಯ ರೋಗ, ಹೆಚ್ ಐ ವಿ ಏಡ್ಸ್, ನಂತಹ ಮಾರುಣಂತಿಕ ರೋಗ ಗಳಿಗೆ ತುತ್ತಾಗುತ್ತಿರುವುದು ಖೆದಕರ ಸಂಗತಿಯಾಗಿದ್ದು ಆದ್ದರಿಂದ ಅವರು ಅಂತಹ ದುಶ್ಚಟಗಳಿಂದ ದೂರವಿರ ಬೇಕೆಂದು ಕಿವಿ ಮಾತು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಮುಖರಾದ ಡಾ. ಪ್ರಭುಶೆಟ್ಟಿ ಚಿದ್ರಿ ಯವರು ಮಾತನಾಡಿ, ಇಂದಿನ ಯಾಂತ್ರಿಕ ಜೀವನದಲ್ಲಿ ಗ್ರಹಿಣಿಯರು ಮನೆಯಲ್ಲಿ ಅಡುಗೆ ಮಾಡುವ ಅಭ್ಯಾಸವನ್ನು ಕಡಿಮೆ ಮಾಡಿ, ವಾರದ ನಾಲ್ಕು ದಿನಗಳನ್ನು ಹೋಟೆಲ್ ನಲ್ಲಿ ಊಟ ಮಾಡುವ ಮೂಲಕ ತಮ್ಮ ಹಾಗೂ ತಮ್ಮ ಕುಟುಂಬದ ಆರೋಗ್ಯವನ್ನು ಕೆಡಿಸಿ ಕೊಳ್ಳುತ್ತಿದ್ದಾರೆ. ಆದ್ದರಿಂದ ಮನೆಯ ಊಟಕ್ಕೆ ಪ್ರಾಧಾ ನ್ಯತೆ ನೀಡಬೇಕೆಂದು ಅವರು ಮಹಿಳೆಯರಿಗೆ ಕರೆ ನೀಡಿದರು. ನಿವೃತ್ತ ಅಧಿಕಾರಿ ವೀರಭದ್ರಪ್ಪ ಉಪ್ಪಿನ್ ರವರು ಸ್ವಾಗತ ಗೀತೆ ಹಾಡಿದರು. ಜ್ಯೋತಿ ಬೆಳಗಿಸಿ, ಸಸಿಗೆ ನೀರುಣಿ ಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಲಾಯಿತು. ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾದ ಅರವಿಂದ ಕುಲ ಕರ್ಣಿ ಯವರು, ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂ ಪಿಸಿದರು. ಮುಕುಂದ ಹುಂ ಡೇಕರ್ ರವರು ಪ್ರಾಸ್ತಾವಿಕ ವಾಗಿ ಮಾತನಾಡಿದರು. ಸಂಜೀವಕುಮಾರ್ ಬುಯ್ಯ ರವರು ಶಿಬಿರವನ್ನು ಯಶಸ್ವಿಯಾಗಿ ಆಯೋಜಿ ಸಿದರು.ಡಾ. ದೀಪಾ ನಂದಿ ಯವರು ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ದ್ದರು. ಸುನಿಲ್ ಚಿದ್ರಿ, ಪ್ರವೀಣ್ ಗುರುಮಿಟಕಲ್,, ಭದ್ರಯ್ಯ ಸ್ವಾಮಿ, ಶಾಂತ ಕುಮಾರ ದೊಡ್ಡಿ, ಸೈಫ್ ಅಲಿ, ವೆಂಕಟರಾವ್ ಕುಲಕರ್ಣಿ, ಡಾ. ಸುಶಾಂತ್ ಚಿದ್ರಿ, ಉದಯ ಉದಗಿರೆ, ಆದರ್ಶ್, ಗೌರೀಶ್, ಶೌಕತ್ ಅಲಿ, ಗಂಗುಲಿ, ಭವಾನಿ, ಚಂದು ಮುರ್ಗೆ, ಪಕ್ಕಪ್ಪ ಕಾಡವಾದ, ಎಲ್ಲಪ್ಪ ಮುಂತಾದವರು ಭಾಗವಹಿ ಸಿದ್ದರು. 165 ಜನರ ಮಧು ಮೇಹ, ಬಿಪಿ, ಈಸಿಜಿ, ಡೀ ಎಂಐ, ಎಚ್ ಐ ವಿ ಮುಂತಾದ ತಪಾಸಣೆ ಗಳನ್ನು ಮಾಡಿ, ಉಚಿತ ಔಷಧಗಳನ್ನು ವಿತರಿಸಲಾಯಿತು.