ಪ್ರಾಚಾರ್ಯ ಕಾದೆಪುರೆಗೆ ಆತ್ಮೀಯ ಬೀಳ್ಕೊಡುಗೆ
ಭಾಲ್ಕಿ:ಆ.2: ಪಟ್ಟಣದ ವೃಂದಾವನ ಹೋಟಲ್ ಸಭಾಂಗಣದಲ್ಲಿ ಶಿವಾಜಿ ಪ್ರಥಮ ಕಾಲೇಜಿನ ವಯೋನಿವೃತ್ತ ಪ್ರಾಚಾರ್ಯ ಶಾಮರಾವ ಕಾದೆಪುರೆ ದಂಪತಿಗಳಿಗೆ ಕಾಲೇಜಿನ ಸಿಬ್ಬಂದಿ ವರ್ಗದವರು ಹೃದಯಸ್ಪರ್ಶಿ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಂಡಿದ್ದರು.
ಈ ಸಂದರ್ಭದಲ್ಲಿ ಸುನೀತಾ ಶಾಮರಾವ ಕಾದೆಪುರೆ ದಂಪತಿಗಳಿಗೆ ಅಭಿಮಾನಿ ಬಳಗದವರು ಮೈಸೂರ ಪೇಟಾ,ಶಾಲು,ಮಾಲೆಯೊಂದಿಗೆ ಸನ್ಮಾನಿಸಿ ಗೌರವಿಸಿದರು.
ಬಳಿಕ ಮಾತನಾಡಿದ ಎಮ್.ಆರ್.ಎ.ಪ ಪೂ ಕಾಲೇಜಿನ ಪ್ರಾಚಾರ್ಯ ಅಶೋಕ ರಾಜೋಳೆ ನಿವೃತ್ತ ಪ್ರಾಚಾರ್ಯ ಶಾಮರಾವ ಕಾದೆಪುರೆ ಅತ್ಯಂತ ಸ್ನೇಹ ಜೀವಿಗಳಾಗಿ ಸುದೀರ್ಘ ಅವಧಿಗೆ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ,ಆಡಳಿತ ಮಂಡಳಿಯವರ,ಇಲಾಖೆ ಮೇಲಾಧಿಕಾರಿಗಳ ಹಾಗೂ ಸಿಬ್ಬಂದಿಯವರ,ಪಾಲಕರ ಮತ್ತು ವಿದ್ಯಾರ್ಥಿಗಳ ಹೃದಯ ಗೆದ್ದಿದರು.ಅವರು ಎಂದೂ ಯಾರಿಗೂ ಆಕ್ರೋಶನಿಂದ ಮಾತನಾಡಿದವರಲ್ಲ.ವಿನಯದಿಂದ ಮಾತನಾಡಿ ಕರ್ತವ್ಯ ನಿರ್ವಹಿಸಿ ಎಲ್ಲರಿಂದ ಬೇಷ ಎನಿಸಿಕೊಂಡಿದ್ದರು.ದೂರದೃಷ್ಠಾವಶಾತ ಅವರು ನಿವೃತ್ತಿ ಹೊಂದುವವರೆಗೂ ಅವರ ಕಾಲೇಜು ಅನುದಾನಕ್ಕೊಳಪಡಲಿಲ್ಲ.ಸರ್ಕಾರಿ ವೇತನವಿಲ್ಲದೆ ಅನೇಕರು ನಿವೃತ್ತಿಯಾಗುತ್ತಿರುವುದು ಖೇದಕರ ಸಂಗತಿಯಾಗಿದೆ ಎಂದು ಹೇಳಿ,ಅವರ ನಿವೃತ್ತಿ ಜೀವನದಲ್ಲಿ ಭಗವಂತ ಆಯೂರಾರೂಗ್ಯ ,ಸುಖ,ಶಾಂತಿ,ನೆಮ್ಮದಿ ನೀಡಲಿ ಎಂದು ಶುಭ ಹಾರೈಸಿದರು.
ಶಿವಾಜಿ ಪಪೂ ಕಾಲೇಜಿನ ಪ್ರಾಚಾರ್ಯ ಚಂದ್ರಕಾAತ ಬಿರಾದಾರ ಅವರು ಮಾತನಾಡಿ,ಪ್ರಾಚಾರ್ಯ ಕಾದೆಪುರೆ ಅವರು ಯಾವಾಗಲೂ ಎಲ್ಲರೊಂದಿಗೆ ಹಸನ್ಮೂಖಿಯಾಗಿ ಕಾಲ ಕಳೆದವರು.ತಮ್ಮ ಕರ್ತವ್ಯವನ್ನು ಅತ್ಯಂತ ದಕ್ಷತೆಯಿಂದ ನಿರ್ವಹಿಸುತ್ತಿದ್ದರು ಎಂದು ಹೇಳಿ ,ಅವರ ಕಾರ್ಯ ಕ್ಷಮತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಅವರ ವಿಶ್ರಾಂತ ಜೀವನ ಸುಖಮಯವಾಗಿ ಸಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಿಕ್ಷಣ ಪ್ರಸಾರಕ ಮಂಡಳ ನಿರ್ದೇಶಕ ಪ್ರತಾಪ ಪಾಟೀಲ,ಅಶೋಕ ಸಾವಳೆ,ಉಮಾಕಾಂತ ಕೋಣಜಿವಾಲೆ,ಬಾಲಾಜಿ ತಾಡಮಲ್ಲೆ,ವಿಲಾಸ ನಿಟ್ಟೂರೆ, ಲಕ್ಷö್ಮಣ ಕಾರಾಮುಂಗೆ,ಜೈಹಿAದ ಬಿರಾದಾರ,ಪಂಡರಿನಾಥ ಪಾಟೀಲ ,ಸುಖದೇವ ಬಿರಾದಾರ ,ತುಕಾರಾಮ ಮೋರೆ,ನೀಲಕಂಠ ಕಾಳೆ,ವೆಂಕಟರಾವ ಪಾಟೀಲ,ವಿಠಲರಾವ ಕಾದೆಪೂರೆ,ಪದ್ಮಾಕರ ಕಾದೆಪುರೆ,ಸುನೀತಾ ಕಾದೆಪುರೆ,ವಿನೋದ ಕಾದೆಪುರೆ,ಪ್ರಾಚಾರ್ಯರಾದ ರಾಜಕುಮಾರ ಹಲಕುಡೆ,ವಿಷ್ಣು ಕೋಟೆ,ಗೌತಮ ಶಿಂದೆ ಮತ್ತು ಅಶೋಕ ಪಾಟೀಲ ಹುಪಳಾ,ದಯಾನಂದ ಹಿರಾನಾಯಕ,ಬಾಬುರಾವ ಬೊರಾಳೆ,ಮಾಣಿಕ ನಾಗಗೊಂಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.