ವಾಡಿ ಪುರಸಭೆ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಪ್ರತಿಭಟನೆ
ವಾಡಿ :ಆ.2: ಪಟ್ಟಣದ ಜನರ ಸಂಕಷ್ಟಕ್ಕೆ ಸ್ಪಂದಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಎಂದು ಬಿಜೆಪಿ ಮುಖಂಡರು ಪುರಸಭೆ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು.
ಪ್ರತಿಭಟನೆಯ ಉದ್ದೇಶಿಸಿ ಪಕ್ಷದ ಮುಖಂಡರಾದ ರಮೇಶ ಕಾರಬಾರಿ ಮಾತನಾಡಿ ಸುಮಾರು ಇಪ್ಪತ್ತು ವರ್ಷಗಳಿಂದ ಇರುವ ಪುರಸಭೆ ಜನಸಾಮಾನ್ಯರಿಗೆ ಮೂಲಭೂತ ಸೌಕರ್ಯಗಳನ್ನು ಕೊಡದೇ ಇರುವುದು ದುರಾದೃಷ್ಟ ವಾರ್ಡ್ ಸಂಖ್ಯೆ ಒಂದು ಸೇರಿದಂತೆ ಬಹುತೇಕ ಕಡೆ ನಮಗೆ ವಾಸಿಸುವ ಹಕ್ಕು ಪತ್ರ ಕೂಡಾ ಕೊಟ್ಟಿಲ್ಲ ನಾವು ತೆರಗೆ ಕೊಡಲು ಸಿದ್ದರಿದ್ದರು ಅಧಿಕಾರಿಗಳ ಮುಂದೆ ಬರುತ್ತಿಲ್ಲಾ ಇಂತಹ ಅಧಿಕಾರಿಗಳಿದ್ದರೆ ಅಭಿವೃದ್ಧಿ ಹೇಗೆ ಸಾಧ್ಯ ಎಂದರು.
ಮುAದೆ ಇದನ್ನೇ ಮುಂದುವರೆಸಿದರೆ ನಾವು ಉಗ್ರ ಹೋರಾಟದ ಮೂಲಕ ವಾಡಿ ಬಂದ್ ಗೆ ಕರೆ ನೀಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಧರಣಿ ಕೊಡುತ್ತೇವೆ ಎಂದ ಹೇಳಿದರು.
ಈ ವೇಳೆ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ ಪಟ್ಟಣವು ಸುಮಾರು ಐವತ್ತು ಸಾವಿರ ಜನಸಂಖ್ಯೆ ಹೊಂದಿದೆ,
ಇಲ್ಲಿ ಪ್ರಖ್ಯಾತ ಎಸಿಸಿ(ಆದಾನಿ) ಸಿಮೆಂಟ್ ಹಾಗೂ ಬೃಹತ್ ರೈಲ್ವೆ ನಿಲ್ದಾಣ ಕೂಡಾ ಇದ್ದರು, ಜನರು ಜೀವನ ಸಾಗಾಟಕ್ಕೆ ಸುಮಾರು ವರ್ಷಗಳಿಂದ ಹರಸಾಹಸ ಪಡುತ್ತಿದ್ದಾರೆ.
ನೀರು ಮೂರುನಾಲ್ಕು ದಿನಗಳಿಗೊಮ್ಮೆ,ಅದು ರಾಡಿ ನೀರು, ಚರಂಡಿ ನೀರು ರಸ್ತೆ ಮತ್ತು ಮನೆಯೊಳಗೆ,
ಅಸಮರ್ಪಕ ರಸ್ತೆ ಮತ್ತು ಬಿದಿ ದೀಪಗಳು,ಹಂದಿ ನಾಯಿಗಳ ಕಾಟಗಳ ಜೊತೆ ಕಳ್ಳತನ ಹೆಚ್ಚಾಗಿರುವುದು,ಬಸ್ ನಿಲ್ದಾಣ ಇಲ್ಲದೆ ಇರುವುದರಿಂದ ಸಮಸ್ಯೆಗಳ ಆಗರವಾದ ಪಟ್ಟಣವಾಗಿದೆ.
ಎಸಿಸಿಯ ಪರಿಸರ ಮಾಲಿನ್ಯ ದಿಂದ ವೃದ್ಧರು, ಮಕ್ಕಳು ಸೇರಿದಂತೆ ಎಲ್ಲರೂ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಹಾಗೂ ಈ ಕಂಪನಿ ಸ್ಥಳೀಯರಿಗೆ ಉದ್ಯೋಗ ನೀಡದೆ ಯುವ ಸಮುದಾಯವನ್ನು ಮಾನಸಿಕವಾಗಿ ಹಿಂಸೆಗೆ ಒಡ್ಡುತ್ತಿದೆ ಸರ್ಕಾರದ ಯಾವುದೇ ನಿಯಮ ಪಾಲಿಸುತ್ತಿಲ್ಲ. ಇದನ್ನೆಲ್ಲಾ ಸರಿದೂಗಿಸಲು ಇರುವ ಇಲ್ಲಿನ ಪುರಸಭೆಯಲ್ಲಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿರುವುದರಿಂದ ಸಾಮಾನ್ಯ ಸಾರ್ವಜನಿಕ ಸವಲತ್ತುಗಳಿಲ್ಲದೆ ಜನರ ಬದುಕು ದುಸ್ತರವಾಗಿದೆ.
ಇದರ ಬಗ್ಗೆ ಸಾಕಷ್ಟು ಸಲ ಜಿಲ್ಲಾ ಅಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜನ ವಾಗಿಲ್ಲ ಎಂದರು.
ನಮ್ಮ ಬೇಡಿಕೆಗಳಾದ ಶುದ್ಧ ನೀರು ಪೂರೈಕೆ ಜೊತೆಗೆ ಪ್ರತಿ ದಿನ ನೀರು ಸರಬರಾಜು ಮಾಡುವುದು.
ಹತ್ತು ಹದಿನೈದು ವರ್ಷಗಳಿಂದ ಠಿಕಾಣಿ ಹೊಡಿ ಭ್ರಷ್ಟಾಚಾರದಲ್ಲಿ ತೋಡಗಿದವರ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮಕೈಗೊಳ್ಳುವುದು.
ಪಟ್ಟಣದಲ್ಲಿ ಮಿತಿಮೀರಿದ ಪರಿಸರ ಮಾಲಿನ್ಯಕ್ಕೆ ಕಡಿವಾಣ ಹಾಕಿ ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಕೈಗೊಳ್ಳುವುದು.
ವಾರ್ಡ್ ನಂ 01 ಮತ್ತು 23ರು ಸೇರಿದಂತೆ ಕೆಲವು ವಾರ್ಡಗಳಲ್ಲಿ ವಾಸಿಸುವ ಜನರಿಗೆ ಹಕ್ಕು ಪತ್ರ ಇರುವುದಿಲ್ಲ ಅದನ್ನು ವಿತರಿಸುವುದು.
ತ್ಯಾಜ್ಯ ಸಂಸ್ಕರಣಾ ಘಟಕದ ನಿರ್ವಹಣೆ ಮಾಡಿ ಪರಿಸರ ಸಂರಕ್ಷಣೆಗೆ ಮಾಡುವುದು ಮತ್ತು ಎಲ್ಲಾ ವಾರ್ಡ್ ಸಸಿ ನೆಟ್ಟು ಪೋಷಿಸುವುದು.
ಸಾರ್ವಜನಿಕ ಶೌಚಾಲಯ ಮತ್ತು ಬಸ್ ನಿಲ್ದಾಣ ನಿರ್ಮಾಣಕ್ಕೆ ತಕ್ಷಣ ಮುಂದಾಗುವುದು.
ತರಕಾರಿ ಮತ್ತು ಮಾಂಸ ಕ್ಕೆ ಪ್ರತ್ಯೇಕ ಮಾರುಕಟ್ಟೆ ಒದಗಿಸಿ,ಅಕ್ರಮ ಕಸಾಯಿಖನೆಗಳ ವಿರುದ್ಧ ಕ್ರಮಕೈಗೊಳ್ಳುವುದು.
ಪುರಸಭೆಯಲ್ಲಿ ಮತ್ತು ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರ ಅಳವಡಿಸುವುದು. ಇವುಗಳನ್ನು ತಕ್ಷಣ ಕಾರ್ಯರೂಪಕ್ಕೆ ತರಬೇಕು ಎಂದು ಮಾನ್ಯ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಚಿತ್ತಾಪುರ ತಾಲೂಕಿನ ತಹಶಿಲ್ದಾರರಾದ ಅಂಬರೀಶ ಬಿರಾದಾರ ಅವರಿಗೆ ಸಲ್ಲಿಸಿದರು.
ಶಕ್ತಿ ಕೇಂದ್ರದ ಉಪಾಧ್ಯಕ್ಷ ರಿಚರ್ಡ್ ಮಾರೆಡ್ಡಿ ವಾರ್ಡ್ ಸಂಖ್ಯೆ 11,12ರಲ್ಲಿನ ಚರಂಡಿ ಕಾಲುವೆಯ ದುರಸ್ತಿಗೆ ಆಗ್ರಹಿಸಿದರು.
ಈ ಸಂಧರ್ಭದಲ್ಲಿ ತಾಲ್ಲೂಕ ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ,ವಾಡಿ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ,ಪ್ರಧಾನ ಕಾರ್ಯದರ್ಶಿ ರವಿ ನಾಯಕ,
ಎಸ್ ಸಿ ಮೂರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ್,
ಯುವ ಮೂರ್ಚಾ ಅಧ್ಯಕ್ಷ ಭಾಗಣ್ಣ ದೊರೆ,ಪಕ್ಷದ ಹಿರಿಯರಾದ ರಮೇಶ ಕಾರಬಾರಿ,ಗಿರಿಮಲ್ಲಪ್ಪ ಕಟ್ಟಿಮನಿ,ತುಕರಾಮ ರಾಠೋಡ,ಕಿಶನ ನಾಯಕ,
ಮುಖಂಡರಾದ ಅಶೋಕ ಪವಾರ,ಕಿಶನ ಜಾಧವ, ಅಂಬದಾಸ ಜಾಧವ,ಪ್ರಕಾಶ ಪುಜಾರಿ,ರಿಚರ್ಡ್ ಮಾರೆಡ್ಡಿ,
ಅಶೋಕ ರಾಠೋಡ,
ದತ್ತಾ ಖೈರೆ, ಸನ್ನಿ ವಾಲಿಯ,ಪ್ರೇಮ ರಾಠೋಡ, ಜಯಂತ ಪವಾರ,ಮಲ್ಲಿಕಾರ್ಜುನ ಸಾತಖೇಡ, ಕುಮಾರ ಜಾಧವ, ರಮೇಶ ಜಾಧವ, ನೆಹರು ಪವಾರ,ದಾಸ ಸೈಮನ್,ಹೀರಾ ನಾಯಕ, ಜಾಧವ, ವಿಶ್ವ ತಳವಾರ, ನಿತಿನ್ ಜಾಧವ, ಬಸವರಾಜ ಮರತೂರ,ವಿಜಯ ಪವಾರ,
ನಾಗರಾಜ ಗಡದೆ, ಮಲ್ಲಿಕಾರ್ಜುನ ಮೊರೆ,ಲಖನ ಪವಾರ,ಸೀತಾರಾಮ ರಾಠೋಡ, ಸಿದ್ದೇಶ್ವರ ಚೊಪಡೆ, ರಾವುಲ ದಹಿಹಂಡೆ, ಮಹಾಂತೇಶ ಬಿರಾದಾರ, ಬಾಳು ಸಾಠೆ,ಹಣಮಂತ ಕೆಲ್ಲೂರ,ಚಂದ್ರಾಮ ರಾಜೊಳ್ಳಿ,ಪರಮೇಶ್ವರ ಚೊಪಡೆ, ಯಂಕಮ್ಮ ಗೌಡಗಾಂವ, ನಿರ್ಮಲ ಇಂಡಿ,ಅನ್ನಪೂರ್ಣ ದೊಡ್ಡಮನಿ ಸೇರಿದಂತೆ ಇತರರು ಇದ್ದರು.